ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ಗಳ ಬಾಹುಬಲಿಆರ್‌ಇ ಕೆಎಕ್ಸ್‌

ಇಟಲಿಯ ಮಿಲಾನ್ ನಲ್ಲಿ ರಾಯಲ್ ಮಿಂಚು
Last Updated 14 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಢು ಗ್… ಢುಗ್… ಢುಗ್… ಎಂದು ಇದು ರಸ್ತೆಯಲ್ಲಿ ಸದ್ದು ಮಾಡುತ್ತಾ ಬರುತ್ತಿದ್ದಾರೆ, ಪಾದಚಾರಿಗಳು, ಬೈಕ್ ಸವಾರರು ಮಾತ್ರವಲ್ಲ, ಐಷಾರಾಮಿ ಕಾರುಗಳಲ್ಲಿ ಹೋಗುವವರು ಒಮ್ಮೆ ಈ ಬೈಕ್ ನತ್ತ ತಿರುಗಿ ನೋಡುತ್ತಾರೆ. ಅಂಥ ರಾಜಠೀವಿಯನ್ನು ತಂದುಕೊಟ್ಟ ಬೈಕ್ ರಾಯಲ್ ಎನ್ ಫೀಲ್ಡ್ ಬುಲೆಟ್.

ಈ ಬೈಕ್ ತಯಾರಿಕಾ ಕಂಪನಿ ಈಗ ಹೆಚ್ಚು ಎಂಜಿನ್ ಸಾಮರ್ಥ್ಯದ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಇಳಿಸಲು ಸಿದ್ಧತೆ ನಡೆಸುತ್ತಿದೆ. ಈ ಸಂಬಂಧ ತನ್ನ ತವರು ನೆಲದಲ್ಲಿ (ಯುರೋಪ್‌) ನಡೆಯುತ್ತಿರುವ ಇಐಸಿಎಂಎ 'ಬೈಕ್‌ ಎಕ್ಸ್‌ಪೋ-2018' ರಲ್ಲಿ ರಾಯಲ್‌ ಎನ್‌ಫೀಲ್ಡ್‌ ಬಾಬ್ಬರ್‌ ಸ್ಪೈಲ್‌ ಕೆಎಕ್ಸ್‌ ಬೈಕ್‌ ಮಾದರಿ ಪ್ರದರ್ಶಿಸಿದೆ. ಇದು ಅತಿ ಹೆಚ್ಚು ಸಾಮರ್ಥ್ಯದ ಎಂಜಿನ್‌ ಹೊಂದಿರುವ ಆರ್‌ಇ ಬೈಕ್‌ ಎಂಬ ಖ್ಯಾತಿಗೆ ಒಳಗಾಗಿದೆ.

ಇಟಲಿಯ ಮಿಲಾನ್‌ ನಗರದಲ್ಲಿ ಪ್ರತಿವರ್ಷ ಆಯೋಜನೆಗೊಳ್ಳುವ ಬೈಕ್‌ ಎಕ್ಸ್‌ಫೊದಲ್ಲಿ ಜಗತ್ತಿನ ಅತಿ ದೊಡ್ಡ ಬೈಕ್‌ ತಯಾರಿಕ ಕಂಪನಿಗಳು ತಮ್ಮ ಉತ್ಪನ್ನವನ್ನು ಪ್ರದರ್ಶನ ಮಾಡುತ್ತವೆ. ಪ್ರಮುಖವಾಗಿ ಭವಿಷ್ಯದ ಬೈಕ್‌ಗಳ ಮಾದರಿಗಳನ್ನು ಅನಾವರಣಗೊಳಿಸುತ್ತದೆ. ಅದರ ಸಾಲಿಗೆ ಈ ಬಾರಿ ರಾಯಲ್‌ ಎನ್‌ಫೀಲ್ಡ್ ಸಂಸ್ಥೆಯೂ ಸೇರಿಕೊಂಡಿದೆ. ಆರ್‌ಇಯೂ ಈವರೆಗೂ ಮಾರುಕಟ್ಟೆಗೆ ಪರಿಚಯ ಮಾಡಿರುವ ಬೈಕ್‌ಗಳಲ್ಲಿಯೇ ಕೆಎಕ್ಸ್‌ ಬೈಕ್‌ಗಳು ಸಾಕಷ್ಟು ವಿಭಿನ್ನವಾಗಿದ್ದು, ವಿ–ಟ್ವಿನ್‌ ಎಂಜಿನ್‌ ಹೊತ್ತು ವೈಶಿಷ್ಟ್ಯದಿಂದ ಎಕ್ಸ್‌ಫೋದಲ್ಲಿ ಎಲ್ಲರ ಗಮನ ಸೆಳೆಯುತಿತ್ತು.

ದೇಶಿ ಮಾರುಕಟ್ಟೆಯಲ್ಲಿ ಇತರ ಬೈಕ್‌ ತಯಾರಿಕಾ ಕಂಪನಿಗಳಿಗೆ ಸ್ಫರ್ಧೆ ನೀಡಿ ಯಶ ಕಂಡಿರುವ ರಾಯಲ್ ಎನ್‌ಫೀಲ್ಡ್‌ ಸಂಸ್ಥೆಯೂ, ಸಧ್ಯಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯತ್ತ ಮುಖ ಮಾಡಿದೆ.

ಸದ್ಯ ವಿಶ್ವದ ಅನೇಕ ಮೇರು ಬೈಕ್‌ ತಯಾರಿಕಾ ಕಂಪನಿಗಳು ಬಾಬ್ಬರ್‌ ಸ್ಟೈಲ್‌ ಮಾದರಿಯ ಬೈಕ್‌ಗಳು ಮಾರುಕಟ್ಟೆಗೆ ಪರಿಚಯಿಸಿ, ಗ್ರಾಹಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಆದರೂ ಸಹ ರಾಯಲ್‌ ಎನ್‌ಫೀಲ್ಡ್‌ ಸಂಸ್ಥೆಯೂ ಈ ಹಿಂದೆ 1937ರಲ್ಲಿ ನಿರ್ಮಾಣ ಮಾಡಿದ್ದ ಆರ್‌ಇ ಕೆಎಕ್ಸ್‌ ಮಾದರಿಯ ಬೈಕ್‌ನಿಂದ ಪ್ರೇರಿತಗೊಂಡು ಬಾಬ್ಬರ್ ಸ್ಟೈಲ್‌ನ ಹೊಸ ಕೆಎಕ್ಸ್‌ ಬೈಕ್‌ ಸಿದ್ಧಗೊಳಿಸುತ್ತಿದ್ದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಆರ್‌ಇ ಬ್ರಾಂಡ್‌ನ್ನು ಮಿಂಚಿಸುವ ಗುರಿ ಹೊಂದಿರುವಂತಿದೆ.

ಇದರ ಬೆನ್ನಲ್ಲೇ ಅಮೆರಿಕಾದ ಬೈಕ್‌ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪನೆಗೆ ಮುಂದಾಗಿರುವ ರಾಯಲ್ ಎನ್‌ಫೀಲ್ಡ್‌ ಸಂಸ್ಥೆಯೂ ಅಲ್ಲಿನ ‘ಇಂಡಿಯನ್ ಮೋಟಾರ್‌ ಸೈಕಲ್‌’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಯೂ ಹೊಸ ಕೆಎಕ್ಸ್‌ ಬೈಕ್‌ಗಳಿಗೆ ಬೇಕಿರುವ ತಂತ್ರಜ್ಞಾನ ಮತ್ತು ಕೆಲ ತಾಂತ್ರಿಕ ಸಹಾಯಹಸ್ತವನ್ನು ನೀಡಿ, ಅವುಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಕೈ ಜೋಡಿಸಲಿದೆ.

ಅಷ್ಟೇ ಅಲ್ಲ ರಾಯಲ್‌ ಎನ್‌ಫೀಲ್ಡ್‌ನ ಹೊಸ ಬಾಬ್ಬರ್‌ ಸ್ಟೈಲ್‌ನ ಕೆಎಕ್ಸ್‌ ಬೈಕ್‌ಗಳು ಭಾರತಕ್ಕೆ ‘ಬಿಎಸ್‌ 6’ ಆವೃತ್ತಿಯ ಎಂಜಿನ್‌ ಹೊತ್ತು ಬರಲಿದೆ. ಈ ಬೈಕ್‌ನಲ್ಲಿರುವ ಎಂಜಿನ್‌ ದಕ್ಷತೆ ಮತ್ತು ಇಂಗಾಲದ ಪ್ರಮಾಣಕ್ಕೆ ಹೊಂದಿಸಿಕೊಳ್ಳಲು ಈ ರೀತಿಯ ಕ್ರಮಕ್ಕೆ ಸಂಸ್ಥೆ ಮುಂದಾಗಿದೆ.

ಬೈಕ್‌ಗಳ ರಾಜ

ಎಂಜಿನ್‌ ಸಾಮರ್ಥ್ಯದಲ್ಲಿಯೇ ಬಲಿಷ್ಠ ಮತ್ತು ಸದೃಢವಾಗಿರುವ ಆರ್‌ಇ ಬಾಬ್ಬರ್ ಸ್ಟೈಲ್‌ ಕೆಎಕ್ಸ್ ಬೈಕ್‌, 90 ಬಿಎಚ್‌ಪಿ ಹಾರ್ಸ್‌ ಪವರ್‌ ಹೊರಹಾಕುವಷ್ಟು ಶಕ್ತಿಯನ್ನು ಹೊಂದಿರುವ 836 ಸಿಸಿ ಎಂಜಿನ್‌ ಹೊಂದಿರಲಿದೆ. ಹಾಗಾಗಿ ಇದನ್ನು ಬೈಕ್ ಗಳ ‘ಬಾಹುಬಲಿ’ ಎನ್ನಬಹುದು. ಮುಂದಿನ ಚಕ್ರದಲ್ಲಿ ಟ್ವಿನ್‌ ಡಿಸ್ಕ್‌ ಬ್ರೇಕ್‌ ಇದ್ದು, ಡ್ಯುಯಲ್‌ ಚಾನೆಲ್‌ ಎಬಿಎಸ್‌, ಟ್ರಯಂಫ್‌ ಬೊನೆವಿಲ್ಲೆ ಮಾದರಿಯ ಸಿಂಗಲ್‌ ಸೀಟ್‌, ಎಲ್‌ಇಡಿ ಹೆಡ್‌ಲೈಟ್‌, ಫ್ಲ್ಯಾಟ್‌ ಹ್ಯಾಂಡಲ್‌ಬಾರ್‌ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಉತ್ಕೃಷ್ಟ ಸೌಲಭ್ಯಗಳು ಈ ಬೈಕ್‌ನಲ್ಲಿರಲಿದೆ.

ರಸ್ತೆಗಳಿಯುವುದು ಯಾವಾಗ

ಇಟಾಲಿಯ ಮಿಲಾನ್‌ ನಗರದಲ್ಲಿ ನಡೆದ ಆಟೊ ಎಕ್ಸ್‌ಫೋದಲ್ಲಿ ಸದ್ಯಕ್ಕೆ ರಾಯಲ್‌ ಎನ್‌ಫೀಲ್ಡ್‌ ಸಂಸ್ಥೆಯೂ ತನ್ನ ನೂತನ ಬಾಬ್ಬರ್ ಶೈಲಿಯ ಕೆಎಕ್ಸ್ ಬೈಕ್‌ನ ಕಾನ್ಸೆಪ್ಟ್‌ ಮಾತ್ರವೇ ಅನಾವರಣ ಮಾಡಿದೆ. ಈ ಬೈಕ್‌ನ ಬಿಡುಗಡೆಗೂ ಮೊದಲು ‘ಕಾಂಟಿನೆಂಟಲ್‌ ಜಿಟಿ 650’ ಮತ್ತು ‘ಇಂಟರ್‌ಸೆಪ್ಟರ್‌ 650’ ಬೈಕ್‌ಗಳ ಬಿಡುಗಡೆಯಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ನಡೆಯುತ್ತಿದೆ. ಒಟ್ಟಿನಲ್ಲಿ ಸಾಲು ಸಾಲು ಬಲಿಷ್ಠ ಬೈಕ್‌ಗಳ ಬಿಡುಗಡೆಗೆ ಭರ್ಜರಿ ತಯಾರಿಯಲ್ಲಿ ರಾಯಲ್‌ ಎನ್‌ಫೀಲ್ಡ್‌ ಸಂಸ್ಥೆಯೂ ಮರೆಯಲ್ಲಿಯೇ ಸಿದ್ಧತೆ ನಡೆಸುತ್ತಿರುವುದಂತೂ ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT