ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷೆ, ನೆಲ, ಜಲ ಸಂರಕ್ಷಣೆಗೆ ಸನ್ನದ್ಧರಾಗಿ’

Last Updated 9 ಜನವರಿ 2014, 5:31 IST
ಅಕ್ಷರ ಗಾತ್ರ

ಇಂಡಿ: ಕನ್ನಡ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಮಾರ್ಗದರ್ಶನ ದಲ್ಲಿ ರಾಷ್ಟ್ರದ ಯುವ ಸಮೂಹ ಸನ್ನದ್ಧರಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲರ ಸಹೋದರ ಬಸವಂತರಾಯಗೌಡ ಪಾಟೀಲ ಕರೆ ನೀಡಿದರು.

ಅವರು ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ಈಚೆಗೆ ಕರ್ನಾಟಕ ರಕ್ಷಣಾ ವೇದಿಕೆಯ 38ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯ ಉತ್ತರ ಕರ್ನಾಟಕ ಉಪಾಧ್ಯಕ್ಷ ಸಂತೋಷ ಪಾಟೀಲ ಮಾತನಾಡಿ, ಬೇಳಗಾವಿಯ ಎಂಇಎಸ್‌ ಶಾಸಕ ಸಂಭಾಜಿರಾವ ಪಾಟೀಲರು ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತೇವೆ ಎಂದು ಗಡಿ ಸಮಸ್ಯೆ ನೆಪ ಮಾಡಿಕೊಂಡು ಮಿತಿಮೀರಿದ ಉದ್ಧ ಟತನದ ಹೇಳಿಕೆಗಳನ್ನು ನೀಡಿ ಕನ್ನಡದ ನೆಲ, ಜಲ ಕಬಳಿಸುವ ಹುನ್ನಾರಕ್ಕೆ ಕೈಯಿ ಡುತ್ತಿದ್ದಾರೆ. ಈ ಪ್ರವೃತ್ತಿ ಖಂಡನೀಯ ಎಂದ ಅವರು ಹಾವಿನ ಬುಟ್ಟಿಗೆ ಕೈಹಾಕಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿ ಸಿದ ಸಾಹಿತಿ ದಾನಪ್ಪ ಬಗಲಿ ವಿಶೇಷ ಉಪನ್ಯಾಸ ನೀಡಿದರು. ತಡವಲಗಾ ಗ್ರಾಮದ ಅಭಿನವ ರಾಚೋಟೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವೇದಿಕೆ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಪಡೇಕನೂರ, ಬಿ.ಡಿ. ಪಾಟೀಲ, ಮಲ್ಲಿಕಾರ್ಜುನ ಗಿಣ್ಣಿ, ಡಾ, ಮಲ್ಲಿಕಾರ್ಜುನ ಕಲ್ಲೂರ, ಜಟ್ಟು ಮರಡಿ, ಸೈಬಣ್ಣ ಕೋಟೆಣ್ಣವರ, ಮಹೇಶ ಕುಂಬಾರ, ಶ್ರೀಶೈಲ ಗುನ್ನಾ ಪುರ, ರಾಜು ಅಂಜುಟಗಿ, ಸಿದ್ದು ಡಂಗಾ, ಮಹೇಶ ಹೂಗಾರ, ಬಾಳು ಮುಳಜಿ, ಅನಿಲಗೌಡ ಭೀಮ, ರೇವಪ್ಪ, ಶಿವು ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT