ಗುರುವಾರ , ಮಾರ್ಚ್ 4, 2021
18 °C

Mahindra Thar: ಎಂಜಿನ್ ಸಮಸ್ಯೆಯಿರುವ ಥಾರ್ ಭಾಗ ಬದಲಾಯಿಸಲಿದೆ ಮಹೀಂದ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

Reuters

ಮುಂಬೈ: ದೇಶದ ಪ್ರಮುಖ ಅಟೋಮೊಬೈಲ್ ಸಂಸ್ಥೆ ಮಹೀಂದ್ರಾ & ಮಹೀಂದ್ರಾ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಥಾರ್ ಎಸ್‌ಯುವಿ ಡೀಸೆಲ್ ಆವೃತ್ತಿಯ 1,577 ವಾಹನಗಳ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, ಅವುಗಳನ್ನು ಬದಲಾಯಿಸಿಕೊಡುವುದಾಗಿ ಘೋಷಿಸಿದೆ.

ಸೆಪ್ಟೆಂಬರ್ 7 ಮತ್ತು ಡಿಸೆಂಬರ್ 25, 2020ರ ಅವಧಿಯಲ್ಲಿ ಸಿದ್ಧವಾಗಿರುವ ಥಾರ್ ಡೀಸೆಲ್ ಆವೃತ್ತಿಯ 1,577 ಜೀಪ್ ಪೈಕಿ ಇಂಜಿನ್‌ನ ಕ್ಯಾಮ್‌ಶಾಫ್ಟ್ ಭಾಗದಲ್ಲಿ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಅವುಗಳನ್ನು ಕಂಪನಿಯೇ ಬದಲಾಯಿಸಿಕೊಡಲಿದೆ.

ಗುಣಮಟ್ಟ ಕಾಪಾಡಿಕೊಳ್ಳುವ ಜತೆಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಕಂಪನಿಯ ಗುರಿಯಾಗಿದ್ದು, ಉಚಿತವಾಗಿ ಥಾರ್ ತಪಾಸಣೆ ಮತ್ತು ದೋಷಪೂರಿತ ಬಿಡಿಭಾಗಗಳನ್ನು ಬದಲಾಯಿಸಿ ಕೊಡಲಾಗುತ್ತದೆ ಎಂದು ಮಹೀಂದ್ರಾ ಹೇಳಿದೆ.

ಈ ಅವಧಿಯಲ್ಲಿ ತಯಾರಾದ ಡೀಸೆಲ್ ಥಾರ್ ಖರೀದಿಸಿರುವ ಗ್ರಾಹಕರನ್ನು ಕಂಪನಿಯೇ ವೈಯಕ್ತಿಕವಾಗಿ ಸಂಪರ್ಕಿಸಿ, ಇಂಜಿನ್ ಸಮಸ್ಯೆ ಸರಿಪಡಿಸಿಕೊಡಲಿದೆ. ಕಳೆದ ಅಕ್ಟೋಬರ್ 2ರಂದು ಮಹೀಂದ್ರಾ ನೂತನ ಆವೃತ್ತಿಯ ಥಾರ್ ಅನ್ನು ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.