ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಫಾತಿಮಾ ರಲಿಯಾ

ಸಂಪರ್ಕ:
ADVERTISEMENT

ಕಥೆ: ಶಕುಂತಲೆ

‘ಅವನ‌ ಮಗು ತೀರ್ಕೊಂಡು ಬಿಡ್ತಂತೆ’ ಸುದ್ದಿ ಮೊದಲ ಬಾರಿ ಕೇಳಿದಾಗ ಸಣ್ಣದೊಂದು ಪಿನ್‌ನಿಂದ ಹೃದಯಕ್ಕೆ ಚುಚ್ಚಿದಂತಾಗಿತ್ತು. ಅಡುಗೆ ಮನೆಯ ಗೋಡೆಗೆ ಮುಖ ಮಾಡಿ ಹಾಲು ಕಾಯಿಸುತ್ತಿದ್ದ ನನಗೆ ಕಣ್ಣೊರೆಸಲೂ ಧೈರ್ಯ ಸಾಲದೆ ಕನ್ನಡಿಯ ಮುಂದೆ ನಿಂತಿದ್ದೆ.
Last Updated 21 ಮೇ 2022, 19:30 IST
ಕಥೆ: ಶಕುಂತಲೆ

ಇವರೂ ಸಾಧಕಿಯರೇ

ನಮ್ಮ ಜನಪ್ರಿಯ ಮಹಿಳಾ ವಾದಗಳು ಹುಟ್ಟುಹಾಕಿರುವ ಯಾವ ಫ್ರೇಮಿನೊಳಗೂ ನಿಲ್ಲದ ಲಲಿತಮ್ಮನಂಥವರು ಕ್ಲಾರಾ ಜೆಟ್‌ಕಿನ್‌ನ ನಿಜದ ವಾರಸುದಾರರಂತೆ ತೋರುತ್ತಾರೆ.
Last Updated 5 ಮಾರ್ಚ್ 2022, 19:30 IST
ಇವರೂ ಸಾಧಕಿಯರೇ

ಫಾತಿಮಾ ರಲಿಯಾ ಬರೆದ ಕಥೆ: ಲೆಕ್ಕಪುಸ್ತಕ

ಕಥೆ
Last Updated 12 ಫೆಬ್ರುವರಿ 2022, 19:30 IST
ಫಾತಿಮಾ ರಲಿಯಾ ಬರೆದ ಕಥೆ: ಲೆಕ್ಕಪುಸ್ತಕ

ಫಾತಿಮಾ ರಲಿಯಾ ಬರೆದ ಕಥೆ: ಬೇಲಿಯಾಚೆಗೂ ಬೆಳೆದ ನೆರಳು

ಯಾವತ್ತೋ ತಂದಿರಿಸಿದ್ದ calpole ಪೊಟ್ಟಣವನ್ನು ಎರಡೆರಡು ಬಾರಿ ತಿರುಗಿಸಿನೋಡಿ ಎಕ್ಸ್ಪೈರ್ ಆಗಿಲ್ಲ ಎನ್ನುವುದನ್ನು ಖಾತರಿ ಪಡಿಸಿ ಮಾತ್ರೆಯನ್ನು ಅರ್ಧಕ್ಕೆ ತುಂಡಿರಿಸಿ ಒಂದು ಚಿಕ್ಕ ಚಮಚದಲ್ಲಿ ಚೂರೇಚೂರು ಜೇನು ಬೆರೆಸಿ ಮಗುವಿಗೆ ಕುಡಿಸಿದ ಯಮುನಾ, ಚಮಚ ಬದಿಗಿರಿಸಬೇಕೆಂದು ಈಚೆ ತಿರುಗುವಷ್ಟರಲ್ಲಿ ಅರೆಮಂಪರಿನಲ್ಲಿದ್ದ ಮಗು ಕ್ಷೀಣವಾಗಿ ಏನನ್ನೋ ಮಣಗುಟ್ಟುತ್ತಾ ಬಾಯಲ್ಲಿದ್ದ ಅರ್ಧ ಮಾತ್ರೆಯಲ್ಲಿ ಮತ್ತರ್ಧವನ್ನು ಹೊರಚೆಲ್ಲಿ, ಕೆಮ್ಮುತ್ತಾ ಮಗ್ಗುಲು ಬದಲಿಸಿತು
Last Updated 16 ಅಕ್ಟೋಬರ್ 2021, 19:30 IST
ಫಾತಿಮಾ ರಲಿಯಾ ಬರೆದ ಕಥೆ: ಬೇಲಿಯಾಚೆಗೂ ಬೆಳೆದ ನೆರಳು

ಫಾತಿಮಾ ರಲಿಯಾ ಬರೆದ ‘ಆರು ಪುಟ್ಟ ಪುಟ್ಟ ಕಥೆಗಳು’

‘ಗಾಂಧಿ ಆಶಯಗಳೇಕೆ ಬೇಕು?’ ಪಡಸಾಲೆಯಲ್ಲಿ ಅಪ್ಪ ಜೋರು ಧ್ವನಿಯಲ್ಲಿ ಗೆಳೆಯರೊಂದಿಗೆ ಚರ್ಚಿಸುತ್ತಿದ್ದ. ಅಮ್ಮನಿಲ್ಲದ ಪಕ್ಕದ ಮನೆಯ ಪುಟ್ಟ ಮಗುವನ್ನು ಲಾಲಿ ಹಾಡಿ ಮಲಗಿಸುತ್ತಿದ್ದ ಎಂಟು ವರ್ಷದ ಅವನ ಮಗ ತೊಟ್ಟಿಲು ತೂಗುವುದನ್ನು ನಿಲ್ಲಿಸಿ ಅಪ್ಪನತ್ತ ಉರಿಗಣ್ಣು ಬೀರಿದ.
Last Updated 11 ಸೆಪ್ಟೆಂಬರ್ 2021, 19:31 IST
ಫಾತಿಮಾ ರಲಿಯಾ ಬರೆದ ‘ಆರು ಪುಟ್ಟ ಪುಟ್ಟ ಕಥೆಗಳು’

