ಭಾನುವಾರ, ಅಕ್ಟೋಬರ್ 25, 2020
23 °C

ಬಿಎಂಡಬ್ಲ್ಯು ಮೋಟಾರ್ಸ್‌ನ ಹೊಸ ಜಿ310ಆರ್‌, ಜಿ310ಜಿಎಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಿಎಂಡ‌ಬ್ಲ್ಯು ಮೋಟಾರ್ಸ್‌ ಕಂಪನಿಯು ಭಾರತದ ಮಾರುಕಟ್ಟೆಗೆ ತನ್ನ ಸುಧಾರಿತ ಜಿ310 ಆರ್‌ ಮತ್ತು ಜಿ310 ಜಿಎಸ್‌ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಜಿ310 ಆರ್‌ ಬೆಲೆ ₹ 2.45 ಲಕ್ಷ ಹಾಗೂ ಜಿ310 ಜಿಎಸ್‌ ಬೆಲೆ ₹ 2.85 ಲಕ್ಷ ಇದೆ (ಎಕ್ಸ್‌ ಷೋರೂಂ).

ಜರ್ಮನಿಯ ಮ್ಯೂನಿಕ್‌‌ನಲ್ಲಿ 313 ಸಿಸಿ ಬೈಕ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಟಿವಿಎಸ್‌ ಮೋಟರ್‌ ಕಂಪನಿಯ ಪಾಲುದಾರಿಕೆಯೊಂದಿಗೆ ಭಾರತದಲ್ಲಿ ತಮಿಳುನಾಡಿನ ಹೊಸೂರಿನಲ್ಲಿ ತಯಾರಿಸಲಾಗುತ್ತಿದೆ.

‘ಜಾಗತಿಕ ಮಟ್ಟದಲ್ಲಿ 500 ಸಿಸಿ ಒಳಗಿನ ವಿಭಾಗದಲ್ಲಿ ಜಿ 310 ಆರ್‌ ಮತ್ತು ಜಿ310 ಜಿಎಸ್‌ ಬೈಕ್‌ಗಳು ವಿಶಿಷ್ಟ ಸ್ಥಾನ ಪಡೆದುಕೊಂಡಿವೆ. ಈಗಿನ ಹೊಸ ಅವತಾರದಲ್ಲಿ ಎರಡೂ ಬೈಕ್‌ಗಳ ವಿನ್ಯಾಸದಲ್ಲಿ ಇನ್ನಷ್ಟು ಸುಧಾರಣೆ ಆಗಿದೆ. ಹೊಸ ತಂತ್ರಜ್ಞಾನ ಅಳವಡಿಕೆ ಹಾಗೂ ಅತ್ಯುತ್ತಮ ಸವಾರಿಯ ಅನುಭವ ನೀಡಲಿವೆ’ ಎಂದು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಂ ಪವಾಹ್‌ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು