ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲ... ಕಾರು ಜೋಪಾನ

Last Updated 20 ಜೂನ್ 2019, 10:39 IST
ಅಕ್ಷರ ಗಾತ್ರ

ಮಳೆಗಾಲದಲ್ಲಿ ಕಾರು ಚಾಲನೆ, ಪಾರ್ಕಿಂಗ್‌ ಎಲ್ಲವೂ ಸವಾಲೇ ಸರಿ. ಧಾರಾಕಾರವಾಗಿ ಸುರಿಯುವ ಮಳೆ, ನೀರಿನಿಂದ ತುಂಬಿರುವ ರಸ್ತೆಗಳು, ಅಲ್ಲಲ್ಲಿ ಗುಂಡಿ... ಹೀಗೆ ಒಂದು ತಪ್ಪಿದರೆ ಇನ್ನೊಂದು ಅಡೆತಡೆ ಎದುರಾಗುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಸುರಕ್ಷಿತ ಚಾಲನೆಗೆ ಕಾರು ಸುಸ್ಥಿತಿಯಲ್ಲಿರಬೇಕು. ಇದಕ್ಕಾಗಿ ಚಾಲಕರು ಏನು ಮಾಡಬಹುದು ಎನ್ನುವ ಸಲಹೆಗಳು ಇಲ್ಲಿವೆ

ಮಳೆಗಾಲದ ತಪಾಸಣಾ ಶಿಬಿರಗಳು:ಬಹುತೇಕ ಎಲ್ಲ ಕಾರು ತಯಾರಕ ಸಂಸ್ಥೆಗಳು ತಮ್ಮ ಗ್ರಾಹಕರಿಗಾಗಿ ವಿಶೇಷ ಮುಂಗಾರು-ಪೂರ್ವ ಕಾರು ತಪಾಸಣಾ ಶಿಬಿರ ಆಯೋಜಿಸುತ್ತವೆ. ಉದಾಹರಣೆಗೆ, ‘ಹ್ಯಾಪಿ ವಿತ್ ನಿಸಾನ್’.

ಇದೇ ರೀತಿ ಅನೇಕರು ಈ ತಿಂಗಳಲ್ಲಿ ಇಂತಹ ಶಿಬಿರಗಳನ್ನು ನಡೆಸುತ್ತಾರೆ. ಇಂತಹ ಅಧಿಕೃತ ಶಿಬಿರಗಳಲ್ಲಿ, ಉತ್ತಮ ತರಬೇತಿ ಪಡೆದಿರುವ ಸಿಬ್ಬಂದಿಯಿಂದ ಕಾರುಗಳನ್ನು ತಪಾಸಣೆ ನಡೆಸುವುದು ಸೂಕ್ತ. ಏಕೆಂದರೆ, ಇವರು ದೀರ್ಘಕಾಲ ಬಾಳಿಕೆ ಬರುವಂತಹ ಮತ್ತು ವಿಶ್ವಾಸಾರ್ಹವಾದ ಅತ್ಯುತ್ತಮ ಬಿಡಿಭಾಗಗಳನ್ನಷ್ಟೇ ಬಳಸುತ್ತಾರೆ. ಈ ಶಿಬಿರಗಳನ್ನು ನಿರ್ಲಕ್ಷ್ಯ ಮಾಡಿ, ನಿಮ್ಮ ಅಮೂಲ್ಯವಾದ ಕಾರುಗಳನ್ನು ತರಬೇತಿಯಿಲ್ಲದ ಮೆಕ್ಯಾನಿಕ್ ಕೈಗೆ ಕೊಡಬೇಡಿ.

ಟೈರ್ ತಪಾಸಣೆ:ರಸ್ತೆಯೊಂದಿಗೆ ನಿರಂತರ ಸಂಪರ್ಕದಲ್ಲಿರುವ ಭಾಗವೆಂದರೆ, ಕಾರಿನ ಟೈರ್‌ಗಳು. ಮುಂಗಾರು ಆಗಮನದ ಮುನ್ನವೇ ಟೈರ್‌ಗಳ ತಪಾಸಣೆ ಮಾಡಿಕೊಳ್ಳುವ ಮೂಲಕ ಅಪಘಾತಗಳಿಂದ ತಪ್ಪಿಸಿಕೊಳ್ಳುವುದು ಮುಖ್ಯ.

