ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಡೆಂಗೋಡ್ಲು ನವೋದಯದ ಶ್ರೇಷ್ಠ ಕವಿ’

ಲೇಖಕ ಡಾ.ಜಯಪ್ರಕಾಶ್ ಮಾವಿನಕುಳಿ ಅಭಿಮತ
Last Updated 2 ಡಿಸೆಂಬರ್ 2013, 5:53 IST
ಅಕ್ಷರ ಗಾತ್ರ

ದಾವಣಗೆರೆ: ‘ನವೋದಯ ಸಾಹಿತ್ಯ ಕಾಲಘಟ್ಟದಲ್ಲಿ ಉದಯಿಸಿದ ಸಾಹಿತಿಗಳಲ್ಲಿ ಕಡೆಂಗೋಡ್ಲು ಶಂಕರಭಟ್ಟ ಅವರು ಶ್ರೇಷ್ಠ ಕವಿಯಾಗಿದ್ದಾರೆ ಎಂದು ಲೇಖಕ ಡಾ.ಜಯಪ್ರಕಾಶ್ ಮಾವಿನಕುಳಿ ಅಭಿಪ್ರಾಯಪಟ್ಟರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನವೋದಯ ಕವಿ–ಕಾವ್ಯ–ಗಾಯನ ಚಿಂತನಾಮಾಲೆ’ ಕಾರ್ಯಕ್ರಮದಲ್ಲಿ ‘ಕಡೆಂಗೋಡ್ಲು ಶಂಕರಭಟ್ಟರ ಬದುಕು–ಬರಹ ಕುರಿತು ಅವರು ಮಾತನಾಡಿದರು.

ಕೃತಿಯಂತೆ ವೈಯಕ್ತಿ ಬದುಕು ಕೂಡ ಪರಿಶುದ್ಧವಾಗಿರಬೇಕು ಎಂಬುದನ್ನು ಅವರು ಪ್ರತಿಪಾದಿಸಿದ್ದರು. ಅದರಂತೆ ಬದುಕಿದರು. 16ನೇ ವಯಸ್ಸಿನಲ್ಲಿಯೇ ‘ಕರ್ನಾಟಕ ಸಭಾಗ್ರಂಥ’ ಎನ್ನುವ ಪ್ರಕಾಶನ ಆರಂಭಿಸಿ ಘೋಶಯಾತ್ರೆ ಎನ್ನುವ ತಮ್ಮ ಪ್ರಥಮ ಕೃತಿಯನ್ನು ಹೊರತಂದರು. ಬಡತನದಲ್ಲೂ ಪ್ರಕಾಶನ ಆರಂಭಿಸಿದ ಧೀಮಂತ ಸಾಹಿತಿಯಾಗಿದ್ದರು ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಟಿ. ಶಿವಪ್ಪ ಮಾತನಾಡಿ, ‘ ಕಾವ್ಯ ಮನಸ್ಸಿಗೆ ಆನಂದ ನೀಡುವ ವಸ್ತು. ಪ್ರಾಚೀನ, ಮಧ್ಯಕಾಲೀನ, ನವೋದಯ, ನವ್ಯ, ಬಂಡಾಯ ಕಾವ್ಯಗಳಲ್ಲೂ ಆನಂದವನ್ನು ಕಾಣಬಹುದು. ಆದಿ ಕವಿ ಪಂಪ–ರನ್ನ, ಪೊನ್ನ– ಜನ್ನ ಅವರು ಹಳೆಗನ್ನಡದಲ್ಲಿ ಕಾವ್ಯ ಕಟ್ಟಿ ಜನರ ಮನಸ್ಸಿಗೆ ಮುಟ್ಟಿಸುವ ಕಾರ್ಯ ಮಾಡಿದರು. ಆದರೆ, ಸಾಮಾನ್ಯರ ಮನಸ್ಸಿಗೆ ತಟ್ಟುವುದು ಸುಲಭವಾಗಿರಲಿಲ್ಲ. ನಂತರ ಬಂದ ಕವಿಗಳು ಚಂಪೂ ಶೈಲಿ, ಷಟ್ಪದಿಗಳನ್ನು ಬಳಸಿ ಕಾವ್ಯ ಹೆಣೆದರು. ನಂತರ
ಬಿ.ಎಂ. ಶ್ರೀಕಂಠಯ್ಯ, ಅಡಿಗರು ಕಾವ್ಯವನ್ನು ಸರಳೀಕರಣಗೊಳಿಸಿ ಜನರ ಮನಸ್ಸು ತಟ್ಟುವಂತೆ ಮಾಡಿದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರೊ.ಬಿ.ವಿ ವೀರಭದ್ರಪ್ಪ ಪ್ರತಿಷ್ಠಾನದ ವತಿಯಿಂದ ‘ಲೋಕಾಯತ ಪ್ರಶಸ್ತಿ’ ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ವತಿಯಿಂದ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ’ಗಳನ್ನು ಸ್ಥಾಪಿಸಲಾಯಿತು.

ವಿಚಾರವಾದಿ ಪ್ರೊ.ಬಿ.ವಿ. ವೀರಭದ್ರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಎಂ. ಚಂದ್ರಪ್ಪ, ಮಾಗನೂರು ಸಂಗಮೇಶ್ವರ ಗೌಡರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಆರ್.ಉಜ್ಜನಪ್ಪ ಪ್ರಾಸ್ತಾವಿಕ ಮಾತನಾಡಿದರು.  ಬಾ.ಮ. ಬಸವರಾಜಯ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT