ಆರೋಗ್ಯ: ಉಜ್ಜಾಯಿ ಪ್ರಾಣಾಯಾಮ.. ಮಾಡುವುದು ಹೇಗೆ? ಪ್ರಯೋಜನಗಳೇನು?
ಉಜ್ಜಾಯಿ ಪ್ರಾಣಾಯಾಮದಲ್ಲಿ ಗಂಟಲಿನ ಸ್ನಾಯುಗಳನ್ನು ಸ್ವಲ್ಪ ಬಿಗಿ ಮಾಡಿ, ತನ್ಮೂಲಕ ಗಾಳಿಯ ನಾಳವನ್ನು ಅಲ್ಪ ಕಿರಿದಾಗಿಸಿ ಪೂರಕ-ರೇಚಕಕ್ಕೆ ಹಿತವಾದ ಪ್ರತಿರೋಧ ಉಂಟುಮಾಡಲಾಗುತ್ತದೆ. ಈ ವಿಧಾನದಲ್ಲಿ ಉಸಿರಿನ ಪಥದಲ್ಲಿರುವ ನಾಸಿಕಾದಿ ಗಾಳಿಯ ಗೂಡಿನವರೆಗಿನ ಎಲ್ಲ ಅಂಗಗಳೂ ಉದ್ದೀಪನಗೊಳ್ಳುತ್ತದೆ. ಇದು ಪೂರಕ-ರೇಚಕಕ್ಕೆ ಉತ್ತಮ ಆಯಾಮವನ್ನು ನೀಡಿ ಮನಸ್ಸಿನಲ್ಲೂ ವಿಜಯೀಭಾವವನ್ನು ಉಂಟುಮಾಡುತ್ತದೆ.Last Updated 2 ಮೇ 2022, 20:30 IST