ಟೈರ್‌ಗಳು ಅಸಮಾನವಾಗಿ ಕಿತ್ತುಹೋಗಿದ್ದರೆ, ಸವೆದಿದ್ದರೆ ಅಂತಹ ಟೈರ್‌ಗಳನ್ನು ಬದಲಾಯಿಸಿ. ಏಕೆಂದರೆ ಭಾರಿ ಮಳೆಯಾದ ನಂತರ ರಸ್ತೆಯಲ್ಲಿ ರೂಪುಗೊಳ್ಳುವ ನೀರಿನ ತೆಳು ಪದರದಲ್ಲಿ ಸೂಕ್ತ ಹಿಡಿತ ಸಾಧಿಸಲು ಅವುಗಳಿಗೆ ಸಾಧ್ಯವಾಗುವುದಿಲ್ಲ. ಎಲ್ಲ ಟೈರ್ ಬ್ರ್ಯಾಂಡ್‌ಗಳಲ್ಲಿಯೂ ಓದುವಂಥ ಸೂಚನೆಗಳಿದ್ದು, ಅವು ವೇರ್ ಆಂಡ್ ಟೇರ್ ಬಗ್ಗೆ ಪರಿಶೀಲಿಸಿಕೊಳ್ಳುವ ಮಾಹಿತಿ ನೀಡುತ್ತವೆ. ಹೀಗಾಗಿ ಮಳೆಗಾಲಕ್ಕೂ ಮುನ್ನವೇ ಹಳೇ ಟೈರುಗಳನ್ನು ಬದಲಿಸುವುದು ಸೂಕ್ತ. ದೀರ್ಘ ಬಾಳಿಕೆ ಬರಬೇಕು ಮತ್ತು ಅಹಿತಕರ ಘಟನೆ ತಡೆಯಬೇಕೆಂದರೆ ನಿಯಮಿತವಾಗಿ ಟೈರ್‌ಗಳನ್ನು ಅಲೈನ್ ಮಾಡಿಸಿಕೊಳ್ಳಿ.

ಆಗಾಗ ಟೈರ್ ಒತ್ತಡವನ್ನು ಪರಿಶೀಲಿಸುತ್ತಿರಿ. ಟೈರುಗಳ ಗಾಳಿಯನ್ನು ಕಡಿಮೆ ಮಾಡುವ ಬದಲು, ಗರಿಷ್ಠ ಒತ್ತಡ ಇರುವಂತೆ ಗಾಳಿ ತುಂಬಿಸಬೇಕು. ಇದರಿಂದ ಸಾಕಷ್ಟು ನೀರನ್ನು ಹೊರಕ್ಕೆ ಹಾಕಲು ಸಾಧ್ಯವಾಗಿ, ರಸ್ತೆ ಮೇಲಿನ ಹಿಡಿತ ಹೆಚ್ಚಿಸುತ್ತದೆ.

ಒಳಾಂಗಣ:ಎಷ್ಟೇ ಪ್ರಯತ್ನ ಪಟ್ಟರೂ ಮಳೆ ನೀರು ಕಾರಿನ ಒಳಕ್ಕೆ ಬರದಂತೆ ತಡೆಯುವುದು ಕಷ್ಟ. ಒಂದು ವೇಳೆ ನೀರು ಬರದೇ ಇದ್ದರೂ ನಾವು ಮಳೆಯಲ್ಲಿ ನೆನೆಯಬಾರದು ಎಂದೇನೂ ಇಲ್ಲವಲ್ಲ. ಹೀಗೆ ನೆಂದಾಗ ಬಟ್ಟೆ ಒದ್ದೆಯಾಗಿರುತ್ತದೆ. ಸೀಟಿನಲ್ಲಿ ಕುಳಿತಾಗ ಅದೂ ಸಹ ನೆನೆಯುತ್ತದೆ. ಒದ್ದೆಯಾದ ಸೀಟನ್ನು ಒಣಗಿಸದೇ ಇದ್ದರೆ ದುರ್ವಾಸನೆ ಬರುತ್ತದೆ. ಹೀಗಾಗಿ ಹೊತ್ತು ಸಾಗಿಸಬಹುದಾದ (ಪೋರ್ಟೆಬಲ್‌) ವಾಕ್ಯೂಂ ಕ್ಲೀನರ್‌ ಇಟ್ಟುಕೊಳ್ಳಿ. ಕಾರಿನ ಒಳಭಾಗ ಸ್ವಚ್ಛವಾಗಿಡಲು ರಬ್ಬರ್‌ ಮ್ಯಾಟ್‌ಗಳ ಬದಲಾಗಿ ಫ್ಯಾಬ್ರಿಕ್‌ ಮ್ಯಾಟ್‌ಗಳನ್ನು ಬಳಸಿ.

ಇವುಗಳ ಬಗ್ಗೆ ಗಮನವಹಿಸಿ

ಏ.ಸಿ:ಹೆಚ್ಚಿನವರು ಇದನ್ನು ಮಾಡುವುದೇ ಇಲ್ಲ. ಏರ್ ಕಂಡೀಷನಿಂಗ್ (ಏ.ಸಿ) ವ್ಯವಸ್ಥೆಯನ್ನು ಸೋಂಕುರಹಿತ ವನ್ನಾಗಿಸುವುದು ಅತಿ ಮುಖ್ಯ. ಇದರಿಂದ ಬ್ಯಾಕ್ಟೀರಿಯಾ ಸೃಷ್ಟಿಯನ್ನು ತಡೆದು, ದುರ್ವಾಸನೆ ಬರದಂತೆ ನೋಡಿಕೊಳ್ಳಬಹುದು. ಏ.ಸಿ ಯಾವತ್ತೂ ಐಡಿಯಲ್ ಸೆಟ್ಟಿಂಗ್ (ಸೂಚನೆಯಂತೆ) ನಲ್ಲೇ ಕಾರ್ಯನಿರ್ವಹಿಸಬೇಕು. ಆಗ ನೀರುಗಡ್ಡೆಯಾಗುವುದನ್ನು ತಪ್ಪಿಸಬಹುದು. ಕಂಪನಿಯ ಉನ್ನತ ಅಧಿಕಾರಿಯನ್ನು ಸಂಪರ್ಕಿಸಿ, ಸಮರ್ಪಕ ಏ.ಸಿ ಸೆಟ್ಟಿಂಗ್ ಬಗ್ಗೆ ತಿಳಿದುಕೊಳ್ಳಿ. ಎಲೆಕ್ಟ್ರಿಕಲ್‍ಗಳನ್ನು ಕೂಡ ಸೂಕ್ತ ತಪಾಸಣೆ ನಡೆಸಿ, ನೀರಿನ ಜತೆ ಸಂಪರ್ಕ ಸಾಧಿಸದಂತೆ ನೋಡಿಕೊಳ್ಳಿ.

ದೃಷ್ಟಿ ಗೋಚರತೆಗಾಗಿ ವೈಪರ್‌ಗಳು:ವಿಂಡ್ ಸ್ಕ್ರೀನ್ ವೈಪರ್‌ಗಳು ನಮ್ಮ ಕಣ್ಣ ಮುಂದೆಯೇ ಇದ್ದರೂ, ಎಲ್ಲರೂ ಅದನ್ನು ನಿರ್ಲಕ್ಷಿಸುತ್ತಾರೆ. ಬಹುತೇಕ ಕಾರು ಮಾಲೀಕರು ವೈಪರ್‌ಗಳ ಬಳಕೆಯ ಅವಧಿ ಮೀರಿದರೂ ಅದನ್ನೇ ಬಳಸುತ್ತಾರೆ. ಮಳೆಗಾಲದಲ್ಲಿ, ಇವು ದೃಷ್ಟಿ ಗೋಚರತೆಗೆ ಅಡ್ಡಿ ಉಂಟುಮಾಡಬಹುದು. ಹಾಗಾಗಿ ಸೂಕ್ತ ಸಮಯದಲ್ಲಿ, ಅದರಲ್ಲೂ ಮಳೆಗಾಲಕ್ಕೆ ಮುಂಚಿತವಾಗಿ ವೈಪರ್ ಬದಲಿಸಬೇಕು.

ಮಳೆಗಾಲದಲ್ಲಿ ಹೀಗೆ ಮಾಡಿ:ಮನೆಯಿಂದ ಹೊರಡುವ ಮುನ್ನ ಕಾರಿನ ಗಾಜಿಗೆಬ್ರ್ಯಾಂಡೆಡ್‌ ರೈನ್ ರೆಪೆಲ್ಲೆಂಟ್ ಹಚ್ಚಿ. ಅದು ಧಾರಾಕಾರ ಮಳೆಯಲ್ಲಿ ವಾಹನ ಚಲಾಯಿಸುವಾಗ ಗೋಚರತೆ ಕೊರತೆಯನ್ನು ನೀಗಿಸುತ್ತದೆ.

ಮಳೆಯಾದ ಬಳಿಕ ನಗರದಲ್ಲಿ ಅತ್ಯಧಿಕ ಟ್ರಾಫಿಕ್ ಉಂಟಾಗಿರುವ ಪ್ರದೇಶಗಳು ಯಾವುವು ಎಂಬುದನ್ನು ಅರಿಯಲು ಮ್ಯಾಪ್ ಬಳಸಿ.

ಹೊಸ ಪ್ರದೇಶಕ್ಕೆ ಹೋಗುವ ಮುನ್ನ, ಆ ಪ್ರದೇಶವು ಸುಲಭವಾಗಿ ಪ್ರವಾಹಕ್ಕೆ ಈಡಾಗುವಂಥದ್ದೇ ಎಂಬುದನ್ನು ಸ್ನೇಹಿತರಿಗೆ ಕೇಳಿ ತಿಳಿದುಕೊಳ್ಳಿ. ಉತ್ತಮ ಗಾಳಿ-ಬೆಳಕಿರುವ ಪ್ರದೇಶದಲ್ಲೇ ಕಾರು ಪಾರ್ಕ್ ಮಾಡಿ.

ಕಾರು ನೀರಿನಲ್ಲಿ ಸ್ಥಗಿತಗೊಂಡರೆ ಏನು ಮಾಡಬೇಕು?

ಭಯ, ಗಾಬರಿಗೆ ಒಳಗಾಗಬೇಡಿ. ನಿಮ್ಮ ಕಾರು ನೀರಿನಲ್ಲಿ ಸಿಲುಕಿಕೊಂಡಾಗ ಹೆಚ್ಚಿನವರು ಎಂಜಿನ್ ಸ್ಟಾರ್ಟ್ ಆಗಲೆಂದು ಕ್ರ್ಯಾಂಕ್ ಮಾಡಲು ಶುರುಮಾಡುತ್ತಾರೆ. ಯಾವ ಕಾರಣಕ್ಕೂ ಇದನ್ನು ಮಾಡಬೇಡಿ. ನೀರು ಒಳಕ್ಕೆ ಪ್ರವೇಶಿಸಿದೆ ಎಂದು ನಿಮಗೆ ಅನುಮಾನ ಮೂಡಿದ ಕೂಡಲೇ ಎಂಜಿನ್ ಸ್ವಿಚ್ ಆಫ್ ಮಾಡಿ. ಹೆಚ್ಚಿನ ಹಾನಿಯಾಗಿಲ್ಲ ಎಂಬ ಭಾವನೆ ಬಂದರೆ, ಹಾಗೆಯೇ ಸ್ವಲ್ಪ ಕಾಯಿರಿ. ಇಲ್ಲವೆಂದಾದರೆ, ಸಮಯ ವ್ಯರ್ಥ ಮಾಡದೇ, 24x7 ರಸ್ತೆ-ಬದಿಯ ನೆರವಿಗೆ ಕರೆ ಮಾಡಿ.

ಇನ್ನು ಕೊನೆಯ ಟಿಪ್ಸ್ ಏನೆಂದರೆ- ರಸ್ತೆ ಬದಿಯ ನೆರವು ಸೇರಿದಂತೆ ತುರ್ತು ಸಂಪರ್ಕ ಸಂಖ್ಯೆಗಳು ಸುಲಭವಾಗಿ ಕೈಗೆ ಸಿಗುವಂತೆ ಇಟ್ಟುಕೊಳ್ಳಿ. ಈಗ, ಬಹುತೇಕ ಕಾರು ಕಂಪನಿಗಳು ನಿಸಾನ್ ಕನೆಕ್ಟ್‌ನಂತಹ ತಮ್ಮದೇ ಸ್ವಂತ ಅಪ್ಲಿಕೇಷನ್‍ಗಳನ್ನು ಹೊಂದಿವೆ.
ಆ ಮೂಲಕ ಸಂಪರ್ಕ ಸಾಧಿಸಿ ಕಾರನ್ನು ಸರಿಪಡಿಸಿಕೊಳ್ಳಬಹುದು.

(ಲೇಖಕ: ನಿಸಾನ್‌ ಮೋಟರ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಆಫ್ಟರ್‌ ಸೇಲ್ಸ್‌ನ ಪ್ರಧಾನ ವ್ಯವಸ್ಥಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT