ಮುಂಬೈ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಔಡಿ ಕಂಪನಿಯು ಐದು ಆಸನಗಳ ಎಸ್‌ಯುವಿ ‘ಕ್ಯು5’ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಟೆಕ್ನಾಲಜಿ ಮತ್ತು ಪ್ರೀಮಿಯಂ ಪ್ಲಸ್ ಎನ್ನುವ ಎರಡು ಅವತರಣಿಕೆಗಳಲ್ಲಿ ಇದು ಲಭ್ಯವಿದ್ದು, ಎಕ್ಸ್ ಷೋರೂಂ ಬೆಲೆಯು ಕ್ರಮವಾಗಿ ₹ 63.77 ಲಕ್ಷ ಮತ್ತು ₹ 58.93 ಲಕ್ಷ ಇದೆ.

ಇಂದು ಬಿಡುಗಡೆ ಮಾಡಿರುವುದನ್ನೂ ಒಳಗೊಂಡು 2021ರಲ್ಲಿ ಕಂಪನಿಯು ಒಟ್ಟಾರೆ ಒಂಭತ್ತು ವಾಹನಗಳನ್ನು ಬಿಡುಗಡೆ ಮಾಡಿದಂತಾಗಿದೆ. ‘ಕ್ಯು5’ ಎಸ್‌ಯುವಿ 2.0 ಲೀಟರ್ ಟಿಎಫ್‌ಎಸ್‌ಐ ಎಂಜಿನ್ ಹೊಂದಿದ್ದು, ಔರಂಗಾಬಾದ್‌ನಲ್ಲಿ ಇರುವ ಸ್ಕೋಡಾ ಆಟೊ ಫೋಕ್ಸ್‌ವ್ಯಾಗನ್ ಇಂಡಿಯಾದ ಘಟಕದಲ್ಲಿ ತಯಾರಿಸಲಾಗಿದೆ. ಪಾರ್ಕ್ ಅಸಿಸ್ಟ್, ಔಡಿ ವರ್ಚುವಲ್ ಕಾಕ್‌ಪಿಟ್ ಪ್ಲಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿಯು ತಿಳಿಸಿದೆ.

ಆರಾಮದಾಯಕ, ಐಷಾರಾಮಿ ಮತ್ತು ಕ್ರೀಡಾಸಕ್ತಿಯ ಮಿಶ್ರಣದೊಂದಿಗೆ ಪ್ರತಿದಿನದ ಬಳಕೆಗೆ ಈ ಎಸ್‌ಯುವಿ ಹೇಳಿ ಮಾಡಿಸಿದ್ದಾಗಿದೆ ಎಂದು ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.