ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಾದೇಶಕ್ಕೆ ತಲೆಬಾಗುವೆ’

Last Updated 16 ಮೇ 2014, 19:30 IST
ಅಕ್ಷರ ಗಾತ್ರ

* ಜನರ ತೀರ್ಪಿಗೆ ತಲೆಬಾಗುತ್ತೇನೆ. ಪಕ್ಷದ ಅಧ್ಯಕ್ಷೆಯಾಗಿ ಸೋಲಿನ ಸಂಪೂರ್ಣ ಹೊಣೆ ಹೊರುತ್ತೇನೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿರುವ ಮುಂದಿನ ಸರ್ಕಾರ ದೇಶದ ಏಕತೆ ಮತ್ತು ಹಿತಾಸಕ್ತಿಯನ್ನು ಎತ್ತಿ ಹಿಡಿಯುತ್ತದೆ ಎಂಬ ಭರವಸೆ ಇದೆ. ಮುಂದಿನ ಪ್ರಧಾನಿಗೆ ಶುಭ ಕೋರುತ್ತೇನೆ.
–ಸೋನಿಯಾ ಗಾಂಧಿ,ಕಾಂಗ್ರೆಸ್‌ ಅಧ್ಯಕ್ಷೆ

* ಒಳ್ಳೆಯ ದಿನಗಳು ಬಂದಿವೆ. ಜೈ ಹೋ.
–ಅನುಪಮ್‌ ಖೇರ್‌, ಬಾಲಿವುಡ್‌ ನಟ

* ಅವರಿಗೆ ಜನಾದೇಶ ಸಿಕ್ಕಿದೆ. ಹೀಗಾಗಿ ಅವರಿಗೆ ಶುಭ ಕೋರುತ್ತೇನೆ. ಕಾಂಗ್ರೆಸ್‌ ಕಳಪೆ ಸಾಧನೆ ತೋರಿದ್ದು, ಈ ಕುರಿತು ಗಂಭೀರವಾಗಿ ಸಮಾಲೋಚನೆ ನಡೆಸಲಾಗುವುದು. ಸೋಲಿನ ಜವಾಬ್ದಾರಿ ಹೊರುತ್ತೇನೆ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ.

* ಪಂಜಾಬ್‌ ಫಲಿತಾಂಶದಿಂದ ಅಚ್ಚರಿಯಾಗಿದೆ. ಆದರೆ, ದೆಹಲಿ ಸೋಲಿನಿಂದ ಆಘಾತವಾಗಿದೆ. ನಮ್ಮ ಬಳಿ ಹಣವಿಲ್ಲ. ಹಾಗಾಗಿ ನಿರೀಕ್ಷಿತ ಜಯ ಸಾಧಿಸಿಲ್ಲ.
–ಅರವಿಂದ ಕೇಜ್ರಿವಾಲ್‌, ಎಎಪಿ ಮುಖಂಡ

* ಜನ ಭಾರಿ ಬಹುಮತ ನೀಡಿದ್ದಾರೆ. ಬದಲಾವಣೆಯೊಂದೇ ಶಾಶ್ವತ ಎಂಬುದು ಸಾಬೀತಾಗಿದೆ. ಈಗ ಬಲವಾದ ಶಕ್ತಿ ಮತ್ತು ನಂಬಿಕೆಯಿಂದ ಮುಂದುವರಿಯಬಹುದು.
–ಶಾರೂಖ್‌ ಖಾನ್‌, ನಟ

* ದೇಶದ ಜನ ಮೋದಿ ಮೇಲೆ ನಂಬಿಕೆಯಿಟ್ಟು ಈ ಗೆಲುವು ತಂದುಕೊಟ್ಟಿದ್ದಾರೆ. ಕುಮಾರ್‌ ವಿಶ್ವಾಸ್‌ ಮತ್ತು ಕೇಜ್ರಿವಾಲ್‌ ಅವರ ಸೋಲು ನಿರಾಸೆ ಉಂಟು ಮಾಡಿದೆ.
–ಯೋಗೇಂದ್ರ ಯಾದವ್‌,
ಎಎಪಿ ಮುಖಂಡ

* ವಂಶ ರಾಜಕೀಯದ ಯುಗ ಮುಗಿದಿದೆ. ಹೊಸ ಭಾರತ, ಹೊಸ ಅವಕಾಶ. ಹೊಸ ಭವಿಷ್ಯದ ಆರಂಭ.
–ಶೇಖರ್‌ ಕಪೂರ್‌, ಚಿತ್ರ ನಿರ್ಮಾಪಕ


* ದೇಶ ಸಕಾರಾತ್ಮಕ ಬದಲಾವಣೆ ಕಡೆಗೆ ಮುಖ ಮಾಡಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸೂಕ್ತ ಸ್ಥಾನ ಪಡೆಯಲಿದೆ.
–ಅಮಿತ್‌ ಷಾ,
ಬಿಜೆಪಿ ಮುಖಂಡ

* ಗುಜರಾತ್‌ನಲ್ಲಿ ಆಡಳಿತ ನಡೆಸಿದಂತೆ ದೇಶವನ್ನು ಮುನ್ನಡೆಸಿದರೆ ಕಠಿಣ ದಿನಗಳು ದೂರವಿಲ್ಲ
–ಜೈರಾಂ ರಮೇಶ್‌, ಕಾಂಗ್ರೆಸ್‌ ಮುಖಂಡ

* ಹಿಂದಿ ಮಾತನಾಡುವ ವ್ಯಕ್ತಿಯೊಬ್ಬ ಅಂತಿಮವಾಗಿ ಪ್ರಧಾನಿಯಾಗಲಿದ್ದಾರೆ. ಜೈ ಹಿಂದ್‌.
ಆಶಾ ಭೋಸ್ಲೆ, ಹಿನ್ನೆಲೆ ಗಾಯಕಿ

* ಪಕ್ಷದ ಸೋಲಿನ ಸಂಪೂರ್ಣ ಹೊಣೆ ಹೊತ್ತುಕೊಳ್ಳುತ್ತೇನೆ. ಇದು ಆತ್ಮವಿಮರ್ಶೆಯ ಕಾಲ. ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿದ್ದು, ತಪ್ಪು ಸರಿಪಡಿಸಿಕೊಂಡು ಮುಂದುವರಿಯುತ್ತೇವೆ.
–ಒಮರ್‌ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ

* ಮೋದಿ ಮತ್ತು ಬಿಜೆಪಿ ನಿರ್ಣಾಯಕ ಗೆಲುವು ಸಾಧಿಸಿದೆ. ಬದಲಾವಣೆಗೆ ಜನ ಮತ ಚಲಾಯಿಸಿದ್ದಾರೆ. ಹೊಸ ಸರ್ಕಾರ ಉತ್ತಮವಾಗಿ ದೇಶವನ್ನು ಮುನ್ನಡೆಸಿಕೊಂಡು ಹೋಗಲಿ.
–ಶಬಾನಾ ಅಜ್ಮಿ, ನಟಿ

* ಮೋದಿ ಅವರ ಯಶಸ್ಸು ವರ್ಷದ ಮೊದಲ ಪ್ರಮುಖ ಬ್ಲಾಕ್‌ಬಾಸ್ಟರ್‌. ದೊಡ್ಡ ಆರಂಭ, ಸೋಮವಾರ ಕುಸಿಯುವ ಸಾಧ್ಯತೆಯೇ ಇಲ್ಲ.
–ಕರಣ್‌ ಜೋಹರ್‌, ಚಿತ್ರ ನಿರ್ಮಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT