ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಕ್ಕರೆ ಕಾರ್ಖಾನೆಗೆ ರೈತರೇ ಮಾಲೀಕರು’

Last Updated 24 ಸೆಪ್ಟೆಂಬರ್ 2013, 6:26 IST
ಅಕ್ಷರ ಗಾತ್ರ

ಭಾಲ್ಕಿ: ರೈತರ ಸಹಕಾರದಿಂದ ನಡೆಯುವ ಸಕ್ಕರೆ ಕಾರ್ಖಾನೆಗಳಿಗೆ ರೈತರೇ ನಿಜವಾದ ಮಾಲೀಕರು ಎಂದು ಮಹಾತ್ಮಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭೀಮಣ್ಣ ಖಂಡ್ರೆ ಹೇಳಿದರು.

ಭಾಲ್ಕಿ ಬಳಿಯ ಮಹಾತ್ಮಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆವರಣ­ದಲ್ಲಿ ಸೋಮವಾರ ನಡೆದ 22ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೀದರ ಜಿಲ್ಲೆಯ ರೈತರು 50 ವರ್ಷಗಳಿಂದ ಸಹಕಾರ ರಂಗದಲ್ಲಿ ಸೇವೆ ಸಲ್ಲಿಸಲು ನಮಗೆ ಬೆಂಬಲವಾಗಿ ನಿಂತಿ­ದ್ದಾರೆ. ಅವರಿಂದ 2 ಬೃಹತ್‌ ಸಕ್ಕರೆ ಕಾರ್ಖಾ­ನೆಗಳ ಸ್ಥಾಪನೆ ಸಾಧ್ಯವಾಗಿದೆ. ರೈತರ ಋಣ ಬಹಳ ದೊಡ್ಡದು
ಎಂದು ಅವರು ಹೇಳಿದರು.

2013– 14ನೇ ಹಂಗಾಮಿಗೆ 35,900 ಎಕರೆ ಕಬ್ಬು ನೋಂದಾಯಿ­ಸಿಕೊಳ್ಳಲಾಗಿದೆ. ಕಬ್ಬಿನ ತಳಿ ಮತ್ತು ನೋಂದಾಯಿಸಿರುವ ರೈತರ ಜೇಷ್ಠತೆ ಆಧಾರದಲ್ಲಿ ಕಬ್ಬು ಸಾಗಣೆಗೆ ಕ್ರಮ­ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

ಕಾರ್ಖಾನೆ ಉಪಾಧ್ಯಕ್ಷ ಅಮರ­ಕುಮಾರ ಖಂಡ್ರೆ, ಅಡಳಿತ ಮಂಡಳಿ ಸದಸ್ಯರಾದ ವೈಜ್ಯನಾಥ ಪಾಟೀಲ, ಸುಧಾಕರರಾವ ಪಾಟೀಲ, ಶಾಂತಪ್ಪ ಕಡಗಂಚಿ, ಬಾಬುರಾವ ತುಂಬಾ, ಮನೋಹರ ನಿಟ್ಟೂರೆ, ಜೈವಂತರಾವ ಪಾಟೀಲ, ಶಾಂತಕುಮಾರ ಪ್ರಭಾ, ಬಾಬುರಾವ ಪಾಟೀಲ ಹೊರಂಡಿ, ಶ್ರೀಪತರಾವ ಪಾಟೀಲ, ಶ್ರಾವಣಕುಮಾರ ಗಾಯಕವಾಡ, ಉಮೇಶ ಮಾಸಿಮಾಡೆ, ಫೀರೋಜ್‌, ವ್ಯವಸ್ಥಾಪಕ ನಿರ್ದೇಶಕ ಅರಳಿ ಸೂರ್ಯಕಾಂತ, ಕೆ.ಕೆ. ಅಟ್ಟಲ್‌ ಇದ್ದರು. ಅಧೀಕ್ಷಕ ರಮೇಶ ಚಿದ್ರಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT