ಮಂಗಳವಾರ, ಜನವರಿ 18, 2022
15 °C

ಸೆಮಿಕಂಡಕ್ಟರ್ ಕೊರತೆ: ಡಿಸೆಂಬರ್‌ನಲ್ಲಿ ವಾಹನೋದ್ಯಮಕ್ಕೆ ಮಿಶ್ರಫಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೆಮಿಕಂಡಕ್ಟರ್ ಕೊರತೆಯಿಂದಾಗಿ ದೇಶದ ವಾಹನೋದ್ಯಮವು 2021ರ ಡಿಸೆಂಬರ್‌ ತಿಂಗಳಿನಲ್ಲಿ ಮಿಶ್ರಫಲ ಅನುಭವಿಸಿವೆ. ಮಾರುತಿ ಸುಜುಕಿ, ಹುಂಡೈ ಮತ್ತು ಹೋಂಡಾ ಕಾರ್ಸ್‌ ಕಂಪನಿಗಳ ವಾಹನ ಮಾರಾಟ ಇಳಿಕೆ ಕಂಡರೆ, ಟಾಟಾ ಮೋಟರ್ಸ್‌, ಮಹೀಂದ್ರ, ನಿಸಾನ್‌ ಮತ್ತು ಸ್ಕೋಡಾ ಕಂಪನಿಗಳ ಮಾರಾಟದಲ್ಲಿ ಏರಿಕೆ ಆಗಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಡಿಸೆಂಬರ್‌ನ ಸಗಟು ಮಾರಾಟವು 1.53 ಲಕ್ಷ ಆಗಿದೆ. 2020ರ ಡಿಸೆಂಬರ್‌ನಲ್ಲಿ 1.60 ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು. ಇದಕ್ಕೆ ಹೋಲಿಸಿದರೆ ಮಾರಾಟವು ಶೇ 4ರಷ್ಟು ಇಳಿಕೆ ಆಗಿದೆ. ದೇಶಿ ಮಾರಾಟವು ಶೇ 13ರಷ್ಟು ಇಳಿಕೆ ಕಂಡಿದೆ.

ಹುಂಡೈ ಮೋಟರ್‌ ಇಂಡಿಯಾ ಕಂಪನಿಯ ಸಗಟು ಮಾರಾಟವು 66,750 ರಿಂದ 48,933ಕ್ಕೆ ಶೇ 26.6ರಷ್ಟು ಇಳಿಕೆ ಆಗಿದೆ. ದೇಶಿ ಮಾರಾಟ ಶೇ 31.8ರಷ್ಟು ಕಡಿಮೆ ಆಗಿದೆ. ಹೋಂಡಾ ಕಾರ್ಸ್‌ ಇಂಡಿಯಾದ ದೇಶಿ ಮಾರಾಟ ಶೇ 8ರಷ್ಟು ಕಡಿಮೆ ಆಗಿದೆ.

ಟಾಟಾ ಮೋಟರ್ಸ್ ಕಂಪನಿಯ ಪ್ರಮಾಣಿಕ ವಾಹನ  ಮಾರಾಟ ಶೇ 50ರಷ್ಟು ಹೆಚ್ಚಾಗಿದೆ. ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ದೇಶಿ ಪ್ರಯಾಣಿಕ ವಾಹನ ಮಾರಾಟ ಶೇ 10ರಷ್ಟು ಏರಿಕೆ ಕಂಡಿದೆ.

ನಿಸಾನ್‌ ಮೋಟರ್ ಇಂಡಿಯಾ ಕಂಪನಿಯ ಸಗಟು ಮಾರಾಟ 1,159 ರಿಂದ 3,010ಕ್ಕೆ ಎರಡು ಪಟ್ಟು ಹೆಚ್ಚಾಗಿದೆ. ಸ್ಕೋಡಾ ಆಟೊ ಇಂಡಿಯಾದ ಸಗಟು ಮಾರಾಟ 1,303 ರಿಂದ 3,234ಕ್ಕೆ ಏರಿಕೆಯಾಗಿದೆ. ಎಂಜಿ ಮೋಟರ್‌ ಇಂಡಿಯಾದ ರಿಟೇಲ್‌ ಮಾರಾಟವು ಶೇ 43ರಷ್ಟು ಹೆಚ್ಚಾಗಿದೆ.

ದ್ವಿಚಕ್ರ ವಾಹನ: ದ್ವಿಚಕ್ರ ವಾಹನ ತಯಾರಿಸುವ ಪ್ರಮುಖ ಕಂಪನಿ ಹೀರೊ ಮೊಟೊಕಾರ್ಪ್‌ನ ಒಟ್ಟಾರೆ ಮಾರಾಟವು ಶೇ 12ರಷ್ಟು ಹೆಚ್ಚಾಗಿದೆ. ಆದರೆ, ದೇಶಿ ಮಾರಾಟ ಶೇ 12ರಷ್ಟು ಇಳಿಕೆ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು