ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಭರವಸೆಗಳ ಎಂಜಿ ಜೆಡ್ಎಸ್‌ ಇವಿ

Last Updated 23 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಎಂಜಿ ಮೋಟರ್‌ ಇಂಡಿಯಾ ಕಂಪನಿಯು 'ಜೆಡ್‌ಎಸ್‌ ಇವಿ' ಹೆಸರಿನ ಸಂಪೂರ್ಣ ವಿದ್ಯುತ್ ಚಾಲಿತ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಅನ್ನು ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಗುರುಗ್ರಾಮದಲ್ಲಿ ಇರುವ ಕಂಪನಿಯ ಷೋರೂಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಒಒ ಗೌರವ್ ಗುಪ್ತಾ ಮತ್ತು ಎಂ.ಡಿ ರಾಜೀವ್ ಛಾಬಾ ಅವರು ಎಸ್‌ಯುವಿಯ ಬೆಲೆ ಮತ್ತು ಇನ್ನಿತರ ಮಾಹಿತಿಗಳನ್ನು ಹಂಚಿಕೊಂಡರು.

ಈಗಾಗಲೆ ಬುಕಿಂಗ್ ಮಾಡಿರುವ (ಜನವರಿ 17ರ ಒಳಗಾಗಿ) ಗ್ರಾಹಕರಿಗೆ ಎಕ್ಸ್ ಷೋರೂಂ ಬೆಲೆ ಎಕ್ಸೈಟ್ ಮಾದರಿಗೆ ₹ 19.88 ಲಕ್ಷ ಮತ್ತು ಎಕ್ಸ್‌ಕ್ಲೂಸಿವ್‌ ಮಾದರಿ ಬೆಲೆ ₹ 22.58 ಲಕ್ಷ ಇರಲಿದೆ. 27 ದಿನದಲ್ಲಿ 2,800 ಬುಕಿಂಗ್ ಆಗಿವೆ.

ಹೊಸ ಗ್ರಾಹಕರಿಗೆ ಬೆಲೆಯಲ್ಲಿ ಏರಿಕೆ ಆಗಲಿದೆ. ಎಕ್ಸ್ ಷೋರೂ ಬೆಲೆ ಎಕ್ಸೈಟ್‌ಗೆ ₹ 20.88 ಲಕ್ಷ ಮತ್ತು ಎಕ್ಸ್‌ಕ್ಲ್ಯೂಸಿವ್ ಬೆಲೆ ₹ 23.58 ಲಕ್ಷ ಇರಲಿದೆ. ಬೆಂಗಳೂರು, ದೆಹಲಿ ರಾಜಧಾನಿ ಪ್ರದೇಶ, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಖರೀದಿಗೆ ಲಭ್ಯ. ಮೂರು ವರ್ಷಗಳ ನಂತರ ಕಂಪನಿಯೇ ಕಾರನ್ನು ಶೇ 50 ಮೌಲ್ಯಕ್ಕೆ ಮರು ಖರೀದಿಸುವ ಅಶ್ಯೂರ್ಡ್ ಬೈ ಬ್ಯಾಕ್ ಕೊಡುಗೆಯನ್ನೂ ನೀಡಿದೆ.

5 ವರ್ಷ ಅಥವಾ ಅನಿಯಮಿತ ಕಿ.ಮೀ ಕಾರ್ ವಾರಂಟಿ, 5 ವರ್ಷ ರೋಡ್ ಸೈಡ್ ಅಸಿಸ್ಟೆಂಟ್, 5 ಲೇಬರ್ ಫ್ರೀ ಸರ್ವೀಸ್ ಹಾಗೂ 5 ರೀತಿಯ ಚಾರ್ಜಿಂಗ್ ಇನ್‌ಫ್ರಾಸ್ಟ್ರಕ್ಚರ್ ನೀಡಲಾಗಿದೆ. 3 ವರ್ಷಗಳವರೆಗೆ ₹ 7,700 ಕ್ಕೆ ನಿರ್ವಹಣೆ ಯೋಜನೆ ಸಿಗಲಿದೆ.

ಒಂದು ಬಾರಿ ಪೂರ್ತಿ ಚಾರ್ಜ್ ಆದರೆ 340 ಕಿ.ಮೀವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಲೀಥಿಯಂ ಅಯಾನ್ ಬ್ಯಾಟರಿ ಸೂಪರ್ ಫಾಸ್ಟ್ ಡಿಸಿ ಚಾರ್ಜರ್ ಮೂಲಕ 40 ನಿಮಿಷದಲ್ಲಿ ಶೇ 80 ರಷ್ಟು ಚಾರ್ಜ್ ಆಗಲಿದೆ. ಮನೆಯಲ್ಲಿ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಲು 7 ಗಂಟೆ ಬೇಕಾಗಲಿದೆ.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ದೆಹಲಿಗೆ ತೆರಳಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT