ಬುಧವಾರ, ಸೆಪ್ಟೆಂಬರ್ 22, 2021
21 °C

ಹೊಸ ಶ್ರೇಣಿಯ ಸೂಪರ್‌ಬೈಕ್ಸ್‌ ಬಿಡುಗಡೆ ಮಾಡಿದ ಪಿಯಾಜಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಿಯಾಜಿಯೊ ಕಂಪನಿಯು ಹೊಸ ಶ್ರೇಣಿಯ ಸೂಪರ್‌ಬೈಕ್‌ಗಳನ್ನು ಭಾರತದ ಮಾರುಕಟ್ಟೆಗೆ ಗುರುವಾರ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಪ್ರಿಲಿಯಾ ಆರ್‌6600, ಟ್ಯೂನೊ660 ಏಪ್ರಿಲಿಯಾ ಆರ್‌ಎಸ್‌ವಿ4, ಟ್ಯೂನೊ ವಿ4 ಹಾಗೂ ಮೊಟೊ ಗುಜ್‌ ವಿ85ಟಿಟಿ ಸೂಪರ್ ಬೈಕ್‌ಗಳನ್ನು ಬಿಡುಗಡೆ ಮಾಡಲಾಯಿತು. ಎಕ್ಸ್‌ಷೋರೂಂ ಬೆಲೆ ₹ 13.09 ಲಕ್ಷದಿಂದ ₹ 23.69 ಲಕ್ಷದವರೆಗೂ ಇದೆ. ದೇಶದಾದ್ಯಂತ ಮೊಟೊಪ್ಲೆಕ್ಸ್‌ ವಿತರಣಾ ಕೇಂದ್ರಗಳಲ್ಲಿ ಖರೀದಿಗೆ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.

660ಸಿಸಿಯ ಏಪ್ರಿಲಿಯಾ ಆರ್‌ಎಸ್‌ 660 ಮತ್ತು ಟ್ಯೂನೊ 660 ಬೆಲೆ ಕ್ರಮವಾಗಿ ₹ 13.39 ಲಕ್ಷ ಹಾಗೂ ₹ 13.09 ಲಕ್ಷ ಇದೆ. 1078 ಸಿಸಿಯ ಆರ್‌ಎಸ್‌ವಿ4 ಬೆಲೆ ₹ 23.69 ಲಕ್ಷ ಇದೆ. 1077 ಸಿಸಿಯ ಟ್ಯೂನೊ ವಿ4 ಬೆಲೆ ₹ 20.66 ಲಕ್ಷ ಹಾಗೂ 850 ಸಿಸಿಯ ಮೊಟೊಗುಜಿ (MotoGuzzi) ವಿ85ಟಿಟಿ ಬೆಲೆ ₹ 15.40 ಲಕ್ಷ ಇದೆ.

‘ಬಹುನಿರೀಕ್ಷಿತ ಸೂಪರ್‌ ಬೈಕ್‌ಗಳನ್ನು ಪರಿಚಯಿಸುವುದಕ್ಕೆ ಸಂತೋಷವಾಗುತ್ತಿದೆ. ಈ ಬೈಕ್‌ಗಳು ಭಾರತದಲ್ಲಿ ಹಾಗೂ ವಿಶ್ವದಾದ್ಯಂತ ಹೆಚ್ಚಿನ ಜನರನ್ನು ಆಕರ್ಷಿಸಲಿವೆ. ಭಾರತೀಯ ಗ್ರಾಹಕರ ಇಂದಿನ ಜೀವನಶೈಲಿಯನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಚಾಲನಾ ಅನುಭವವನ್ನು ನೀಡುವುದು ನಮ್ಮ ಗುರಿಯಾಗಿದೆ’ ಎಂದು ಪಿಯಾಜಿಯೊ ಇಂಡಿಯಾದ ಅಧ್ಯಕ್ಷ ಡಿಯಾಗೋ ಗ್ರಾಫಿ ಹೇಳಿದರು.

‘ಈಗ ನಮ್ಮ ಗ್ರಾಹಕರು ಏಪ್ರಿಲಿಯಾ ಬ್ರ್ಯಾಂಡ್‌ನ ಹೊಸ ತಂತ್ರಜ್ಞಾನದ ಅನುಭವ ಪಡೆಯಬಹುದು. ನಮ್ಮ ಮೊಟೊಪ್ಲೆಕ್ಸ್‌ಗಳ ಜಾಲವು ಗ್ರಾಹಕರ ಅವಶ್ಯಕತೆಗಳನ್ನು ಈಡೇರಿಸಲು ಸದಾ ಸಿದ್ಧ’ ಎಂದು ಪಿಯಾಜಿಯೊ ಇಂಡಿಯಾದ ದ್ವಿಚಕ್ರ ವಾಹನ ವಿಭಾಗದ ಮುಖ್ಯಸ್ಥ ಸುಧಾಂಶು ಅಗರ್‌ವಾಲ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು