ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ ಪ್ರಧಾನಿಯಾದರೆ ಮುಸ್ಲಿಮರು ಭಯಪಡಬೇಕಿಲ್ಲ’

Last Updated 11 ಡಿಸೆಂಬರ್ 2013, 5:23 IST
ಅಕ್ಷರ ಗಾತ್ರ

ತಾಳಿಕೋಟೆ: ಜಗತ್ತಿನಲ್ಲಿಯೇ ಭಾರತ ವನ್ನು ಸ್ವಾಭಿಮಾನಿ, ಸಶಕ್ತ ರಾಷ್ಟ್ರವನ್ನಾಗಿ ರೂಪುಗೊಳಿಸಲು ಗುಜ ರಾತ್ ಸಿ.ಎಂ. ನರೇಂದ್ರ ಮೋದಿಯೇ ಅರ್ಹ  ಆಯ್ಕೆಯಾಗಿದ್ದು, ಇವರನ್ನು ದೇಶದ ಪ್ರಧಾನಿಯನ್ನಾಗಿಸಲು ಪಣ ತೊಟ್ಟಿರುವ ರಾಷ್ಟ್ರಭಕ್ತರ ಪಡೆಯೇ ನಮೋ ಬ್ರಿಗೇಡ್ ಎಂದು ಸ್ವಾಭಿಮಾನಿ ಭಾರತ ಸಂಘಟನೆ ರಾಜ್ಯ ಉಪಾಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ಶರಣಮುತ್ಯಾನ ದೇವಸ್ಥಾನದ ಆವರಣದಲ್ಲಿ ಸೋಮವಾರ ಸಂಜೆ ನಡೆದ ನಮೋ ಬ್ರಿಗೇಡ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ದೂರ ದೃಷ್ಟಿ ಹೊಂದಿರದ ಸಿಂಗ್ ಸರ್ಕಾರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಿತ್ತೊಗೆದು ನರೇಂದ್ರ ಮೋದಿಯವರನ್ನು ಪ್ರಧಾನಿ ಯನ್ನಾಗಿ ಮಾಡಿದರೆ ಭಾರತದ ಭವಿಷ್ಯತ್ತು ಬಂಗಾರವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಮೋದಿ ಪ್ರಧಾನಿಯಾದರೆ ಮುಸ್ಲಿಮರು  ಭಯಪಡುವ ಅಗತ್ಯವಿಲ್ಲ, ಪಾಕಿಸ್ತಾನದೊಡನೆ  ವೈರತ್ವ ಸಾಧಿಸುವುದಿಲ್ಲ. ಬದಲಾಗಿ ನಾವಿಬ್ಬರೂ ಬಲಿಷ್ಠರಾಗೊಣ ನಿನ್ನ ಅಭಿವೃದ್ಧಿಗೆ ಏನು ಬೇಕು ಹೇಳು ಎಂದು ಮೋದಿ ಕೇಳುತ್ತಾರೆ ವಿನ: ಯುದ್ಧ ಮಾಡುವುದಿಲ್ಲ ಎಂದರು.
ಸ್ವಾಮಿ ವಿವೇಕಾನಂದ ಯುವ ಸೇನೆಯ ಜಿಲ್ಲಾಧ್ಯಕ್ಷ ರಾಘು ಅಣ್ಣಿಗೇರಿ ಮಾತನಾಡಿ, ನರೇಂದ್ರ ಮೋದಿ ಅವರು ಗುಜರಾತ್ನಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಬದಲಾವಣೆಯ ಕ್ರಾಂತಿ ಮಾಡಿ ನಾಡು ಕಂಡ ಅಪರೂಪದ ಭಗೀರಥ ಎನಿಸಿಕೊಂಡಿದ್ದಾರೆ.  ಈ ದೇಶವನ್ನು ಸಮರ್ಥವಾಗಿ ನಡೆಸುವ ಶಕ್ತಿ ಇರುವುದು ಮೋದಿ ಒಬ್ಬರಿಗೆ ಮಾತ್ರ ಎಂದರು.

ಸಾನಿಧ್ಯ ವಹಿಸಿದ್ದ ಗುಂಡಕನಾಳದ ಗುರಲಿಂಗ ಶಿವಾಚಾರ್ಯರು, , ಅಂಬರೀಶ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ ಬಬಲೇಶ್ವರ, ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರಭು ಕಡಿ, ಕಾಶೀನಾಥ ಅರಳಿಚಂಡಿ, ರಾಘು ವಿಜಾಪುರ, ಅಮಿತ ನವಲೆ, ಸಿದ್ರಾಮೇಶ ಯಾಳಗಿ, ಶ್ಯಾಮ ಹಂಚಾಟೆ, ಶಶಿಧರ ಡಿಸಲೆ, ತಮ್ಮಣ್ಣ ದೇಶಪಾಂಡೆ ಹಾಜರಿದ್ದರು. ಶ್ರೀಕಾಂತ ಪತ್ತಾರ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ (ಕೂಚಬಾಳ) ನಿರೂಪಿಸಿದರು.  ದಿನಕರ ಜೋಶಿ ವಂದೆ ಮಾತರಂ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT