ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕ ವಾಹನ ಸಗಟು ಮಾರಾಟ ಹೆಚ್ಚಳ

ಸೆಮಿಕಂಡಕ್ಟರ್‌ ಚಿಪ್‌ ಪೂರೈಕೆಯಲ್ಲಿ ಸುಧಾರಣೆ: ಎಸ್‌ಐಎಎಂ
Last Updated 13 ಜುಲೈ 2022, 14:13 IST
ಅಕ್ಷರ ಗಾತ್ರ

ನವದೆಹಲಿ: ಪ್ರಯಾಣಿಕ ವಾಹನ ಸಗಟು ಮಾರಾಟವು 2021ರ ಜೂನ್‌ಗೆ ಹೋಲಿಸಿದರೆ 2022ರ ಜೂನ್‌ನಲ್ಲಿ ಶೇಕಡ 19ರಷ್ಟು ಏರಿಕೆ ಕಂಡಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಮಾಹಿತಿ ನೀಡಿದೆ.

ಸೆಮಿಕಂಡಕ್ಟರ್ ಚಿಪ್‌ ಪೂರೈಕೆಯಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ತಿಳಿಸಿದೆ.

ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ಮಾರಾಟವು 6.46 ಲಕ್ಷದಿಂದ 9.10 ಲಕ್ಷಕ್ಕೆ, ಅಂದರೆ ಶೇ 41ರಷ್ಟು, ಹೆಚ್ಚಾಗಿದೆ. ವಾಣಿಜ್ಯ ವಾಹನ ಮಾರಾಟ 1.05 ಲಕ್ಷದಿಂದ 2.24 ಲಕ್ಷಕ್ಕೆ ಏರಿಕೆ ಆಗಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮಾರಾಟದಲ್ಲಿಯೂ ಏರಿಕೆ ಕಂಡುಬಂದಿದೆ.

ಹಣದುಬ್ಬರದ ಒತ್ತಡ ಕಡಿಮೆ ಮಾಡಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಎಕ್ಸೈಸ್‌ ಸುಂಕ ಕಡಿಮೆ ಮಾಡುವ ಮೂಲಕ ಪೆಟ್ರೋಲ್‌, ಡೀಸೆಲ್‌ ದರ ಇಳಿಸಿದೆ. ಈ ಎಲ್ಲಾ ಕ್ರಮಗಳಿಗಾಗಿ ಉದ್ಯಮವು ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತದೆ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ತಿಳಿಸಿದ್ದಾರೆ.

ಸಿಎನ್‌ಜಿ ದರವು ಏಳು ತಿಂಗಳಿನಿಂದಲೂ ಏರಿಕೆ ಆಗುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

=

ಮಾರಾಟದ ವಿವರ

ವಾಹನ;2021ರ ಜೂನ್‌;2022 ಜೂನ್‌

ಪ್ರಯಾಣಿಕ ವಾಹನ;2,31,633;2,75,788

ದ್ವಿಚಕ್ರ;10,60,565;13,08,764

ತ್ರಿಚಕ್ರ;9,404;26,701

ಎಲ್ಲಾ ಮಾದರಿಗಳು; 13,01,602;16,11,300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT