ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸಾನ್ ಮ್ಯಾಗ್ನೈಟ್‌ ಕುರೊ ವಿಶೇಷ ಆವೃತ್ತಿ ಬಿಡುಗಡೆ: ಆರಂಭ ಬೆಲೆ ₹8.27 ಲಕ್ಷ

Published 12 ಅಕ್ಟೋಬರ್ 2023, 9:14 IST
Last Updated 12 ಅಕ್ಟೋಬರ್ 2023, 9:14 IST
ಅಕ್ಷರ ಗಾತ್ರ

ಬೆಂಗಳೂರು: ನಿಸಾನ್ ಮೋಟರ್ ಇಂಡಿಯಾ ಕಂಪನಿಯು ನಿಸಾನ್‌ ಮ್ಯಾಗ್ನೈಟ್‌ನ ವಿಶೇಷ ಆವೃತ್ತಿ ‘ಕುರೊ’ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್ ಷೋರೂಂ ಬೆಲೆ ₹8.27 ಲಕ್ಷದಿಂದ ಆರಂಭ ಆಗಲಿದೆ ಎಂದು ಕಂಪನಿಯು ತಿಳಿಸಿದೆ.

ಸೆಪ್ಟೆಂಬರ್ 14ರಿಂದಲೇ ಈ ಆವೃತ್ತಿಯ ಬುಕಿಂಗ್ ಆರಂಭ ಆಗಿದೆ. ಮ್ಯಾಗ್ನೈಟ್‌ ಎಕ್ಸ್‌ ಎಂಟಿ, ಟರ್ಬೊ ಎಕ್ಸ್‌ವಿ ಎಂಟಿ ಮತ್ತು ಟರ್ಬೊ ಎಕ್ಸ್‌ವಿ ಸಿವಿಟಿ ಆವೃತ್ತಿಗಳಲ್ಲಿ ಲಭ್ಯವಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಗ್ರಾಹಕರ ಬದಲಾಗುತ್ತಿರುವ ಅಗತ್ಯ ಮತ್ತು ಆಯ್ಕೆಗಳಿಗೆ ಕಂಪನಿಯ ಬದ್ಧತೆಯನ್ನು ಈ ಆವೃತ್ತಿಯು ತಿಳಿಸುತ್ತದೆ’ ಎಂದು ನಿಸಾನ್‌ ಮೋಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT