ಮಂಗಳವಾರ, ಆಗಸ್ಟ್ 9, 2022
20 °C

ಬಿಎಂಡಬ್ಲ್ಯು ಎಸ್‌1000ಆರ್‌ ಬಿಡುಗಡೆ: ಬೆಲೆ ₹17.9 ಲಕ್ಷದಿಂದ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಎಂಡಬ್ಲ್ಯು ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ಬಿಎಂಡಬ್ಲ್ಯು ಎಸ್‌1000ಆರ್‌ ಮೋಟರ್‌ಸೈಕಲ್‌ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 17.9 ಲಕ್ಷದಿಂದ ₹ 22.5 ಲಕ್ಷದವರೆಗಿದೆ.

ಸ್ಯಾಂಡರ್ಡ್‌ ಆವೃತ್ತಿಯ ಬೆಲೆ ₹ 17.9 ಲಕ್ಷ, ಪ್ರೊ ಬೆಲೆ ₹ 19.75 ಲಕ್ಷ ಹಾಗೂ  ಪ್ರೊ ಎಂ ಸ್ಪೋರ್ಟ್‌ ಆವೃತ್ತಿಯ ಬೆಲೆ ₹ 22.5 ಲಕ್ಷ ಇದೆ. 4 ಸಿಲಿಂಡರ್ ಇನ್‌–ಲೈನ್‌ ಎಂಜಿನ್‌ ಹೊಂದಿದ್ದು, 165 ಎಚ್‌ಪಿ ಹೊರಸೂಸಬಲ್ಲದು. ಕೇವಲ 3.2 ಸೆಕೆಂಡ್‌ಗಳಲ್ಲಿ ಪ್ರತಿ ಗಂಟೆಗೆ 0–100 ಕಿಲೋಮೀಟರ್ ವೇಗವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಎರಡನೇ ಪೀಳಿಗೆಯ ಈ ಮೊಟರ್‌ಸೈಕಲ್ ಅನ್ನು ಬಿಎಂಡಬ್ಲ್ಯು ಮೋಟಾರ್ಡ್‌ ಇಂಡಿಯಾದ ಡೀಲರ್‌ಶಿಪ್‌ಗಳಲ್ಲಿ ಇಂದಿನಿಂದಲೇ ಬುಕ್‌ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು