ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಡಳಿತಗಾರರಿಗೆ ರಾಜ್ಯಶಾಸ್ತ್ರ ದಿಕ್ಸೂಚಿ’

Last Updated 21 ಸೆಪ್ಟೆಂಬರ್ 2013, 7:06 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಸಂಸತ್‌ ಸದಸ್ಯರು ಇಂದು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಉಪಲೋಕಾಯುಕ್ತ  ನ್ಯಾಯ ಮೂರ್ತಿ  ಸುಭಾಷ ಬಿ. ಅಡಿ ಹೇಳಿದರು.

ಆರ್‌ಟಿ ಇಎಸ್‌ ಕಾಲೇಜಿನಲ್ಲಿ  ರಾಜ್ಯಶಾಸ್ತ್ರ ವಿಭಾಗ ಶುಕ್ರವಾರ  ಆಯೋಜಿಸಿದ್ದ  ಯುಜಿಸಿ ಪ್ರಾಯೋಜಿತ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು  ಉದ್ಘಾಟಿಸಿ ಅವರು ಮಾತನಾಡಿದರು.ಜನ ಕಲ್ಯಾಣ ಹಾಗೂ ಅಭಿವೃದ್ಧಿಗೆ ಪೂರಕ ವಾದ ಅನೇಕ ಕಾನೂನುಗಳು ಸಂವಿಧಾನದಲ್ಲಿ ಇವೆ. ಇವೆಲ್ಲ ಕಾರ್ಯ ರೂಪಕ್ಕೆ ಬರಬೇಕು. ಈ ದಿಸೆಯಲ್ಲಿ ಸಂಸತ್‌ ಸದಸ್ಯರು ಪರಿಣಾಮ ಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.

ಸಂಸತ್‌ ಸದಸ್ಯರಿಗೆ ಜನರ ಬಗೆಗೆ ಕಾಳಜಿಯಿಲ್ಲ, ಸದಸ್ಯರ  ನಡವಳಿಕೆ ಬದ ಲಾಗಯಬೇಕು.  ದೇಶದ ಜನರ ಒಳಿತಿಗಾಗಿ ನಾವು ಇದ್ದೇವೆ ಎಂಬ ಮನೋಭಾವ ಇಟ್ಟುಕೊಂಡು ಆಸಕ್ತಿವಹಿಸಿ ಕೆಲಸಮಾಡಬೇಕು ಎಂದು  ಸಲಹೆ ನೀಡಿದರು.
ರಾಜಕೀಯ ಶಾಸ್ತ್ರವು ಆಡಳಿತ ಮಾಡುವವರಿಗೆ ದಿಕ್ಸೂಚಿ ಇದ್ದ ಹಾಗೆ.  ಆದರಿ ಆದರೆ ಅದಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಹರೀಶ ರಾಮ ಸ್ವಾಮಿ  ಮಾತ ನಾಡಿ, ಸಂಸತ್ತು  ಈ ದೇಶದ ಪ್ರತಿಬಿಂಬ, ಸಂಸತ್‌ನ ಕಾರ್ಯಕಲಾಪಗಳು ಗುಣ ಮಟ್ಟ ಕಳೆದುಕೊಳ್ಳುತ್ತಿವೆ, ಯಾರೋ ಪ್ರಶ್ನೆ ಕೇಳಿದರೆ, ಇನ್ನಾರೋ ಉತ್ತರ ನೀಡುತ್ತಾರೆ ಎಂದು ದೂರಿದರು.

ಕವಿವಿ ಸಿಂಡಿಕೇಟ್‌ ಸದಸ್ಯ ಪ್ರೊ.ಲೋಹಿತ್‌ ನಾಯ್ಕರ,  ಆಶಯ ಭಾಷಣದಲ್ಲಿ ಸಂಸತ್‌ ಸದಸ್ಯರು ಹಿಂದೆ ಕಲಾಪದಲ್ಲಿ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಪೂರ್ವ ಸಿದ್ಧತೆ ಮಾಡಿ ಕೊಂಡು  ಬಂದು ಉತ್ತರ ನೀಡುತ್ತಿದ್ದರು. ಈಗಿನ ಸದಸ್ಯರಿಗೆ ಸದನದ ಬಗ್ಗೆ ಕಾಳಜಿಯೇ ಇಲ್ಲ ಎಂದರು. 22 ಸಾವಿರಕ್ಕೂ ಹೆಚ್ಚು ನ್ಯಾಯಯುತ ಕಾನೂನುಗಳಿವೆ, ಬಡ ತನ ನಿರ್ಮೂಲನೆಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಗತ್ಯವಾಗಿರಬೇಕು, ಸರ್ಕಾರಕ್ಕೆ ಬಡವರು ಯಾರು? ಎಂದು ನಿರ್ಣಯಿಸಲು ಆಗುತ್ತಿಲ್ಲ ಎಂದರು.

ಕರ್ನಾಟಕ ರಾಜ್ಯ ರಾಜ್ಯ ಪಾ್ರಚಾರ್ಯರ ಸಂಘದ ಅಧ್ಯಕ್ಷ ಎನ್‌. ಆರ್‌. ಬಾಳಿಕಾಯಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸುಭಾಷ ಸಾವುಕಾರ, ಪ್ರೊ.ಸೀತಾ ಸಾವುಕಾರ, ಕಾನೂನು ಕಾಲೇಜಿನ ಪ್ರಾಚಾರ್ಯ ರಮೇಶ, ಪ್ರೊ.ಸೀತಾ ಸಾವುಕಾರ, ಡಾ.ಜಿ.ಬಿ. ನಂದನ್‌ ಉಪಸ್ಥಿತ ರಿದ್ದರು.

ಕಾಲೇಜಿನ ಪ್ರಾ.ಎಸ್‌.ಎಂ. ಬಾಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋವಾ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಬ್ಯಾಡಗಿ, ಹಾವೇರಿ ಗದಗ ಜಿಲ್ಲೆಯ ಕಾಲೇಜುಗಳ ರಾಜ್ಯ ಶಾಸ್ತ್ರ ಉಪನ್ಯಾಸಕರು ಭಾಗವಹಿಸಿದ್ದರು.ಅನ್ನಪೂರ್ಣೇಶ್ವರಿ ಹಾಗೂ ಸಂಗಡಿ ಗರು ಪ್ರಾರ್ಥಿಸಿದರು. ವೈಷ್ಣವಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಡಾ.ಮುಕ್ಕುಂದ ವಿ. ಶಿಡಗನಾಳ ಸ್ವಾಗತಿಸಿದರು. ಪ್ರೊ. ಪಿ.ಎಸ್‌. ನಾಯಕ ಮತ್ತು ಪ್ರೊ. ಸದಾಶಿವ ಹುಲ್ಲತ್ತಿ  ನಿರೂಪಿಸಿದರು. ಡಾ.ರಾಮರಡ್ಡಿ ರಡ್ಡೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT