ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಏಸ್ ಉಚಿತ ತಪಾಸಣಾ ಶಿಬಿರ

Last Updated 14 ಆಗಸ್ಟ್ 2019, 8:59 IST
ಅಕ್ಷರ ಗಾತ್ರ

ಟಾಟಾ ಮೋಟರ್ಸ್‌ ದೇಶದ ಮೊದಲ ಮಿನಿಟ್ರಕ್‌ (ಸಣ್ಣ ಸರಕು ಸಾಗಣೆ ವಾಹನ) ‘ಟಾಟಾ ಏಸ್‌’ ಬಿಡುಗಡೆಯಾದಾಗಿನಿಂದ ಈವರೆಗೆ 22 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಈ ಮೈಲುಗಲ್ಲು ತಲುಪಿದ ಸಂಭ್ರಮದಲ್ಲಿ ಕಂಪನಿಯು ಟಾಟಾ ಏಸ್‌ ಮತ್ತು ಟಾಟಾ ಝಿಪ್‌ ಮಿನಿ ಮತ್ತು ಮೈಕ್ರೊ ಟ್ರಕ್‌ಗಳಿಗೆ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಆಗಸ್ಟ್‌ 31ರವರೆಗೆ ಈ ಶಿಬಿರವಿರಲಿದೆ.

ಟಾಟಾ ಏಸ್‌ ಮತ್ತು ಟಾಟಾ ಝಿಪ್ ಟ್ರಕ್‌ಗಳ ಉಚಿತ ತಪಾಸಣಾ ಶಿಬಿರವನ್ನು ದೇಶದ ಎಲ್ಲೆಡೆ ಆಯೋಜಿಸಲಾಗಿದೆ. ಟಾಟಾ ಅಧಿಕೃತ ಸರ್ವಿಸ್ ಸೆಂಟರ್‌ಗಳು (ಟಿಎಎಸ್‌ಎಸ್‌) ಮತ್ತು ಡೀಲರ್‌ ಸರ್ವಿಸ್ ಸೆಂಟರ್‌ಗಳಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ದೇಶದಾದ್ಯಂತ 1,400ಕ್ಕೂ ಹೆಚ್ಚು ಸರ್ವಿಸ್ ಸೆಂಟರ್‌ಗಳಲ್ಲಿ ಈ ಸವಲತ್ತು ಲಭ್ಯವಿರಲಿದೆ ಎಂದು ಟಾಟಾ ಮೋಟರ್ಸ್ ಹೇಳಿದೆ.

ಟ್ರಕ್‌ನ ತಪಾಸಣೆ ಸಂಪೂರ್ಣ ಉಚಿತವಾಗಿರಲಿದೆ. ಬಿಡಿಭಾಗಗಳು ಮತ್ತು ರಿಪೇರಿ ಶುಲ್ಕದ ಮೇಲೆ ಶೇ 10ರಷ್ಟು ರಿಯಾಯಿತಿ ಇರಲಿದೆ. ಟಾಟಾ ಏಸ್‌ ಮತ್ತು ಟಾಟಾ ಝಿಪ್‌ನ ಎಲ್ಲಾ ಅವತರಣಿಕೆಗಳ ಟ್ರಕ್‌ಗಳಿಗೂ ಇದು ಅನ್ವಯವಾಗಲಿದೆ ಎಂದು ಕಂಪನಿ ಹೇಳಿದೆ.

ಟ್ರಕ್‌ಗಳ ಇಂಧನ ಕ್ಷಮತೆ ಮತ್ತು ಎಂಜಿನ್‌ನ ಕಾರ್ಯಕ್ಷಮತೆಯನ್ನೂ ತಪಾಸಣೆ ಮಾಡಲಾಗುತ್ತದೆ. ವಾಹನವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳುವುದರ ಬಗ್ಗೆ ಚಾಲಕರು ಮತ್ತು ಮಾಲೀಕರಿಗೆ ಉಚಿತ ಸಲಹೆಗಳನ್ನು ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಈ ಶಿಬಿರದ ಬಗ್ಗೆ ಎಲ್ಲಾ ಸರ್ವಿಸ್‌ ಸೆಂಟರ್ ಮತ್ತು ಷೋರೂಂಗಳಲ್ಲಿ ಫಲಕಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಶಿಬಿರದ ಮೂಲಕ ಕನಿಷ್ಠ 30,000 ವಾಹನಗಳನ್ನು ತಪಾಸಣೆಗೆ ಒಳಪಡಿಸುವ ಗುರಿ ಇದೆ ಎಂದು ಕಂಪನಿ ಹೇಳಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT