ಸೋಮವಾರ, ಸೆಪ್ಟೆಂಬರ್ 20, 2021
23 °C

ಏಪ್ರಿಲಿಯಾ: ಇಟಲಿಯಲ್ಲಿ ವಿನ್ಯಾಸ, ಭಾರತಕ್ಕಾಗಿ ವಿನ್ಯಾಸ!

ಪಿಟಿಐ Updated:

ಅಕ್ಷರ ಗಾತ್ರ : | |

ಪಿಯಾಜ್ಯೊ ಕಂಪನಿಯು ಹೊಸ ಸ್ಕೂಟರ್‌ ‘ಏಪ್ರಿಲಿಯಾ ಎಸ್‌ಎಕ್ಸ್‌ಆರ್‌ 160’ಅನ್ನು ಕಳೆದ ವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪುಣೆಯಲ್ಲಿ ಇದರ ಎಕ್ಸ್–ಷೋರೂಂ ಬೆಲೆ ₹ 1.26 ಲಕ್ಷ. ಆರಂಭಿಕ ಮೊತ್ತವಾಗಿ ₹ 5 ಸಾವಿರ ಪಾವತಿಸಿ ಈ ಸ್ಕೂಟರ್‌ಅನ್ನು ಬುಕ್‌ ಮಾಡಬಹುದು. ಬುಕಿಂಗ್ ಮಾಡುವ ಸೌಲಭ್ಯ ಪಿಯಾಜ್ಯೊ ಡೀಲರ್‌ಗಳಲ್ಲಿ ಅಷ್ಟೇ ಅಲ್ಲದೆ, apriliaindia.com ತಾಣದಲ್ಲಿಯೂ ಲಭ್ಯವಿದೆ.

ಈ ಸ್ಕೂಟರ್‌ನಲ್ಲಿ ಇರುವುದು ಒಂದು ಸಿಲಿಂಡರ್‌ನ, 4–ಸ್ಟ್ರೋಕ್‌ ಎಂಜಿನ್‌. ವಾಹನದ ಇಂಧನ ಟ್ಯಾಂಕ್‌ನಲ್ಲಿ ಒಂದು ಬಾರಿಗೆ ಗರಿಷ್ಠ ಏಳು ಲೀಟರ್ ಪೆಟ್ರೋಲ್ ತುಂಬಿಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.

‘ಈ ವಾಹನವನ್ನು ಇಟಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಆದರೆ, ವಿನ್ಯಾಸ ಮಾಡಿದ್ದು ಭಾರತದ ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡು. ಅದ್ಭುತ ವಿನ್ಯಾಸ, ಉತ್ತಮ ಪರ್ಫಾರ್ಮೆನ್ಸ್‌ ಮತ್ತು ಆರಾಮದಾಯಕ ಅನುಭವ ನೀಡುವ ವಾಹನ ಇದು’ ಎಂದು ಪಿಯಾಜ್ಯೊ ಕಂಪನಿಯ ಭಾರತದ ವಿಭಾಗದ ಅಧ್ಯಕ್ಷ ಡಿಯಾಗೊ ಗ್ರಫಿ ಹೇಳಿದ್ದಾರೆ.

ಕಂಪನಿಯು ಭಾರತದಲ್ಲಿ ಹೊಂದಿರುವ ಎಲ್ಲ ಡೀಲರ್‌ಗಳಿಂದಲೂ ಈ ಸ್ಕೂಟರ್ ಖರೀದಿಸಬಹುದು. ‘ಭಾರತದಲ್ಲಿ ಪ್ರೀಮಿಯಂ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಇದು ಹೊಸ ಮಾನದಂಡವನ್ನು ರೂಪಿಸಲಿದೆ ಎಂಬುದು ನಮ್ಮ ನಂಬಿಕೆ’ ಎಂದೂ ಗ್ರಫಿ ಹೇಳಿದ್ದಾರೆ. ಏಪ್ರಿಲಿಯಾ ಎಸ್‌ಎಕ್ಸ್‌ಆರ್‌ 160 ದ್ವಿಚಕ್ರ ವಾಹನದಲ್ಲಿ ಆ್ಯಂಟಿ–ಲಾಕ್‌ ಬ್ರೇಕಿಂಗ್ (ಎಬಿಎಸ್) ವ್ಯವಸ್ಥೆ ಇದೆ.

ಡಿಜಿಟಲ್‌ ಸ್ಪೀಡೊಮೀಟರ್‌, ವಾಹನದ ಮೈಲೇಜ್ ತೋರಿಸುವ ವ್ಯವಸ್ಥೆ, ಎಂಜಿನ್‌ನಲ್ಲಿ ದೋಷ ಕಂಡುಬಂದರೆ ಅದನ್ನು ಸವಾರರಿಗೆ ತಿಳಿಸುವ ವ್ಯವಸ್ಥೆ ಕೂಡ ಇದರಲ್ಲಿ ಇದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು