ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮ್ಯಾಗ್ನೈಟ್‌ ರೆಡ್ ಬುಕಿಂಗ್ ಶುರು

ಫಾಲೋ ಮಾಡಿ
Comments

ಬೆಂಗಳೂರು: ನಿಸಾನ್‌ ‘ಮ್ಯಾಗ್ನೈಟ್‌ ರೆಡ್’ ಆವೃತ್ತಿಯ ಬುಕಿಂಗ್‌ ಆರಂಭವಾಗಿದೆ ಎಂದು ಕಂಪನಿ ಹೇಳಿದೆ. ಈ ಮಾದರಿಯು ಜುಲೈ 18ರಂದು ಬಿಡುಗಡೆ ಆಗಲಿದೆ.

‘ಮ್ಯಾಗ್ನೈಟ್‌ ರೆಡ್‌’ ಆವೃತ್ತಿಯಲ್ಲಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ವೈರ್‌ಲೆಸ್‌ ಚಾರ್ಜಿಂಗ್ ಸೌಲಭ್ಯ ಹಾಗೂ ಆ್ಯಂಬಿಯೆಂಟ್‌ ಲೈಟಿಂಗ್‌ ವ್ಯವಸ್ಥೆಯನ್ನು ಇದು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

‘ನಿಸ್ಸಾನ್ ಮ್ಯಾಗ್ನೈಟ್ ರೆಡ್‌ನ ವಿನ್ಯಾಸ, ಕಾರ್ಯಕ್ಷಮತೆ, ವಾಹನದಲ್ಲಿ ಇರುವ ಸೌಕರ್ಯಗಳು, ಸುಧಾರಿತ ತಂತ್ರಜ್ಞಾನ ಮತ್ತು ಇತರ ಕೆಲವು ವೈಶಿಷ್ಟ್ಯಗಳು ಗ್ರಾಹಕರನ್ನು ಆಕರ್ಷಿಸುವ ವಿಶ್ವಾಸವಿದೆ’ ಎಂದು ನಿಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಹೇಳಿದ್ದಾರೆ.

ಮ್ಯಾಗ್ನೈಟ್ ರೆಡ್ ಆವೃತ್ತಿಯು ಮೂರು ಆಯ್ಕೆಗಳಲ್ಲಿ ದೊರೆಯಲಿದೆ. ನಿಸ್ಸಾನ್ ಡೀಲರ್‌ಶಿಪ್‌ ಹಾಗೂ ಕಂಪನಿಯ ವೆಬ್‌ಸೈಟ್‌ ಮೂಲಕ ಬುಕ್ ಮಾಡಬಹುದು.

ಕೆಲವು ಪ್ರಮುಖ ವೈಶಿಷ್ಟ್ಯಗಳು: ವೈಫೈ ಸಂಪರ್ಕದೊಂದಿಗೆ 8 ಇಂಚಿನ ಟಚ್‌ಸ್ಕ್ರೀನ್, 7 ಇಂಚಿನ ಪೂರ್ಣ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಡಿಆರ್‌ಎಲ್‌ಗಳು, ಆರ್‌16 ಡೈಮಂಡ್ ಕಟ್ ಅಲಾಯ್ ವೀಲ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಎಲ್‌ಇಡಿ ಫಾಗ್ ಲ್ಯಾಂಪ್, ವೆಹಿಕಲ್ ಡೈನಾಮಿಕ್ಸ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT