ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2030ರ ಹೊತ್ತಿಗೆ ವಾರ್ಷಿಕ 1 ಕೋಟಿ ಇ.ವಿ ಮಾರಾಟ ನಿರೀಕ್ಷೆ: ನಿತಿನ್‌ ಗಡ್ಕರಿ

Published 22 ಡಿಸೆಂಬರ್ 2023, 15:56 IST
Last Updated 22 ಡಿಸೆಂಬರ್ 2023, 15:56 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 2030ರ ಹೊತ್ತಿಗೆ ವಾರ್ಷಿಕ 1 ಕೋಟಿ ಎಲೆಕ್ಟಿಕ್‌ ವಾಹನಗಳು (ಇ.ವಿ.) ಮಾರಾಟವಾಗುವ ನಿರೀಕ್ಷೆ ಇದ್ದು, 5 ಕೋಟಿಯಷ್ಟು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಶುಕ್ರವಾರ ಹೇಳಿದ್ದಾರೆ.

ಇಲ್ಲಿ ಹಮ್ಮಿಕೊಂಡಿದ್ದ ಇ.ವಿ. ಎಕ್ಸ್‌ಪೋ 2023 ಉದ್ಘಾಟಿಸಿ ಮಾತನಾಡಿದ ಅವರು, 34.54 ಲಕ್ಷ ಎಲೆಕ್ಟಿಕ್‌ ವಾಹನಗಳು ಈಗಾಗಲೇ ನೋಂದಣಿಯಾಗಿವೆ ಎಂ‌ದಿದ್ದಾರೆ.

ಎಲೆಕ್ಟ್ರಿಕ್‌ ವಾಹನಗಳ ತಯಾರಿಯಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನಕ್ಕೇರುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT