ಬುಧವಾರ, ಅಕ್ಟೋಬರ್ 5, 2022
26 °C

ರಾಯಲ್‌ ಎನ್‌ಫೀಲ್ಡ್‌ ಹಂಟರ್‌ 350 ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ಹೊಸ ‘ಹಂಟರ್‌ 350’ ಬೈಕ್‌ ಅನ್ನು ರಾಜ್ಯದ ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಮಾಡಿದೆ. ಇದರ ಬೆಲೆ ₹ 1,49,900 (ಕರ್ನಾಟಕ ಎಕ್ಸ್ ಷೋರೂಂ) ದಿಂದ ಆರಂಭ ಆಗುತ್ತದೆ.

ರಾಜ್ಯದಲ್ಲಿ ಬೆಳೆಯುತ್ತಿರುವ ಮೋಟಾರ್‌ ಸೈಕ್ಲಿಂಗ್‌ ಸಮೂಹ ಮತ್ತು ಯುವ ಸಮೂಹಕ್ಕೆ ಹೊಂದುವಂತೆ ಇದನ್ನು ರೂಪಿಸಲಾಗಿದೆ. ರೆಟ್ರೊ ಹಂಟರ್ ಮತ್ತು ಮೆಟ್ರೊ ಹಂಟರ್‌ ಎಂಬ ಎರಡು ಆವೃತ್ತಿಗಳಲ್ಲಿ ರಾಜ್ಯದ 100ಕ್ಕೂ ಅಧಿಕ ಟಚ್‌ ಪಾಯಿಂಟ್‌ಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

350ಸಿಸಿ ಜೆ–ಸರಣಿಯ ಪ್ಲಾಟ್‌ಫಾರಂನಲ್ಲಿ ಇದು ನಿರ್ಮಾಣಗೊಂಡಿದ್ದು, ಅತ್ಯಂತ ಚುರುಕಿನ ಹ್ಯಾರಿಸ್‌ ಪರ್ಫಾರ್ಮೆನ್ಸ್‌ ಚಾಸಿಸ್‌ ಹೊಂದಿದೆ. ನಗರದ ಮತ್ತು ಸಬ್‌ ಅರ್ಬನ್‌ ರಸ್ತೆಗಳಲ್ಲಿಯೂ ಚಲಾಯಿಸಬಹುದು ಎಂದು ಕಂಪನಿಯ ಸಿಇಒ ಜಿ. ಗೋವಿಂದರಾಜನ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅನುಭವಿ ಮತ್ತು ಹೊಸ ರೈಡರ್‌ಗಳನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ಮೋಟರ್‌ಸೈಕ್ಲಿಂಗ್‌ ಇಷ್ಟಪಡುವ ರಾಜ್ಯದ ಹೊಸ ಗ್ರಾಹಕರನ್ನು ಸೆಳೆಯುವ ವಿಶ್ವಾಸ ಇದೆ ಎಂದು ಕಂಪನಿಯ ಭಾರತದ ವಹಿವಾಟಿನ ಮುಖ್ಯಸ್ಥ ವಿ. ಜಯಪ್ರದೀಪ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು