ಶನಿವಾರ, ಜನವರಿ 16, 2021
24 °C

ಗ್ರ್ಯಾವಿಟಾಸ್ ಇನ್ನು ‘ಸಫಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Tata Motors logo AFP image

ಬೆಂಗಳೂರು: ಟಾಟಾ ಮೋಟರ್ಸ್‌ ಕಂಪನಿಯು ತನ್ನ ಜನಪ್ರಿಯ ಬ್ರ್ಯಾಂಡ್‌ ‘ಸಫಾರಿ’ಯನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸಲಿದೆ. ‘ಗ್ರ್ಯಾವಿಟಾಸ್’ ಹೆಸರಿನ ಎಸ್‌ಯುವಿ ವಾಹನವನ್ನು ಟಾಟಾ ಸಿದ್ಧಪಡಿಸಿದ್ದು, ಅದನ್ನು ಸಫಾರಿ ಬ್ರ್ಯಾಂಡ್‌ನಲ್ಲಿ ಮಾರುಕಟ್ಟೆಗೆ ತರಲಿದೆ.

‘ಸಫಾರಿ ಕಾರು ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರತಿಷ್ಠೆಯ ಪ್ರತೀಕವಾಗಿತ್ತು. ಹೊಸ ಅವತಾರದಲ್ಲಿ ಸಫಾರಿ ಕಾರು ತನ್ನ ಪರಂಪರೆಯನ್ನು ಮುಂದಕ್ಕೆ ಒಯ್ಯಲಿದೆ’ ಎಂದು ಟಾಟಾ ಮೋಟರ್ಸ್ ಹೇಳಿಕೊಂಡಿದೆ.

‘ಸಾಮಾಜಿಕವಾಗಿ ಸಕ್ರಿಯವಾಗಿರುವ, ಮೋಜನ್ನು ಇಷ್ಟಪಡುವ ಗ್ರಾಹಕರಿಗೆ ಸಫಾರಿ ಇಷ್ಟವಾಗಲಿದೆ. ಸಫಾರಿ ಕಾರು ಮಾರುಕಟ್ಟೆಯಲ್ಲಿ ಮತ್ತೆ ಶಕ್ತಿ ಸಂಚಯಕ್ಕೆ ಕಾರಣವಾಗಲಿದೆ’ ಎಂದು ಕಂಪನಿಯ ಪ್ರಯಾಣಿಕ ವಾಹನಗಳ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.

ಸಫಾರಿ ಕಾರು ಜನವರಿಯಲ್ಲೇ ಷೋರೂಂಗಳಲ್ಲಿ ಲಭ್ಯವಾಗಲಿದ್ದು, ಬುಕಿಂಗ್ ಕೂಡ ಶೀಘ್ರವೇ ಆರಂಭ ಆಗಲಿದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು