ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಚಾಲಿತ ಬಿಎಂಡಬ್ಲ್ಯು ಮಿನಿ ಕೂಪರ್‌ ಎಸ್‌ಇ ಬಿಡುಗಡೆ: ಬೆಲೆ ಎಷ್ಟು?

Last Updated 24 ಫೆಬ್ರುವರಿ 2022, 13:51 IST
ಅಕ್ಷರ ಗಾತ್ರ

ಬೆಂಗಳೂರು: ಐಷಾರಾಮಿ ಕಾರುಗಳನ್ನು ತಯಾರಿಸುವ, ಜರ್ಮನಿಯ ಬಿಎಂಡಬ್ಲ್ಯು ಕಂಪನಿಯು ಭಾರತದ ಮಾರುಕಟ್ಟೆಗೆ ಸಂಪೂರ್ಣ ವಿದ್ಯುತ್ ಚಾಲಿತ ಮಿನಿ ಕೂಪರ್‌ ಎಸ್‌ಇ ಬಿಡುಗಡೆ ಮಾಡಿದೆ. ಈ ಮೂಲಕ ದೇಶದಲ್ಲಿ ತನ್ನ 10 ವರ್ಷಗಳ ಸಂಭ್ರಮವನ್ನು ಆಚರಿಸಿದೆ.

ಮೂರು ಬಾಗಿಲುಗಳ ಈ ಕಾರಿನ ಎಕ್ಸ್‌ ಷೋರೂಂ ಬೆಲೆ ₹ 47.2 ಲಕ್ಷ ಇದೆ. ಮೊದಲ ಹಂತದಲ್ಲಿ ತಯಾರಾದ ಕಾರನ್ನು 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಬುಕಿಂಗ್‌ ಮಾಡಿರುವವರಿಗೆ ನೀಡಲಾಗುವುದು. ವಿತರಣೆಯು ಮಾರ್ಚ್‌ನಿಂದ ಆರಂಭ ಆಗಲಿದೆ ಎಂದು ಕಂಪನಿಯು ತಿಳಿಸಿದೆ. ಎರಡನೇ ಹಂತದ ಬುಕಿಂಗ್‌ ಮಾರ್ಚ್‌ನಿಂದ ಆರಂಭ ಆಗಲಿದೆ ಎಂದೂ ಹೇಳಿದೆ.

ಕಾಂಪ್ಯಾಕ್ಟ್‌ ಪ್ರೀಮಿಯಂ ವಿಭಾಗದಲ್ಲಿ ಮೊದಲ ವಿದ್ಯುತ್ ಚಾಲಿತ ಕಾರನ್ನು ತರುತ್ತಿರುವುಕ್ಕೆ ಹೆಮ್ಮೆ ಇದೆ ಎಂದು ಬಿಎಂಡಬ್ಲ್ಯು ಸಮೂಹದ ಭಾರತದ ಅಧ್ಯಕ್ಷ ವಿಕ್ರಂ ಪವ್ಹಾ ಹೇಳಿದ್ದಾರೆ.

7.3 ಸೆಕೆಂಡ್‌ಗಳಲ್ಲಿ ಈ ಕಾರು ಪ್ರತಿ ಗಂಟೆಗೆ 100 ಕಿ.ಮೀ. ವೇಗವನ್ನು ತಲುಪಬಲ್ಲದು ಎಂದು ಕಂಪನಿ ಹೇಳಿದೆ. 32.6 ಕಿಲೋ ವಾಟ್‌ ಬ್ಯಾಟರಿಯನ್ನು ಇದು ಹೊಂದಿದೆ. ವಯರ್‌ಲೆಸ್‌ ಚಾರ್ಜಿಂಗ್‌, ಮಲ್ಟಿ ಫಂಕ್ಷನಲ್‌ ಡಿಸ್‌ಪ್ಲೇ, ಕ್ರ್ಯಾಷ್‌ ಸೆನ್ಸರ್‌, ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT