ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘25 ವರ್ಷಗಳಲ್ಲೇ ರಾಜಧಾನಿಯಲ್ಲಿ ದಾಖಲೆ ಮಳೆ’

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ರಾಜಧಾನಿಗೆ ವರುಣ ಭರ್ಜರಿ ಕೃಪೆ ತೋರಿದ್ದು, ಕಳೆದ 25 ವರ್ಷಗಳಲ್ಲೇ  ದಾಖಲೆ ಮಳೆ ಸುರಿದಿದೆ.
ಸೆಪ್ಟೆಂಬರ್ 1 ರಿಂದ 20ರವರೆಗೆ ನಗರ ವ್ಯಾಪ್ತಿ ಯಲ್ಲಿ 349.5 ಮಿ.ಮೀ ಪ್ರಮಾಣದಲ್ಲಿ  ಮಳೆಯಾ ಗಿದ್ದು, 25 ವರ್ಷಗಳ ನಂತರ ಇದೇ  ಮೊದಲ ಬಾರಿಗೆ ಈ ಪ್ರಮಾಣದ ಮಳೆಯನ್ನು ನಗರ ಕಂಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಹವಾಮಾನ ಇಲಾಖೆಯ  ನಿರ್ದೇಶಕ ಬಿ.ಪುಟ್ಟಣ್ಣ, ‘ ಸಾಮಾನ್ಯವಾಗಿ ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯಭಾರ ಕುಸಿತ ಉಂಟಾದರೆ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತದೆ’ ಎಂದು ತಿಳಿಸಿದರು.

‘ಜೂನ್ ತಿಂಗಳಿನಲ್ಲಿ 177.1 ಮಿ.ಮೀ, 139.7 ಮಿ.ಮೀ (ಜುಲೈ), 135.5 ಮಿ.ಮೀ (ಆಗಸ್ಟ್) ಮಳೆ ಸುರಿದಿದೆ’ ಎಂದರು.

‘ಕಳೆದ ವರ್ಷ 7.2 ಮಿ.ಮೀ (ಜೂನ್), 66.7 (ಜುಲೈ), 83.6 (ಆಗಸ್ಟ್), 68.4 ಮಿ.ಮೀ (ಸೆಪ್ಟೆಂಬರ್)  ಮಳೆ ಸುರಿದಿತ್ತು. ನಗರವಲ್ಲದೇ ರಾಜ್ಯದಲ್ಲಿ ಹದಿನೆಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT