ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಜನೆಯಿಂದ ಉತ್ತಮ ಸಂಸ್ಕಾರ’

Last Updated 24 ಸೆಪ್ಟೆಂಬರ್ 2013, 9:31 IST
ಅಕ್ಷರ ಗಾತ್ರ

ಉಜಿರೆ: ಭಜನೆಯಿಂದ ಉತ್ತಮ ಸಂಸ್ಕಾರ ದೊರಕಿ ಆತ್ಮಬಲ ವೃದ್ಧಿ­ಯಾಗು­ತ್ತದೆ. ನಮ್ಮಲ್ಲಿ ನವ ಚೈತನ್ಯ ಮೂಡಿಬರುತ್ತದೆ. ನಾವು ಸದಾ ಸುಖಿ­ಗಳಾಗಿ ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಳ್ಳಲು ಭಜನೆ ಸಹಕಾರಿ­ಯಾಗಿದೆ ಎಂದು ಚಿಕ್ಕಮಗಳೂರಿನ ಹಿರೇಮಗಳೂರು ಕಣ್ಣನ್ ಹೇಳಿದರು.

ಧರ್ಮಸ್ಥಳದಲ್ಲಿ 15ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಜನೆ ಮೂಲಕ ಮನಸ್ಸಿನ ತಲ್ಲಣಗಳನ್ನು ದೂರ ಮಾಡಿ ಶಾಂತಿ, ಸಮಾಧಾನ ಪಡೆಯಬಹುದು. ಭಗ­ವಂತನನ್ನು ಸ್ಪರ್ಶಿಸಿ, ಅನುಭವಿಸಿ ಆನಂದಿ­ಸಲು ಭಜನೆ ಸರಳ ಮಾಧ್ಯಮ­ವಾಗಿದೆ ಎಂದು ಅವರು ಅಭಿಪ್ರಾಯ­ಪಟ್ಟರು.

ಎಸ್.ಡಿ.ಎಂ.  ಶಿಕ್ಷಣ ಸಂಸ್ಥೆಗಳ ಉಪಾ­ಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮಾತನಾಡಿ, ಭಕ್ತಿ, ಪ್ರೀತಿ ಮತ್ತು ವಿಶ್ವಾಸದಿಂದ ಭಜನೆ ಮಾಡಿದರೆ ಭಗವಂತನ ಅನುಗ್ರಹಕ್ಕೆ ಪಾತ್ರರಾಗ­ಬಹುದು ಎಂದು ಹೇಳಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಜಯರಾಘವ ಪಡ್ವೆಟ್ನಾಯ ಉಪ­ಸ್ಥಿತ­ರಿದ್ದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಭಜನೆಯಿಂದ ಬದುಕಿ­ನಲ್ಲಿ ಮಹತ್ತರ ಬದಲಾವಣೆಯಾಗು­ತ್ತದೆ. ಭಜನಾ ಪಟುಗಳು ಸಾಮಾಜಿಕ ಪರಿವರ್ತನೆಯ ರೂವಾರಿ­ಗಳಾಗ­ಬೇಕು. ತಮ್ಮ ಊರಿನಲ್ಲಿ ಧನಾ­ತ್ಮಕ ಪರಿವರ್ತನೆಯ ನಾಯಕ­ರಾಗಬೇಕು. ಅಚಲ ವಿಶ್ವಾಸದಿಂದ ಭಜನೆ ಮಾಡಿ­ದಾಗ. ಭಗವಂತನ ನಾಮಸ್ಮರಣೆ ಮಾಡಿದಾಗ ಮನಸ್ಸು ಪವಿತ್ರವಾಗಿ ನಮ್ಮಲ್ಲಿ ದೈವಿಕತೆ ಮೂಡಿಬರುತ್ತದೆ ಎಂದು ಹೇಳಿ
ದರು.

ಒಂದು ವಾರ ನಡೆಯುವ ತರಬೇತಿ ಕಮ್ಮಟದಲ್ಲಿ 5 ಜಿಲ್ಲೆಗಳಿಂದ 85 ಭಜನಾ ಮಂಡಳಿಗಳ 160 ಮಂದಿ ಸದಸ್ಯರು ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT