ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Baleno 2022: ಹೊಸ ಫೇಸ್‌ಲಿಫ್ಟ್ ಆವೃತ್ತಿ ಪರಿಚಯಿಸಿದ ಮಾರುತಿ ಸುಜುಕಿ

Last Updated 23 ಫೆಬ್ರುವರಿ 2022, 10:26 IST
ಅಕ್ಷರ ಗಾತ್ರ

ಬೆಂಗಳೂರು:ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಬಲೆನೊದ ಹೊಸ ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಮ್ಯಾನ್ಯುವಲ್‌ ಟ್ರಿಮ್‌ ಮಾದರಿಯ ಬೆಲೆಯು ₹6.35 ಲಕ್ಷದಿಂದ ₹8.99 ಲಕ್ಷದವರೆಗೆ ಇದೆ. ಆಟೊಮೆಟಿಕ್‌ ಮಾದರಿಗಳ ಬೆಲೆಯು ₹7.69 ಲಕ್ಷದಿಂದ ₹9.49 ಲಕ್ಷದವರೆಗೆ ಇದೆ.

ಹೊಸ ಬಲೆನೊ ಅಭಿವೃದ್ಧಿಪಡಿಸಲು ಮಾರಾಟ ಪಾಲುದಾರರ ಜೊತೆಗೂಡಿ ಕಂಪನಿಯು ಒಟ್ಟಾರೆ ₹ 1,150 ಕೋಟಿ ಹೂಡಿಕೆ ಮಾಡಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆನೆಚಿ ಅಯುಕವಾ ಅವರು ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಗಮನದಲ್ಲಿ ಇರಿಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಾರು ಕೆಲವು ಹೊಸ ವೈಶಿಷ್ಟ್ಯಗಳೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗಕ್ಕೆ ಹೊಸ ಚೈತನ್ಯ ತುಂಬಲಿದೆ. ಹೊಸ ಯುಗದ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳೊಂದಿಗೆ ತಾಜಾ ನೋಟ, ಪ್ರೀಮಿಯಂ ಒಳಾಂಗಣ ಮತ್ತು ಸುರಕ್ಷತೆಯ ಮೇಲೆ ವಿಶೇಷ ಗಮನ ಹರಿಸಿರುವುದರಿಂದ ಗ್ರಾಹಕರ ಅನುಭವ ಇನ್ನಷ್ಟು ಉತ್ತಮವಾಗಲಿದೆ ಎಂದು ಅವರು ಹೇಳಿದರು.

ಮುಂದಿನ ಪೀಳಿಗೆಯ ಕೆ–ಸರಣಿಯ 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಅನ್ನು ಇದು ಹೊಂದಿದೆ. 360 ಡಿಗ್ರಿ ವೀವ್‌ ಕ್ಯಾಮೆರಾ, ಹೊಸ ಮನರಂಜನಾ ವ್ಯವಸ್ಥೆ, 6 ಏರ್‌ಬ್ಯಾಗ್‌, ಹಿಲ್‌ಹೋಲ್ಡ್‌ ಅಸಿಸ್ಟ್‌ ಮತ್ತು ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮ್ಯಾನುಯಲ್‌ ಆಯ್ಕೆಯು ಪ್ರತಿ ಲೀಟರಿಗೆ 22.3 ಕಿಲೋ ಮೀಟರ್‌ ಇಂಧನ ದಕ್ಷತೆ ಮತ್ತು ಆಟೊಮೆಟಿಕ್‌ ಆಯ್ಕೆಯು ಪ್ರತಿ ಲೀಟರಿಗೆ 22.9 ಕಿಲೋ ಮೀಟರ್‌ ಇಂಧನ ದಕ್ಷತೆ ಹೊಂದಿದೆ ಎಂದು ಕಂಪನಿಯು ತಿಳಿಸಿದೆ.

ಹೊಸ ಮಾದರಿಗೆ ಈವರೆಗೆ 25 ಸಾವಿರ ಬುಕಿಂಗ್‌ ಆಗಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ಶ್ರೀವಾಸ್ತವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT