ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಸ್‌ ಮೂಲಕ ವಾಹನ ದೃಢತೆ ಪರೀಕ್ಷೆ ಮುಂದಿನ ವರ್ಷದಿಂದ ಜಾರಿ

Last Updated 7 ಏಪ್ರಿಲ್ 2022, 15:41 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಾಹನಗಳ ದೃಢತೆಯನ್ನು ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ (ಎಟಿಎಸ್) ಮೂಲಕ ಪರೀಕ್ಷಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರವು ಹಂತ ಹಂತವಾಗಿ ಕಡ್ಡಾಯ ಮಾಡಲಿದ್ದು, ಮೊದಲ ಹಂತವು ಮುಂದಿನ ವರ್ಷದ ಏಪ್ರಿಲ್‌ನಿಂದ ಜಾರಿಗೆ ಬರಲಿದೆ.

ಟ್ರಕ್‌ಗಳು ಮತ್ತು ಬಸ್ಸುಗಳ ದೃಢತೆಯನ್ನು ಎಟಿಎಸ್ ಮೂಲಕ ಪರೀಕ್ಷಿಸುವುದು 2023ರ ಏಪ್ರಿಲ್‌ 1ರಿಂದ ಕಡ್ಡಾಯವಾಗಲಿದೆ. ಮಧ್ಯಮ ಗಾತ್ರದ ಸರಕು ಸಾಗಣೆ ವಾಹನ, ಮಧ್ಯಮ ಗಾತ್ರದ ಪ್ರಯಾಣಿಕ ವಾಹನ (ಮಿನಿ ಬಸ್) ಮತ್ತು ಲಘು ಮೋಟಾರು ವಾಹನಗಳು (ಟ್ಯಾಕ್ಸಿ, ಕ್ಯಾಬ್‌) 2024ರ ಜೂನ್‌ 1ರಿಂದ ಎಟಿಎಸ್ ಮೂಲಕ ದೃಢತೆ ಪರೀಕ್ಷಿಸಿಕೊಳ್ಳುವುದು ಕಡ್ಡಾಯವಾಗಲಿದೆ.

ವೈಯಕ್ತಿಕ ಬಳಕೆಯ ವಾಹನಗಳ ದೃಢತೆಯನ್ನು ಅವುಗಳಿಗೆ ಹದಿನೈದು ವರ್ಷ ಪೂರ್ಣಗೊಂಡ ನಂತರದಲ್ಲಿ ದೃಢತೆ ಪ್ರಮಾಣಪತ್ರ ನವೀಕರಿಸುವ ಸಂದರ್ಭದಲ್ಲಿ ಎಟಿಎಸ್ ಮೂಲಕ ಪರೀಕ್ಷಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT