ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಢನಂಬಿಕೆಗಳ ನಿಷೇಧಕ್ಕೆ ಬೆಂಬಲ ನೀಡಿ’

Last Updated 4 ಡಿಸೆಂಬರ್ 2013, 6:30 IST
ಅಕ್ಷರ ಗಾತ್ರ

ಮಂಡ್ಯ: ದೇವದಾಸಿ, ಮಡೆ ಮಡೆಸ್ನಾನ, ಮಲಹೊರುವ ಕೆಲಸವನ್ನು ನಾಗರಿಕ ಸಮಾಜದಲ್ಲಿ ಮಾಡಲು ಸಾಧ್ಯವೇ? ಇಂತಹ ಅನಿಷ್ಠಗಳನ್ನು ನಿಷೇಧಿಸುವ ಕೆಲಸಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಬೆಂಬಲ ನೀಡಬೇಕಿದೆ, ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಎಲ್‌.  ಹನುಮಂತಯ್ಯ ಹೇಳಿದರು.

ದಲಿತ ಹಿಂದುಳಿದ ಅಲ್ಪಸಂಖ್ಯಾತ ವರ್ಗಗಳ ಸಮನಯ್ವ ವೇದಿಕೆ ವತಿಯಿಂದ ಮಂಗಳವಾರ ಗಾಂಧಿ ಭವನದಲ್ಲಿ ‘ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕರಡಿನ’ ಬಗೆಗೆ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಡೆ ಮಡೆಸ್ನಾನ, ಬಿದಾಯಿ ಯೋಜನೆಯಿಂದ ನ್ಯಾಯಯುತವಾಗಿ ಲಾಭ ಪಡೆಯುವ ಸಮುದಾಯಗಳವರೇ ಯೋಜನೆಯನ್ನು ವಿರೋಧಿಸುವಂತೆ  ಮಾಡುತ್ತಿರುವುದು ಇಂದಿನ ದುರಂತವಾಗಿದೆ ಎಂದು ವಿಷಾದಿಸಿದರು.
ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲು ವಿರೋಧಿಸುತ್ತಿರುವವರಿಗೆ ಭವಿಷ್ಯ ಹೇಳಿಕೊಂಡಿರುವವರ ಜೀವನದ ಚಿಂತೆಯಾಗಿದೆ. ಅದರಿಂದ ಬೀದಿಪಾಲಾಗುತ್ತಿರುವ ಲಕ್ಷಾಂತರ ಕುಟುಂಬಗಳು ಕಣ್ಣಿಗೆ ಕಾಣಿಸುತ್ತಿಲ್ಲ. ಭಕ್ತಿ ಹಾಗೂ ದೇವರ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಸಾಹಿತಿ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಮಾತನಾಡಿ, ಹಾನಿಕಾರಕ, ಶೋಷಣಾತ್ಮಕ, ಮಾನವನ ಘನತೆಗೆ ಕುಂದು ಉಂಟು ಮಾಡುವ, ಇನ್ನೊಬ್ಬರಿಗೆ ತೊಂದರೆಯುಂಟು ಮಾಡುವ ಆಚರಣೆಗಳನ್ನು ನಿಷೇಧಿಸಬೇಕಾದ ಅವಶ್ಯಕತೆ ಇದೆ. ಅದನ್ನೇ ಮೂಢನಂಬಿಕೆ ಪ್ರತಿಬಂಧಕ ಕರಡಿನಲ್ಲಿಯೂ ಹೇಳಲಾಗಿದೆ ಎಂದರು.

ಧಾರ್ಮಿಕ ಶ್ರದ್ಧೆಗೂ, ಅಂಧಶ್ರದ್ಧೆಗೂ ವ್ಯತ್ಯಾಸವಿದೆ. ಆದರೆ, ಅವೆರಡನ್ನೂ ಒಂದೇ ಎನ್ನುವಂತೆ ಬಿಂಬಿಸಲಾಗುತ್ತಿದೆ. ವೈಜ್ಞಾನಿಕ ಚಂತನೆ, ಪ್ರಶ್ನಿಸುವ ಮನೋಭಾವವನ್ನು ಬೆಳೆಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತುವ ದೃಶ್ಯಮಾಧ್ಯಮಗಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಡವೇ ಎಂದು ಪ್ರಶ್ನಿಸಿದರು.

ಪ್ರೊ.ಎನ್‌.ವಿ. ನರಸಿಂಹಯ್ಯ, ಡಾ.ಎಚ್‌.ವಿ. ವಾಸು ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಗುರುಪ್ರಸಾದ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರ, ಜಿಲ್ಲಾ ಶೋಷಿತ ವರ್ಗಗಳ ವೇದಿಕೆ ಅಧ್ಯಕ್ಷ ಎಸ್‌. ಪುಟ್ಟಂಕಯ್ಯ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಚ್‌. ನಾಗರಾಜು, ಜಿಲ್ಲಾ ವಕ್ಫ್‌ಬೋರ್ಡ್‌ ಮಾಜಿ ಅಧ್ಯಕ್ಷ ಅಮ್ಜದ್‌ ಪಾಷಾ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT