ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಚಾಲಿತ ವಾಹನ ಮಾರಾಟ: 2020–21ರಲ್ಲಿ ಶೇ 20ರಷ್ಟು ಇಳಿಕೆ

Last Updated 22 ಏಪ್ರಿಲ್ 2021, 14:11 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ಮಾರಾಟವು 2019–20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020–21ನೇ ಹಣಕಾಸು ವರ್ಷದಲ್ಲಿ ಶೇಕಡ 20ರಷ್ಟು ಇಳಿಕೆ ಆಗಿದೆ ಎಂದು ವಿದ್ಯುತ್‌ ಚಾಲಿತ ವಾಹನಗಳ ತಯಾರಕರ ಸಂಘ (ಎಸ್‌ಎಂಇವಿ) ಗುರುವಾರ ತಿಳಿಸಿದೆ.

2019–20ರಲ್ಲಿ 2.95 ಲಕ್ಷ ಇ.ವಿ.ಗಳು ಮಾರಾಟ ಆಗಿದ್ದವು. 2020–21ರಲ್ಲಿ 2.36 ಲಕ್ಷ ವಿದ್ಯುತ್ ಚಾಲಿತ ವಾಹನಗಳು ಮಾರಾಟ ಆಗಿವೆ ಎಂದು ಸಂಘ ಮಾಹಿತಿ ನೀಡಿದೆ.

‘2021ನೇ ಹಣಕಾಸು ವರ್ಷ ಆರಂಭವಾಗುವ ಮುನ್ನ ಉತ್ತಮ ಬೆಳವಣಿಗೆ ನಿರೀಕ್ಷಿಸಿದ್ದೆವು. ಆದರೆ ವಿವಿಧ ಕಾರಣಗಳಿಂದಾಗಿ ಮಾರಾಟದಲ್ಲಿ ಬೆಳವಣಿಗೆ ಕಂಡುಬಂದಿಲ್ಲ. ವಿದ್ಯುತ್ ಚಾಲಿತ ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇದೆ’ ಎಂದು ಸಂಘದ ಪ್ರಧಾನ ನಿರ್ದೇಶಕ ಸೋಹಿಂದರ್‌ ಗಿಲ್‌ ತಿಳಿಸಿದ್ದಾರೆ.

ಜನರು ಸುಧಾರಿತ ಲಿಥಿಯಂ ಅಯಾನ್ ಬ್ಯಾಟರಿಯ ವಾಹನಗಳನ್ನು ಖರೀದಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ನಗರದಲ್ಲಿ ಬಳಸುವ (ಸಿಟಿ–ಸ್ಪೀಡ್‌) ಮತ್ತು ಅತಿ ವೇಗದ (ಹೈ–ಸ್ಪೀಡ್) ದ್ವಿಚಕ್ರ ವಾಹನಗಳ ಮಾರಾಟ ಪ್ರಗತಿ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ಫೇಮ್‌–2 ಯೋಜನೆಯಡಿಗುರಿ ಸಾಧಿಸಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. 2022ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಗುರಿಯನ್ನು ಸಾಧಿಸಲು ಸರ್ಕಾರವು ತನ್ನ ನೀತಿಯಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇ.ವಿ.ಗಳಿಗೆ ಬ್ಯಾಂಕ್‌ಗಳಿಂದ ಹಣಕಾಸಿನ ನೆರವಿನ ಕೊರತೆಯು ಇನ್ನೂ ಇದೆ. ಎಸ್‌ಬಿಐ ಮತ್ತು ಎಕ್ಸಿಸ್‌ನಂತಹ ಕೆಲವೇ ಬ್ಯಾಂಕ್‌ಗಳು ಆಯ್ದ ಮಾದರಿ ವಾಹನಗಳಿಗೆ ಸಾಲ ನೀಡುತ್ತಿವೆ. ಮಾರಾಟ ಹೆಚ್ಚಿಸಲು ಅನುಕೂಲ ಆಗುವಂತೆ ಸಾಲ ನೀಡಲು ಬ್ಯಾಂಕುಗಳಿಗೆ ಸರ್ಕಾರವು ಸೂಚನೆ ನೀಡಬೇಕು ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT