ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಶ್ರೀನಾಥ್ ಮಣಿಕಂತಿ

ಸಂಪರ್ಕ:
ADVERTISEMENT

ಅವಧಿಪೂರ್ವ ಶಿಶುವಿನ ಆರೈಕೆ ಹೇಗೆ?

ಅವಧಿಪೂರ್ವ ಮಗು ಜನಿಸಿದರೆ ಅದನ್ನು ಆರೈಕೆ ಮಾಡುವುದು ಸ್ವಲ್ಪ ಕಠಿಣವೇ. ಜನಿಸಿದ ಒಂದೆರಡು ತಿಂಗಳುಗಳ ಕಾಲ (ಇದು ಶಿಶು ಎಷ್ಟನೇ ತಿಂಗಳಲ್ಲಿ ಜನಿಸಿದೆ ಹಾಗೂ ಎಷ್ಟು ಬೆಳವಣಿಗೆ ಹೊಂದಿದೆ ಎಂಬುದನ್ನು ಅವಲಂಬಿಸಿರುತ್ತದೆ) ಆಸ್ಪತ್ರೆಯಲ್ಲಿ ಆರೈಕೆ ಮಾಡಿ ನಂತರ ಮನೆಯಲ್ಲಿ ಈ ಆರೈಕೆ ಮುಂದುವರಿಸಬೇಕಾಗುತ್ತದೆ. ಸೂಕ್ತ ಮಾಹಿತಿ ಪಡೆದುಕೊಂಡು, ವೈದ್ಯರ ಸಲಹೆಗಳನ್ನು ಅನುಸರಿಸಿದರೆ ಅವಧಿಪೂರ್ವ ಜನಿಸಿದ ಶಿಶುವನ್ನು ಹೆಚ್ಚಿನ ಸಮಸ್ಯೆ ಇಲ್ಲದೇ ಸಲಹಬಹುದು. ಸರಿಯಾದ ತಾಪಮಾನ: ಮಗು ಹಿತವಾದ ಮತ್ತು ಸುರಕ್ಷಿತ ಉಷ್ಣಾಂಶವಿರುವ ಪರಿಸರದಲ್ಲಿರಬೇಕು. ಹೆಚ್ಚು ತಾಪಮಾನ ಅಗತ್ಯವಿದ್ದಾಗ ಬಟ್ಟೆಯ ಪದರಗಳನ್ನು ಸೇರಿಸಬೇಕು ಹಾಗೂ ಇದು ಜಾಸ್ತಿ ಎನಿಸಿದರೆ ಅವುಗಳನ್ನು ತೆಗೆದುಹಾಕಬೇಕು. ಹಾಸಿಗೆಯಲ್ಲಿ ಹೆಚ್ಚು ಹೊದಿಕೆಗಳನ್ನು ಪೇರಿಸಬೇಡಿ. ಇದು ತಾಪಮಾನವನ್ನು ಅಗತ್ಯಕ್ಕಿಂತ ಹೆಚ್ಚಿಸಿ ಮಗುವಿನ ಆರೋಗ್ಯಕ್ಕೆ ಕುತ್ತಾಗಬಹುದು. ಒಂದು ಒಳ್ಳೆಯ ಡಿಜಿಟಲ್ ಥರ್ಮಾಮೀಟರ್ ಖರೀದಿಸಿ ಮತ್ತು ಮಗುವಿನ ಆಕ್ಸಿಲರಿ ತಾಪಮಾನವನ್ನು 36.5- 37.3 ಸಿ (97.6-99.1 ಎಫ್) ಇರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಕೋಣೆಯ ಉಷ್ಣತೆಯು 20-23 ಸೆಲ್ಸಿಯಸ್‌ ಇರಲಿ.
Last Updated 17 ನವೆಂಬರ್ 2020, 19:30 IST
ಅವಧಿಪೂರ್ವ ಶಿಶುವಿನ ಆರೈಕೆ ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT