ನವದೆಹಲಿ: ಟಾಟಾ ಮೋಟರ್ಸ್ ಕಂಪನಿಯು ವಿದ್ಯುತ್ ಚಾಲಿತ ಕಾಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್–ಇವಿ ಅನ್ನು ತಿಂಗಳ ಬಾಡಿಗೆ ಆಧಾರದ ಮೇಲೆ ಚಲಾಯಿಸುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಿದೆ.

ವಿದ್ಯುತ್ ಚಾಲಿತ ವಾಹನಗಳು ಜನರಿಗೆ ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ತಿಂಗಳಿಗೆ ನಿಶ್ಚಿತ ಬಾಡಿಗೆ ದರದ ಕೊಡುಗೆ ಪ್ರಕಟಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದಕ್ಕಾಗಿ ಓರಿಕ್ಸ್ ಆಟೊ ಮ್ಯಾನುಫ್ಯಾಕ್ಟರಿಂಗ್ ಸರ್ವೀಸಸ್ ಎನ್ನುವ ಗುತ್ತಿಗೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು, ಹೈದರಾಬಾದ್, ದೆಹಲಿ ರಾಜಧಾನಿ ಪ್ರದೇಶ, ಮುಂಬೈ ಮತ್ತು ಪುಣೆ ನಗರಗಳಲ್ಲಿ ಈ ಕೊಡುಗೆ ಲಭ್ಯವಿರಲಿದೆ.

‘ವಿದ್ಯುತ್ ಚಾಲಿತ ವಾಹನಗಳು ಉದ್ಯಮದ ಭವಿಷ್ಯವಾಗಿವೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ವಿಭಾಗದಲ್ಲಿ ಕಂಪನಿಯು ಮುಂಚೂಣಿಯಲ್ಲಿದ್ದು, ಇಂತಹ ವಾಹನಗಳ ಲಭ್ಯತೆ ಮತ್ತು ಬಳಕೆಯನ್ನು ಹೆಚ್ಚಿಸಲು ಬದ್ಧವಾಗಿದೆ’ ಎಂದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.

18 ತಿಂಗಳ ಅವಧಿಗೆ ಗ್ರಾಹಕರು ₹47,900ರ ತಿಂಗಳ ಚಂದಾದಾರಿಕೆ ಶುಲ್ಕ ನೀಡಬೇಕು. ಅಂತೆಯೇ 24 ತಿಂಗಳ ಅವಧಿಗೆ ₹ 44,900 ಹಾಗೂ 36 ತಿಂಗಳ ಅವಧಿಗೆ ₹41,900ರಂತೆ ಪ್ರತಿ ತಿಂಗಳು ಹಣ ಪಾವತಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.