ಹುಂಡೈ ಕ್ರೆಟಾ: 5 ಲಕ್ಷಕ್ಕೂ ಅಧಿಕ ಮಾರಾಟ

ನವದೆಹಲಿ: ದೇಶಿ ಮಾರುಕಟ್ಟೆಯಲ್ಲಿ ಹುಂಡೈ ಕ್ರೆಟಾ ಮಾರಾಟವು 5 ಲಕ್ಷ ಗಡಿಯನ್ನು ದಾಟಿದೆ ಎಂದು ಹುಂಡೈ ಮೋಟರ್ ಇಂಡಿಯಾ ಕಂಪನಿ ತಿಳಿಸಿದೆ.
ಮೇ, ಜೂನ್ ಮತ್ತು ಜುಲೈ ತಿಂಗಳುಗಳಲ್ಲಿಯೂ ಅತಿ ಹೆಚ್ಚು ಮಾರಾಟ ಆಗಿರುವ ಎಸ್ಯುವಿ ಮಾದರಿ ಇದಾಗಿದೆ. ಇದರ ಹೊಸ ಅವತರಣಿಕೆಯನ್ನು ಮಾರ್ಚ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಇಲ್ಲಿಯವರೆಗೆ 65 ಸಾವಿರ ಬುಕಿಂಗ್ಗಳು ಬಂದಿವೆ ಎಂದು ಕಂಪನಿ ಹೇಳಿದೆ.
‘2015ರಲ್ಲಿ ಮೊದಲಿಗೆ ಬಿಡುಗಡೆ ಮಾಡಿದ ಬಳಿಕ ಇಲ್ಲಿಯವರೆಗೂ ಅತ್ಯುತ್ತಮ ಮಾದರಿಯಾಗಿಯೇ ಉಳಿದುಕೊಂಡಿದೆ. 5 ಲಕ್ಷ ಕಾರುಗಳ ಮಾರಾಟದ ಮೈಲುಗಲ್ಲು ದಾಟುವ ಮೂಲಕ ಎಸ್ಯುವಿ ವಿಭಾಗದಲ್ಲಿ ತನ್ನ ನಾಯಕತ್ವವನ್ನು ದೃಢಪಡಿಸಿದೆ’ ಎಂದು ಕಂಪನಿಯ ನಿರ್ದೇಶಕ ತರುಣ್ ಗರ್ಗ್ ತಿಳಿಸಿದ್ದಾರೆ.
ಯುಟಿಲಿಟಿ ವಿಭಾಗದಲ್ಲಿ ವೆನ್ಯು, ಟಕ್ಸನ್ ಮತ್ತು ಕೋನಾ ಎಲೆಕ್ಟ್ರಿಕ್ ವಾಹನಗಳು ಏಪ್ರಿಲ್–ಜುಲೈ ಅವಧಿಯಲ್ಲಿ 34,212ರಷ್ಟು ಮಾರಾಟವಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.