ಭಾನುವಾರ, ಸೆಪ್ಟೆಂಬರ್ 26, 2021
28 °C

ವಾಹನಗಳ ಸಂತೆಯಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಹನ ಉದ್ಯಮದಲ್ಲಿ ನಡೆಯುತ್ತಿರುವ ಹೊಸತನಗಳನ್ನು ಜಗತ್ತಿಗೆ ಪರಿಚಯಿಸಲು ಅಂತರರಾಷ್ಟ್ರೀಯ ವಾಹನ ಪ್ರದರ್ಶನ ಮೇಳಗಳನ್ನು ನಡೆಸಲಾಗುತ್ತದೆ. ಹೀಗೆ ಪ್ರದರ್ಶನ ಕಂಡ ವಾಹನಗಳಲ್ಲಿ ಕೆಲವು ಒಂದು ವರ್ಷದೊಳಗೆ ಮಾರುಕಟ್ಟೆಗೆ ಲಗ್ಗೆ ಇಟ್ಟರೆ, ಇನ್ನೂ ಕೆಲವು ತಯಾರಿಕಾ ಹಂತದಲ್ಲಿಯೇ ಇರುತ್ತವೆ.

ವಾಹನ ತಯಾರಿಕಾ ಕಂಪನಿಗಳಿಗೆ ತಮ್ಮ ಹೊಸ ಬಗೆಯ ವಾಹನಗಳನ್ನು ಇಲ್ಲಿ ಪ್ರದರ್ಶನಕ್ಕಿಡುವುದು ಹೆಮ್ಮೆ, ಪ್ರತಿಷ್ಠೆಯಾದರೆ, ಹೊಸತನಕ್ಕೆ ತೆರೆದುಕೊಳ್ಳಲು ಬಯಸುವ ಗ್ರಾಹಕರಿಗೆ ತಮ್ಮ ಖರೀದಿ ಯೋಜನೆ ಹಾಕಿಕೊಳ್ಳಲು ಪೂರಕವಾಗಿರುತ್ತವೆ ಈ ಮೇಳಗಳು.

ವಾಹನ ಉದ್ಯಮದ ಭವಿಷ್ಯ ಎಂದೇ ಪರಿಗಣಿಸಲಾಗುತ್ತಿರುವ ವಿದ್ಯುತ್‌ ಚಾಲಿತ ವಾಹನಗಳ (ಇವಿ) ತಯಾರಿಕೆ ಮತ್ತು ಪ್ರದರ್ಶನ ಜಗತ್ತಿನಾದ್ಯಂತ ಕಳೆಗಟ್ಟಿದೆ. ಈ ಬಾರಿಯ ನ್ಯೂಯಾರ್ಕ್‌ ಮತ್ತು ಶಾಂಘೈ ಅಂತರರಾಷ್ಟ್ರೀಯ ವಾಹನ ಪ್ರದರ್ಶನ ಮೇಳಗಳಲ್ಲಿ ಕಾನ್ಸೆಪ್ಟ್‌ ಕಾರುಗಳ ಜತೆ ಜತೆಗೆ ವಿದ್ಯುತ್‌ ಚಾಲಿತ ವಾಹನಗಳ ಪ್ರದರ್ಶನವೂ ವಿಜೃಂಭಣೆಯಿಂದ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.