ಅಯೋಧ್ಯೆ: ಎರಡು ಭಿನ್ನ ಬಿಂಬಗಳು... ಮತ್ತೆ ಕೆಡವುವ, ಕಟ್ಟುವ ಆಟ ಶುರುವಾಗುತ್ತಾ?

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇನ್ನೇನು ಭೂಮಿಪೂಜೆ ನೆರವೇರಲಿದೆ. ದೇಶವನ್ನು ದಶಕಗಳ ಕಾಲ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಕಾಡಿದ ವಿಷಯಗಳಲ್ಲಿ ಈ ವಿವಾದವೂ ಒಂದು. ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿರುವ ಈ ಹೊತ್ತಿನಲ್ಲಿ ಸಾಂಸ್ಕೃತಿಕ ಲೋಕದ ಪ್ರತಿಕ್ರಿಯೆ ಹೇಗಿದ್ದೀತು? ಭಿನ್ನ ನಿಲುವುಗಳನ್ನು ಹೊಂದಿದ ಇಬ್ಬರು ಸಾಂಸ್ಕೃತಿಕ ಲೋಕದ ಪ್ರತಿನಿಧಿಗಳ ಮುಂದೆ ‘ಪ್ರಜಾವಾಣಿ’ ಐದು ಪ್ರಶ್ನೆಗಳನ್ನು ಇಟ್ಟಿತು. ತಾಂಜಾನಿಯಾ ಭಾರತೀಯ ರಾಯಭಾರ ಕಚೇರಿಯ ವಿವೇಕಾನಂದ ಅಧ್ಯಯನ ಕೇಂದ್ರದ ನಿರ್ದೇಶಕ ಸಂತೋಷ್‌ ಜಿ.ಆರ್‌. ಹಾಗೂ ಕಥೆಗಾರ್ತಿ ಫಾತಿಮಾ ರಲಿಯಾ ಅವರೇ ಆ ಇಬ್ಬರು ಪ್ರತಿನಿಧಿಗಳು. ಅವರ ಕೊಟ್ಟ ಉತ್ತರಗಳು ಇಲ್ಲಿವೆ. ಅಯೋಧ್ಯೆಯ ಎರಡು ಭಿನ್ನ ಬಿಂಬಗಳೂ ಅದರಲ್ಲಿ ಕಾಣುತ್ತಿವೆ...
Last Updated 1 ಆಗಸ್ಟ್ 2020, 19:30 IST
ಅಯೋಧ್ಯೆ: ಎರಡು ಭಿನ್ನ ಬಿಂಬಗಳು... ಮತ್ತೆ ಕೆಡವುವ, ಕಟ್ಟುವ ಆಟ ಶುರುವಾಗುತ್ತಾ?

ಫೊಟೋ ಫಿನಿಶ್

ಒಮ್ಮೆ ಅವನ ಗೆಳೆಯನೊಬ್ಬ ಮನೆಗೆ ಬಂದಿದ್ದಾಗ ಬಾಲ್ಯದ ಪರಿಚಯವಲ್ಲವೇ ಎನ್ನುವ ಸಲುಗೆಯಿಂದ ಚಹಾ ಮಾಡಿಕೊಟ್ಟು ಅವನೊಂದಿಗೆ ಹರಟೆಗೆ ಕುಳಿತುಕೊಂಡುಬಿಟ್ಟಿದ್ದಳು. ತುಸು ಹೊತ್ತು ಸುಮ್ಮನಿದ್ದ ತಮ್ಮ ಯಾವುದೋ ನೆಪದಿಂದ ಅವಳನ್ನು ಅಡುಗೆ ಮನೆಗೆ ಕರೆದು ‘ಎದೆಯ ಮೇಲೆ ದುಪ್ಪಟ್ಟಾ ಸರಿಯಾಗಿ ಎಳೆದುಕೊಳ್ಳಬಾರದೇ’ ಎಂದು ರೇಗಿದ್ದ. ಅವನು ಕುಡಿದ ಚಹಾದ ಕಪ್ ಒಂದು ಕೈಯಲ್ಲಿರುವಾಗ ಬೆರಳೇ ಇಲ್ಲದ ಮತ್ತೊಂದು ಕೈಯಲ್ಲಿ ದುಪ್ಪಟ್ಟಾ ಹೇಗೆ ಸರಿ ಮಾಡಿಕೊಳ್ಳಲಿ ಎಂದು ಅರ್ಥವಾಗದ ರೇಣು ಅವನನ್ನೇ ಮಿಕ ಮಿಕ ನೋಡಿದ್ದಳು.
Last Updated 26 ಜನವರಿ 2020, 11:32 IST
ಫೊಟೋ ಫಿನಿಶ್
ADVERTISEMENT
ADVERTISEMENT
ADVERTISEMENT
ADVERTISEMENT