ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೂರ್ವ ಯೋಜಿತ ಪ್ರಧಾನಿ ಅಪಾಯ’

Last Updated 9 ಏಪ್ರಿಲ್ 2014, 6:54 IST
ಅಕ್ಷರ ಗಾತ್ರ

ಗುಲ್ಬರ್ಗ: ಚುನಾವಣೆಗೆ ಮೊದಲೇ ಪ್ರಧಾನಿಯನ್ನು ನಿರ್ಧರಿಸಿ ಅಬ್ಬರದಿಂದ ಪ್ರಚಾರ ನಡೆಸುವುದು ಅತ್ಯಂತ ಅಪ್ರಜಾತಾಂತ್ರಿಕ ಕ್ರಮ. ಇದು ಜನಾಭಿಪ್ರಾಯವನ್ನು ದಮನ ಮಾಡಿ ಒತ್ತಾಯಪೂರ್ವಕವಾಗಿ ಪ್ರಚೋದಿಸಲ್ಪಡುತ್ತಿದೆ. ಈ ಬೆಳವಣಿಗೆ ದೇಶಕ್ಕೂ ಜನತೆಗೂ ಅಪಾಯಕಾರಿ ಎಂದು ಎಸ್‌ಯುಸಿಐ (ಸಿ) ರಾಜ್ಯ ಸಮಿತಿ ಸದಸ್ಯ ಡಾ.ಬಿ.ಆರ್‌. ಮಂಜುನಾಥ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಮಂಗಳವಾರ ಪಕ್ಷದ ಲೋಕಸಭಾ ಅಭ್ಯರ್ಥಿ ಎಸ್. ಎಂ. ಶರ್ಮಾ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಚುನಾವಣೆ ಒಂದು ಅಣಕವಾಗಿದೆ. ಇದು ಜನರ ನಿಜವಾದ ಆಯ್ಕೆಯ ಅಧಿಕಾರವಾಗಿ ಉಳಿದಿಲ್ಲ. ಅವರ ಆಶೋತ್ತರ ಈಡೇರಿಸುವ ನಿಟ್ಟಿ ನಲ್ಲಿ ನಡೆಯುತ್ತಿಲ್ಲ. ಬದಲಿಗೆ ಭರವಸೆ ಗಳೇ ಹುಸಿಯಾಗುತ್ತಿದೆ ಎಂದರು.

ಬಂಡವಾಳಶಾಹಿಗಳ ಪಾದಸೇವೆ ಮಾಡುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಿ ಜನತೆಯೇ ಒಂದು ಹೊಸ ರಾಜಕೀಯ ಪರ್ಯಾ ಯವನ್ನು ನ್ಯಾಯದ ಪರವಾದ ಹೋರಾಟವನ್ನು ರೂಪಿಸಿಬೇಕು. ಈ ನಿಟ್ಟಿನಲ್ಲಿ ಎಸ್‌ಯುಸಿಐ ಬೆಂಬಲಿಸ ಬೇಕು ಎಂದು ಮನವಿ ಮಾಡಿದರು.

ವಿ. ನಾಗಮ್ಮಾಳ್ ಅಧ್ಯಕ್ಷತೆ ವಹಿಸಿದ್ದರು.  ಬಿ.ಭಗವಾನರೆಡ್ಡಿ, ಎಸ್. ಎಂ. ಶರ್ಮಾ,ದಿವಾಕರ್‌, ರಾಮಣ್ಣಾ ಇಬ್ರಾ ಹಿಂಪುರ, ಗೌಸ್ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT