ಶುಕ್ರವಾರ, ಜನವರಿ 27, 2023
21 °C

ಹೊಸ ಮಾದರಿಯ ಪಲ್ಸರ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಜಾಜ್ ಆಟೊ ಕಂಪನಿಯು ಪಲ್ಸರ್‌ ದ್ವಿಚಕ್ರ ವಾಹನದ ಹೊಸ ಆವೃತ್ತಿ ‘ಪಿ150’ಅನ್ನು ಬಿಡುಗಡೆ ಮಾಡಿದೆ. ಇದು 150 ಸಿಸಿ ಎಂಜಿನ್ ಹೊಂದಿದೆ.

‘ಪಿ150’ ಮಾದರಿಯ ಬೆಲೆ ₹ 1.16 ಲಕ್ಷದಿಂದ ₹ 1.19 ಲಕ್ಷ (ಎಕ್ಸ್‌ ಷೋರೂಂ) ನಡುವೆ ಇದೆ. ಐದು ಬಣ್ಣಗಳಲ್ಲಿ ಇದು ಲಭ್ಯವಿರಲಿದೆ ಎಂದು ಕಂಪನಿ ಹೇಳಿದೆ.

ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಹಿಂಭಾಗದಲ್ಲಿ ಮೊನೊಶಾಕ್‌ ಸಸ್ಪೆನ್ಷನ್, ಸ್ಮಾರ್ಟ್‌ಫೋನ್‌ ಚಾರ್ಜಿಂಗ್‌ ಸಾಧನ, ಯಾವ ಗಿಯರ್‌ನಲ್ಲಿ ವಾಹನ ಚಲಿಸುತ್ತಿದೆ ಎಂಬುದರ ಮಾಹಿತಿ, ಎಬಿಎಸ್‌ ಸೌಲಭ್ಯಗಳು ಇದರಲ್ಲಿ ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು