ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಹಿತಿ ಸಿಂಧು’ಗೆ ಸಿಬ್ಬಂದಿ ಕೊರತೆ

Last Updated 17 ಡಿಸೆಂಬರ್ 2013, 5:33 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಆಯ್ದ ಸರ್ಕಾರಿ ಶಾಲೆಗಳಲ್ಲಿ ಗಣಕ ಯಂತ್ರಗಳನ್ನು ಅಳವಡಿಸುವ ಮೂಲಕ ಕೆಲವು ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಶಿಕ್ಷಣಕ್ಕೆ ಸರ್ಕಾರ ಪ್ರೋತ್ಸಾಹ ನೀಡಿತ್ತು. ಆದರೆ ಸಿಬ್ಬಂದಿಗಳ ಕೊರತೆ ಮತ್ತು ಶಿಕ್ಷಕರ ಅನಾಸಕ್ತಿಯ ಪರಿಣಾಮವಾಗಿ ಈಗ ಅನೇಕ ಶಾಲೆಗಳಲ್ಲಿ ಕಂಪ್ಯೂಟರ್‌­ಗಳು ಧೂಳು ತಿನ್ನುತ್ತಿವೆ.

ಸರ್ಕಾರ ಈ ಕೇತ್ರದಲ್ಲಿ ಹೂಡಿದ ಕೋಟ್ಯಂತರ ಹಣ ಮೂಲ ಉದ್ದೇಶಕ್ಕೆ ಬಳಕೆಯಾಗದೇ ಹಾಳಾ­ಗುತ್ತಿವೆ ಎನ್ನುವುದು ಪಾಲಕರ ಆರೋಪ.

ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯುತ್‌, ಬ್ಯಾಟರಿ, ವಿಶೇಷ ಪೀಠೋಪಕರಣ ಮುಂತಾದ ಸೌಕರ್ಯಗಳಿರುವ ವಿಶೇಷ ಕೋಣೆ­ಯೊಂದನ್ನು ನಿರ್ಮಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಎನ್‌ಜಿಓದಿಂದ ಆಯ್ಕೆ ಮಾಡಿದ ಮಾಹಿತಿ ಸಿಂಧು ಶಿಕ್ಷಕರು ಕೆಲವು ದಿನಗಳವರೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ­ದರು. ಆದರೆ 2 ವರ್ಷಗಳಿಂದ ಬಹುತೇಕ ಶಾಲೆಗಳಲ್ಲಿ ಗಣಕ ಯಂತ್ರ ಶಿಕ್ಷಕರಿಲ್ಲದೇ ಲಕ್ಷಾಂತರ ಮೊತ್ತದ ಕಂಪ್ಯೂಟರ್‌ಗಳು ಮೂಲೆ ಸೇರಿವೆ. ಬಹುತೇಕ ಶಾಲೆಗಳಲ್ಲಿ ಬಳಕೆಯಲ್ಲಿ ಇಲ್ಲದೇ ಧೂಳು ತಿನ್ನುತ್ತಿವೆ ಎನ್ನುತ್ತಾರೆ ಮೆಹಕರ್‌ ಸಿಇಸಿ ಸದಸ್ಯರಾಗಿರುವ ಗುಂಡಪ್ಪ ಆಗ್ರೆ .

ಈಚೆಗೆ ನಡೆದ ಮಕ್ಕಳ ಗಣತಿ ಮಾಹಿತಿಗಳನ್ನು ಶಾಲೆಗಳಲ್ಲಿರುವ ಗಣಕಯಂತ್ರ ಬಳಸಿಕೊಂಡು ತುಂಬಲು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ­ಗಳು ಸೂಚಿಸಿದ್ದರು. ಆದರೆ ಎಲ್ಲಿಯೂ ಕಂಪ್ಯೂಟರ್‌ಗಳು ಸುಸ್ಥಿತಿಯಲ್ಲಿ ಇಲ್ಲದ ಕಾರಣ ಮತ್ತು ತರಬೇತಿ ಪಡೆದ ಶಿಕ್ಷಕರು ಇಲ್ಲದಿರುವುದರಿಂದ  ಸಾಧ್ಯ­ವಾಗಿಲ್ಲ ಎಂದು ಭಾನುದಾಸ ಕಾರಬಾರಿ ದೂರುತ್ತಾರೆ.

ಕಂಪ್ಯೂಟರ್‌ಗಳು ವಿದ್ಯಾರ್ಥಿಗಳ ಅನುಕೂಲಕ್ಕೆ ಸದ್ಬಳಕೆಯಾಗುವಂತೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಶಾಲೆಗಳ ಮುಖ್ಶಶಿಕ್ಷಕರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT