ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುಭವಿ ಕಂದಾಯ ಅಧಿಕಾರಿಗಳಿಗೆ ಬಡ್ತಿ’

Last Updated 9 ಜನವರಿ 2014, 19:37 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಕಂದಾಯ ಇಲಾಖೆಯ ಅನುಭವಿ ಅಧಿಕಾರಿಗಳನ್ನೇ ಮುಂದಿನ ದಿನಗಳಲ್ಲಿ ತಹಸೀಲ್ದಾರ್‌ ಮತ್ತು ಸಹಾಯಕ ಆಯುಕ್ತರನ್ನಾಗಿ ನೇಮಿಸಲಾಗುವುದು ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್‌ಪ್ರಸಾದ್‌ ತಿಳಿಸಿದರು.

ಕೆಂಗೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘ ಮತ್ತು ರಾಜ್ಯ ಗ್ರಾಮಲೆಕ್ಕಾಧಿ­ಕಾರಿಗಳ ಸಂಘ ಆಯೋಜಿಸಿದ್ದ  ಕಾರ್ಯ­ಕ್ರಮದಲ್ಲಿ ಹಿರಿಯ ಕಂದಾಯ ಅಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ತಹಸೀಲ್ದಾರ್‌ ನೇಮಕಾತಿಯಲ್ಲಿ ಗ್ರೇಡ್‌ ಪದ್ದತಿಯನ್ನು  ರದ್ದುಗೊಳಿಸ­ಲಾಗುವುದು. ಬದಲಿಗೆ ತಹಸೀಲ್ದಾರ್‌ ಮತ್ತು ವಿಶೇಷ ತಹಸೀಲ್ದಾರ್‌ ಎಂದು ಕರೆಯಲಾಗುವುದು ಎಂದು ಅವರು ತಿಳಿಸಿದರು.

‌ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಎಲ್ಲ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು. ಜತೆಗೆ  ಗ್ರಾಮ ಸಹಾಯಕರು, ಡಿ.ಗ್ರೂಪ್‌ ನೌಕರರಿಗೆ ಬಡ್ತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಸಚಿವರು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT