ಬರಡು ನೆಲವನ್ನು ಹಸಿರಾಗಿಸಿದವರು
ನೋಡನೋಡುತ್ತ ಬರಡಾಗಿದ್ದ ಕಾಡು ಹಚ್ಚ ಹಸಿರಿನಿಂದ ಕಂಗೊಳಿಸಿತು. ಈಗ ಈ ಕಾಡಿನಲ್ಲಿ ಜಿಂಕೆ, ಮೊಲ, ನವಿಲುಗಳು ಕಾಣ ಸಿಗುತ್ತಿವೆ. ಬತ್ತಿದ ಬಾವಿಗಳಲ್ಲಿ ನೀರು ಕಾಣ ಸಿಗುತ್ತಿದೆ. ಅದೇ ರೀತಿ ಮೇವಿಗಾಗಿ ಮೊದಲು ಅಕ್ಕಪಕ್ಕದ ಗ್ರಾಮಗಳಿಗೆ ಹೋಗುತ್ತಿದ್ದ ಜನ ಈಗ ಮೇವನ್ನು ತಮ್ಮ ಗೋಮಾಳದಲ್ಲೇ ಪಡೆಯುತ್ತಿದ್ದಾರೆ. ಎಲ್ಲಕಿಂತ ಹೆಚ್ಚಾಗಿ ದೂರದ ಊರುಗಳಿಗೆ ಉರುವಲಿಗಾಗಿ ಹೋಗುತ್ತಿದ್ದ ಮಹಿಳೆಯರಿಗೆ ತಮ್ಮ ಊರಿನ ಪಕ್ಕದಲ್ಲಿಯೇ ಉರುವಲು ಸಿಗುತ್ತಿದೆ.Last Updated 2 ಮಾರ್ಚ್ 2014, 19:30 IST