ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಲ್ಸ್ ರಾಯ್ಸ್‌: ಹೈಬ್ರಿಡ್ ಎಂಜಿನ್ ವಿಮಾನ ಸಿದ್ಧ, ಪ್ರಾಯೋಗಿಕ ಹಾರಾಟಕ್ಕೆ ಸಿದ್ಧತೆ

Published 19 ಜೂನ್ 2023, 7:27 IST
Last Updated 19 ಜೂನ್ 2023, 7:27 IST
ಅಕ್ಷರ ಗಾತ್ರ

ರೋಲ್ಸ್‌ ರಾಯ್ಸ್‌ನ ವಿಲಾಸಿ ಕಾರು ಎಲ್ಲರಿಗೂ ಪರಿಚಿತ. ಕಾರು ತಯಾರಿಕೆಗೂ ಮೊದಲು ವಿಮಾನಗಳ ಎಂಜಿನ್ ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದ್ದ ಈ ಕಂಪನಿ, ಇದೀಗ ನವೀಕರಿಸಲಾಗದ ಇಂಧನ ಬಳಕೆಯ ಜತೆಗೆ ಹೈಬ್ರಿಡ್ ಎಲೆಕ್ಟ್ರಿಕ್ ಎಂಜಿನ್‌ ಅಭಿವೃದ್ಧಿಪಡಿಸಿದೆ.

ವಿಮಾನಯಾನ ಕ್ಷೇತ್ರದಲ್ಲಿ ಅತ್ಯಂತ ವಿನೂತನವಾದ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ರೋಲ್ಸ್ ರಾಯ್ಸ್‌, ಇದರಲ್ಲಿ ಎಲೆಕ್ಟ್ರಿಕ್‌ ವರ್ಟಿಕಲ್ ಟೇಕ್‌ ಆಫ್‌ ಅಂಡ್ ಲ್ಯಾಂಡಿಂಗ್ (ಇವಿಟಿಒಎಲ್) ಇದೆ. ನಗರ ಪ್ರದೇಶದಲ್ಲಿ ವಾಯುಯಾನಕ್ಕೆ ಬಳಸಬಹುದಾದ ಈ ಎಂಜಿನ್ ಅಳವಡಿಸಿರುವ ವಿಮಾನದಲ್ಲಿ ಗರಿಷ್ಠ 19 ಜನರಿಗೆ ಮಾತ್ರ ಪ್ರಯಾಣಿಸಲು ಸಾಧ್ಯ.

500ಕೆ.ವಿ.ಯಿಂದ 1200ಕೆ.ವಿ. ಸಾಮರ್ಥ್ಯದ ಈ ಎಂಜಿನ್‌ ಹಾರಾಟ ಸಂದರ್ಭದಲ್ಲೇ ತನ್ನ ಅಗತ್ಯದ ಶಕ್ತಿಯನ್ನು ಉತ್ಪಾದಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ತಂತ್ರಜ್ಞಾನದ ಮುಂದುವರಿದ ಭಾಗವಾಗಿ ಜಲಜನಕ ಇಂಧನ ಬಳಕೆಯ ಎಂಜಿನ್ ಅಭಿವೃದ್ಧಿಪಡಿಸಲಾಗುವುದು. ಅದು ಭವಿಷ್ಯದಲ್ಲಿ ದೂರದ ಪ್ರಯಾಣಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಕಂಪನಿ ಹೇಳಿದೆ.

’ಸಂಪೂರ್ಣ ವಿದ್ಯುತ್ ಹಾಗೂ ಹೈಬ್ರಿಡ್‌ ವಿದ್ಯುತ್‌ ಚಾಲಿತ ವಿಮಾನಗಳ ತಯಾರಿಯಲ್ಲಿ ಸದಾ ಹೊಸತನ್ನು ಪರಿಚಯಿಸುತ್ತಿರುವ ರೋಲ್ಸ್ ರಾಯ್ಸ್‌, ಟರ್ಬೊಜನರೇಟರ್‌ ಸಾಮರ್ಥ್ಯದ ಎಂಜಿನ್ ಅಭಿವೃದ್ಧಿಪಡಿಸಿದೆ. ಇದರಿಂದ ರೋಲ್ಸ್‌ ರಾಯ್ಸ್‌ನ ಗ್ರಾಹಕರು ಹೆಚ್ಚು ಮಾರ್ಗಗಳಲ್ಲಿ ವಿದ್ಯುತ್ ಚಾಲಿತ ವಿಮಾನಗಳ ಮೂಲಕ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಲು ಸಾಧ್ಯವಾಗಲಿದೆ. ಜತೆಗೆ ಮಾಲಿನ್ಯ ಪ್ರಮಾಣವೂ ತಗ್ಗಲಿದೆ‘ ಎಂದು ಕಂಪನಿಯ ವಿದ್ಯುತ್ ಚಾಲಿತ ವಾಹನಗಳ ವಿಭಾಗದ ಅಧ್ಯಕ್ಷ ಒಲಾಫ್ ಒಟ್ಟೊ ತಿಳಿಸಿದ್ದಾರೆ.

’ಈ ಟರ್ಬೊಜನರೇಟರ್‌ ಎಂಜಿನ್‌ನಲ್ಲಿ ರೋಲ್ಸ್‌ ರಾಯ್ಸ್‌ ವಿದ್ಯುತ್ ಚಾಲಿತ ಹಾಗೂ ನವೀಕರಿಸಲಾಗದ ಇಂಧನ ಬಳಕೆಯ ಸಣ್ಣ ಎಂಜಿನ್‌ ಬಳಸಲಾಗಿದೆ. ಹೀಗಾಗಿ ಹಾರಾಟ ಸಮಯದಲ್ಲಿ ಎರಡೂ ಎಂಜಿನ್‌ಗಳನ್ನು ಏಕಕಾಲಕ್ಕೆ ಅಥವಾ ಒಂದಾದ ನಂತರ ಮತ್ತೊಂದರಂತೆಯೂ ಬಳಸಲು ಸಾಧ್ಯ. ಮರು ಚಾರ್ಜ್‌ ಮಾಡಬಲ್ಲ ಬ್ಯಾಟರಿ ಬಳಕೆಯಿಂದಾಗಿ ಹಾರಾಟ ಸಂದರ್ಭದಲ್ಲಿ ಸುಲಭವಾಗಿ ಎಂಜಿನ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಬಹುದಾಗಿದೆ. ಈ ತಂತ್ರಜ್ಞಾನ ಅಭಿವೃದ್ಧಿಗೆ ಜರ್ಮನಿಯ ಆರ್ಥಿಕ ವ್ಯವಹಾರ ಹಾಗೂ ಹವಾಮಾನ ಮಂತ್ರಾಲಯವು ಭಾಗಶಃ ಅನುದಾನ ನೀಡಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT