ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಯೊಳಗೆ 12 ಕೆ.ಜಿ. ಮಾಂಸದ ಗಡ್ಡೆ!

Last Updated 7 ಡಿಸೆಂಬರ್ 2012, 5:58 IST
ಅಕ್ಷರ ಗಾತ್ರ

ಬೀದರ್: ವ್ಯಕ್ತಿಯೊಬ್ಬರ ಹೊಟ್ಟೆಯೊಳಗೆ ಬೆಳೆದಿದ್ದ 12 ಕೆ.ಜಿ. ತೂಕದ ಮಾಂಸದ ಗಡ್ಡೆಯನ್ನು ಹೊರ ತೆಗೆಯುವಲ್ಲಿ ಇಲ್ಲಿಯ ವಾಸು ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಆಸ್ಪತ್ರೆಯ ಡಾ. ಸಂತೋಷ್ ರೇಜಂತಲ್, ಡಾ. ನಾಗೇಂದ್ರ ಹಾಗೂ ಡಾ. ಸಂಗಮೇಶ್ ಮೂರು ತಾಸು ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ಹೊರ ತೆಗೆದಿದ್ದಾರೆ.

ಹುಮನಾಬಾದ್ ತಾಲ್ಲೂಕಿನ ಸೀತಾಳಗೇರಾ ಗ್ರಾಮದ ಜಾವೇದ್ ಅಲಿ ತೀವ್ರ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ಜೊತೆಗೆ ಗರ್ಭಿಣಿ ಮಹಿಳೆಯ ರೀತಿಯಲ್ಲಿ ಹೊಟ್ಟೆ ಬೆಳೆದಿತ್ತು. ಹಲವು ವೈದ್ಯರ ಬಳಿ ತೋರಿಸಿದ್ದರು. ರೋಗ ಪತ್ತೆಯಾಗಲಿಲ್ಲ. ಮೂತ್ರ ಮತ್ತು ಮಲ ವಿಸರ್ಜನೆಯಲ್ಲಿನ ನೋವು ಕಡಿಮೆಯಾಗಲಿಲ್ಲ.

ಜಾವೇದ್ ಅಲಿ ವಾರದ ಹಿಂದೆ ಡಾ. ಸಂತೋಷ್ ರೇಜಂತಲ್ ಅವರ ಬಳಿ ಚಿಕಿತ್ಸೆಗೆ ಬಂದಿದ್ದರು. ರೋಗದ ಮೂಲ ಪತ್ತೆ ಮಾಡಲು ಬೇರೆ ಬೇರೆ ಪರೀಕ್ಷೆ ನಡೆಸಲಾಯಿತು.

ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರುವ ಮತ್ತು ಅದು ಅಪಾಯಕಾರಿ ಹಂತ ತಲುಪಿದ್ದನ್ನು ಗುರುತಿಸಲಾಯಿತು.
ನಗರದ ಶ್ರೀ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆ ಹೊರ ತೆಗೆಯಲು ನಿರ್ಧರಿಸಲಾಯಿತು.
ಹೈದರಾಬಾದ್‌ನ ಕಾಮಿನೇನಿ ಆಸ್ಪತ್ರೆಯ ತಜ್ಞವೈದ್ಯ ಡಾ. ನಾಗೇಂದ್ರ ಅವರ ನೆರವು ಪಡೆಯಲಾಯಿತು. ಡಾ.ನಾಗೇಂದ್ರ, ಡಾ. ಸಂತೋಷ್ ರೇಜಂತಲ್ ಮತ್ತು ಡಾ. ಸಂಗಮೇಶ್ ಮೂರು ತಾಸುಗಳ ಶಸ್ತ್ರಚಿಕಿತ್ಸೆ ನಡೆಸಿ 12 ಕೆ.ಜಿ. ತೂಕದ ಮಾಂಸದ ಗಡ್ಡೆಯನ್ನು ಹೊರ ತೆಗೆದರು.

ಲೀವರ್ ಕೆಳಭಾಗದಲ್ಲಿ ಬೆಳೆದಿದ್ದ ಮಾಂಸದ ಗಡ್ಡೆಯಿಂದಾಗಿ ಸಣ್ಣ ಕರುಳು, ದೊಡ್ಡ ಕರಳು ಒತ್ತಡಕ್ಕೆ ಒಳಗಾಗಿದ್ದವು. ಈ ಕಾರಣದಿಂದಾಗಿಯೇ ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆಗೆ ತೊಂದರೆಯಾಗುತಿತ್ತು. ದೇಹದ ಇತರ ಪ್ರಮುಖ ಅಂಗಗಳೂ ಪ್ರಭಾವಿತವಾಗಿದ್ದವು ಎಂದು ಡಾ. ಸಂತೋಷ್ ರೇಜಂತಲ್ ತಿಳಿಸಿದ್ದಾರೆ.

ವೈದ್ಯಕೀಯ ಭಾಷೆಯಲ್ಲಿ ಈ ಗಡ್ಡೆಯನ್ನು `ರಿಟ್ರೋಪೆರಿಟೋನಿಯಲ್ ಲೈಪೋಸಾರ್ಕೋಮಾ' ಎಂದು ಕರೆಯ ಲಾಗುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT