ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಥಾರ್‌ ಮಾರುಕಟ್ಟೆಗೆ

Last Updated 2 ಅಕ್ಟೋಬರ್ 2020, 19:20 IST
ಅಕ್ಷರ ಗಾತ್ರ

ನವದೆಹಲಿ: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಥಾರ್‌ ಎಸ್‌ಯುವಿಯ ಹೊಸ ಅವತರಣಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 9.8 ಲಕ್ಷದಿಂದ ₹ 13.75 ಲಕ್ಷದವರೆಗೆ ಇದೆ.

ಹೊಸ ವಾಹನದ ಬುಕಿಂಗ್‌ ಶುಕ್ರವಾರದಿಂದಲೇ ಆರಂಭವಾಗಿದ್ದು, ವಾಹನವನ್ನು ಗ್ರಾಹಕರಿಗೆ ಹಸ್ತಾಂತರಿಸುವುದು ಮುಂದಿನ ತಿಂಗಳಿನಿಂದ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.

ಕಂಪನಿಯು ಥಾರ್‌ ಎಸ್‌ಯುವಿಯನ್ನು ‘ಎಎಕ್ಸ್‌’, ‘ಎಎಕ್ಸ್‌ ಆಪ್ಷನಲ್’ ಮತ್ತು ‘ಎಲ್‌ಎಕ್ಸ್’ ಎನ್ನುವ ಮಾದರಿಗಳಲ್ಲಿ ಬಿಡುಗಡೆ ಮಾಡಿದೆ.‍ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್‌ ಆಯ್ಕೆ ಲಭ್ಯವಿದೆ.

ಪೆಟ್ರೋಲ್‌ ಎಂಜಿನ್ ಸಾಮರ್ಥ್ಯ 2 ಲೀಟರ್‌. ಡೀಸೆಲ್ ಎಂಜಿನ್‌ ಸಾಮರ್ಥ್ಯ 2.2 ಲೀಟರ್ ಎಂದು ಕಂಪನಿ ತಿಳಿಸಿದೆ. ಯಾವುದೇ ಮಾದರಿಯನ್ನು ಆಯ್ಕೆ ಮಾಡಿಕೊಂಡರೂ ಫೋರ್–ವೀಲ್ ಚಾಲನೆಯ ಸೌಲಭ್ಯ ಇರುತ್ತದೆ.

‘ಹಲವು ವರ್ಷಗಳಿಂದ ಥಾರ್‌ ಕಾರು ಮಹೀಂದ್ರ ಕಂಪನಿಯ ಇತಿಹಾಸದ ಭಾಗವಾಗಿದೆ. ಈ ಕಾರನ್ನು ಹೊಂದುವ ಬಯಕೆಯು ಹಲವರಲ್ಲಿ ಇದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ಹೇಳಿದರು.

‘ಥಾರ್‌ ಕಾರನ್ನು ಖರೀದಿಸಲು ಇನ್ನಷ್ಟು ಹೊಸ ಗ್ರಾಹಕರು ಬರುತ್ತಾರೆ ಎಂಬ ವಿಶ್ವಾಸ ನಮ್ಮದು’ ಎಂದೂ ಅವರು ಹೇಳಿದರು. ಹೊಸ ಎಸ್‌ಯುವಿಯನ್ನು ಭಾರತದಲ್ಲೇ ವಿನ್ಯಾಸಗೊಳಿಸಲಾಗಿದೆ. ಇದನ್ನು ನಾಸಿಕ್‌ನಲ್ಲಿನ ಘಟಕದಲ್ಲಿ ತಯಾರಿಸಲಾಗುತ್ತದೆ.
ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಮಾದರಿಯ ಆಯ್ಕೆಯನ್ನೂ ಕಂಪನಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT