ಮಂಗಳವಾರ, ಸೆಪ್ಟೆಂಬರ್ 21, 2021
28 °C

ಮುಂದಿನ ವಾರದಿಂದ ಪ್ರಯಾಣಿಕ ವಾಹನಗಳ ಬೆಲೆ ಏರಿಕೆ: ಟಾಟಾ ಮೋಟರ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯು ಮುಂದಿನ ವಾರದಿಂದ ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಿಸಲು ಮುಂದಾಗಿದೆ. ಉಕ್ಕು ಹಾಗೂ ಕೆಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವನ್ನು ಸರಿಹೊಂದಿಸಲು ಬೆಲೆ ಏರಿಕೆಗೆ ಮುಂದಾಗಿರುವುದಾಗಿ ಕಂಪನಿ ಹೇಳಿದೆ.

ಕಂಪನಿಯು ಟಿಯಾಗೊ, ನೆಕ್ಸಾನ್‌, ಹ್ಯಾರಿಯರ್‌ ಮತ್ತು ಸಫಾರಿಯಂತಹ ಪ್ರಯಾಣಿಕ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.

‘ಸರಕುಗಳ ಬೆಲೆ ಏರಿಕೆಯಿಂದ ಒಂದು ವರ್ಷದಲ್ಲಿ ನಮ್ಮ ವರಮಾನದ ಮೇಲೆ ಆಗಿರುವ ಪರಿಣಾಮವು ಶೇಕಡ 8ರಿಂದ ಶೇ 8.5ರಷ್ಟು’ ಎಂದು ಕಂಪನಿಯ ಪ್ರಯಾಣಿಕ ವಾಹನಗಳ ವಹಿವಾಟಿನ ಅಧ್ಯಕ್ಷ ಶೈಲೇಶ್‌ ಚಂದ್ರ ಹೇಳಿದ್ದಾರೆ.

ಕಂಪನಿಯು ಇಲ್ಲಿಯವರೆಗೆ ತಯಾರಿಕಾ ವೆಚ್ಚದಲ್ಲಿ ಆಗಿರುವ ಹೆಚ್ಚಳದ ಒಂದು ಸಣ್ಣ ಭಾಗವನ್ನು ಮಾತ್ರ ಗ್ರಾಹಕರಿಗೆ ರವಾನಿಸಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ಮಾದರಿಯ ವಾಹನಗಳ ಬೆಲೆ ಎಷ್ಟು ಏರಿಕೆ ಆಗಬಹುದು ಎನ್ನುವ ಕುರಿತು ಕಂಪನಿಯು ಲೆಕ್ಕಹಾಕುತ್ತಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು