ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಮನೆಗಳ ಸಮೀಕ್ಷೆಗೆ ‘ಟ್ರಾಯ್’ ಸಲಹೆ

ವಾಹಿನಿಗಳ ಟಿಆರ್‌ಪಿ ನಿಗದಿ
Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ವಾಹಿನಿಗಳ ಪ್ರಸಾರ ಮಟ್ಟವನ್ನು (ಟಿಆರ್‌ಪಿ) ನಿಗದಿಪಡಿಸುವಾಗ ಹೆಚ್ಚು ಮನೆಗಳ ಸಮೀಕ್ಷೆ ನಡೆಸಿ, ಅಲ್ಲಿನ ವೀಕ್ಷಕರ ಸಂಖ್ಯೆ ಆಧರಿಸಿಯೇ  ಟಿವಿ ವೀಕ್ಷಕರ ಪ್ರಮಾಣ ಸೂಚ್ಯಂಕ ಏಜೆನ್ಸಿಗಳು ಕಾರ್ಯ ನಿರ್ವಹಿಸಬೇಕು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಸಲಹೆ ಮಾಡಿದೆ.

ಏಜೆನ್ಸಿಗಳು ತಮಗೆ ಬೇಕಾದ ಪ್ರಮಾಣದಲ್ಲಷ್ಟೇ ಮನೆಗಳ ಸಮೀಕ್ಷೆ ನಡೆಸದೇ, ಹೆಚ್ಚು ಪ್ರಮಾಣದಲ್ಲಿ ಮನೆಗಳ ಸಮೀಕ್ಷೆ ನಡೆಸಿ, ಅದರ ಆಧಾರದಲ್ಲಿ ವೀಕ್ಷಕರ ಪ್ರಮಾಣ ನಿರ್ಧರಿಸಬೇಕು ಎಂದು ಟ್ರಾಯ್‌ ತನ್ನ ಇತ್ತೀಚಿನ ವರದಿಯಲ್ಲಿ ಶಿಫಾರಸು ಮಾಡಿದೆ.

ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಬದಲಾವಣೆ ಆಗುತ್ತಿದ್ದು, ಪ್ರತಿವರ್ಷ ಶೇಕಡಾ 25ರಷ್ಟು ಏರಿಳಿತ ಕಂಡುಬರುತ್ತಿದೆ. ಹಾಗಾಗಿ, ನಿರ್ದಿಷ್ಟ ಪ್ರದೇಶದ ಕೆಲವೇ ವೀಕ್ಷಕರ ಸಮೀಕ್ಷೆಯನ್ನಷ್ಟೇ ಮಾಡದೇ, ಬೃಹತ್ ಸಂಖ್ಯೆಯ ವೀಕ್ಷಕರ ಸಮೀಕ್ಷೆ ಅತ್ಯಗತ್ಯ ಎಂದು ವರದಿಯಲ್ಲಿ ಹೇಳಲಾಗಿದೆ.

ಒಂದೇ ಪ್ರದೇಶದ ಕೆಲ ಮನೆಗಳಲ್ಲಷ್ಟೇ ವೀಕ್ಷಕರ ಸಮೀಕ್ಷೆ ನಡೆಸಿ ವರದಿ ನೀಡುವುದು ಸರಿಯಲ್ಲ. ಬದಲಾಗಿ ಒಂದೇ ಪ್ರದೇಶದಲ್ಲಿ ಹಲವು ಮನೆಗಳಲ್ಲಿ ಸಮೀಕ್ಷೆ ನಡೆಸಿ ಅದರ ಆಧಾರದಲ್ಲಿ ವರದಿ ನೀಡಬೇಕು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT