ಗುರುವಾರ , ಅಕ್ಟೋಬರ್ 28, 2021
18 °C

ಯಮಹಾ ವೈಜೆಡ್‌ಎಫ್‌–ಆರ್‌15 ಬೈಕ್, ಏರೋಕ್ಸ್‌ 155 ಸ್ಕೂಟರ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂಡಿಯಾ ಯಮಹಾ ಮೋಟರ್ ಕಂಪನಿಯು ಹೊಸ 155 ಸಿಸಿ ಸ್ಕೂಟರ್‌ ‘ಏರೋಕ್ಸ್‌ 155’ ಹಾಗೂ ‘ವೈಜೆಡ್‌ಎಫ್‌–ಆರ್‌15’ ಬೈಕ್‌ನ ಸುಧಾರಿತ ಸರಣಿಯನ್ನು ಮಂಗಳವಾರ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವೈಜೆಡ್‌ಎಫ್‌–ಆರ್‌15 ವಿ4 ಮತ್ತು ಆರ್‌ಎಫ್‌ಜೆಡ್‌–ಆರ್‌15ಎಂ ಬೈಕ್‌ಗಳ ದೆಹಲಿ ಎಕ್ಸ್‌ ಷೋರೂಂ ಬೆಲೆಯು ₹ 1.67 ಲಕ್ಷದಿಂದ ಆರಂಭವಾಗುತ್ತದೆ.

‘ವೈಜೆಡ್‌ಎಫ್‌–ಆರ್‌15 ತನ್ನ ವಿಭಾಗದಲ್ಲಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ತಿಂಗಳ ಅಂತ್ಯದಿಂದ ಕಂಪನಿಯ ಎಲ್ಲ ಡೀಲರ್‌ಗಳ ಬಳಿ ಖರೀದಿಗೆ ಲಭ್ಯವಾಗಲಿದೆ. ರೇಸಿಂಗ್‌ ಅನುಭವವನ್ನು ಹೊಸ ಮಟ್ಟಕ್ಕೆ ತಲುಪಿಸುವ ವಿಶ್ವಾಸವಿದೆ’ ಎಂದು ಯಮಹಾ ಮೋಟರ್ ಇಂಡಿಯಾ ಸಮೂಹ ಕಂಪನಿಗಳ ಅಧ್ಯಕ್ಷ ಮೊಟೊಫುಮಿ ಶಿತಾರಾ ಹೇಳಿದರು.

ದೆಹಲಿಯಲ್ಲಿ ಏರೋಕ್ಸ್‌ 155 ಸ್ಕೂಟರ್‌ನ ಎಕ್ಸ್ ಷೋರೂಂ ಬೆಲೆಯು ₹ 1.29 ಲಕ್ಷದಿಂದ ಆರಂಭ ಆಗುತ್ತದೆ. ಗರಿಷ್ಠ ಕಾರ್ಯಕ್ಷಮತೆ, ಆರಾಮದಾಯಕ ಹಾಗೂ ಅನುಕೂಲಕರ ವೈಶಿಷ್ಟ್ಯಗಳಿಂದಾಗಿ ಈ ಸ್ಕೂಟರ್‌ ಭಾರತದ ಗ್ರಾಹಕರಿಗೆ ಹೊಸ ಮತ್ತು ರೋಮಾಂಚಕ ಚಾಲನಾ ಅನುಭವ ನೀಡಲಿದೆ. ಇದು ದೇಶದಲ್ಲಿ ಹೊಸ ಮ್ಯಾಕ್ಸಿ ಸ್ಪೋರ್ಟ್ಸ್ ಸ್ಕೂಟರ್‌ ವಿಭಾಗವನ್ನು ಸೃಷ್ಟಿಸಲಿದೆ ಎಂದು ಹೇಳಿದರು.

ಈ ಸ್ಕೂಟರ್‌ ಸ್ಮಾರ್ಟ್‌ ಮೋಟರ್‌ ಜನರೇಟರ್‌ ವ್ಯವಸ್ಥೆಯನ್ನು ಹೊಂದಿದ್ದು, ಎಂಜಿನ್‌ ಆನ್‌ ಮತ್ತು ಆಫ್‌ ಆಗುವಾಗ ಶಬ್ದ ಆಗುವುದಿಲ್ಲ. ಇದರಿಂದಾಗಿ ಇಂಧನ ದಕ್ಷತೆ ಹೆಚ್ಚಲಿದೆ. ಸಿಂಗಲ್ ಚಾನೆಲ್‌ ಎಬಿಎಸ್‌, ಬ್ಲುಟೂತ್‌ ಸಂಪರ್ಕ, 24.5 ಲೀಟರ್‌ ಇಂಧನ ಟ್ಯಾಂಕ್‌ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು