ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೋಟ ಗ್ಲಾನ್ಸಾ, ಅರ್ಬನ್‌ ಕ್ರೂಸರ್‌: 1 ಲಕ್ಷಕ್ಕೂ ಅಧಿಕ ಮಾರಾಟ

Last Updated 29 ಜನವರಿ 2022, 10:08 IST
ಅಕ್ಷರ ಗಾತ್ರ

ಬೆಂಗಳೂರು: ಟೊಯೋಟ ಗ್ಲಾನ್ಸಾ ಮತ್ತು ಅರ್ಬನ್‌ ಕ್ರೂಸರ್‌ ಮಾದರಿಗಳ ಒಟ್ಟಾರೆ ಸಗಟು ಮಾರಾಟವು 1 ಲಕ್ಷವನ್ನು ದಾಟಿದೆ ಎಂದು ಕಂಪನಿಯು ಶನಿವಾರ ತಿಳಿಸಿದೆ.

ಗ್ಲಾನ್ಸಾ ಮತ್ತು ಕ್ರೂಸರ್‌ ಅನ್ನು ಕ್ರಮವಾಗಿ 2019ರ ಜೂನ್‌ ಮತ್ತು 2020ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದು, ಎರಡು ವಾಹನಗಳಿಗೂ ಗ್ರಾಹಕರಿಂದ ಉತ್ತಮ ಬೇಡಿಕೆ ಬಂದಿದೆ. ಗ್ಲಾನ್ಸಾ ಮಾರಾಟವು 65 ಸಾವಿರ ದಾಟಿದ್ದರೆ, ಕ್ರೂಸರ್‌ ಮಾರಾಟವು 35 ಸಾವಿರವನ್ನು ದಾಟಿದೆ. ಈ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಎರಡು ಮತ್ತು ಮೂರನೇ ಶ್ರೇಣಿಯ ಮಾರುಕಟ್ಟೆಗಳಿಂದ ಈ ವಾಹನಗಳಿಗೆ ಬೇಡಿಕೆ ಬಂದಿದೆ. ಕ್ಯು ಸರ್ವೀಸ್‌, ವಿಸ್ತರಿತ ವಾರಂಟಿ ಮತ್ತು ಸೇವಾ ಪ್ಯಾಕೇಜ್‌ಗಳಿಂತಹ ಮೌಲ್ಯವರ್ಧಿತ ಸೇವಾ ಕೊಡುಗೆಗಳಿಂದಾಗಿ ಈ ಮಾರಾಟವು ಸಾಧ್ಯವಾಗಿದೆ ಎಂದು ಹೇಳಿದೆ.

ಗ್ರಾಹಕರ ತೃಪ್ತಿಯನ್ನು ಖಚಿತಪಡಿಸಿಕೊಳ್ಳಲು ಟೊಯೋಟ ಕಂಪನಿಯ ಸದಾ ಅವಿರತ ಪ್ರಯತ್ನ ನಡೆಸುತ್ತಿರುತ್ತದೆ. ಅತ್ಯುತ್ತಮ ಮಾಲೀಕತ್ವದ ಅನುಭವ ಮತ್ತು ಮಾರಾಟದ ನಂತರದ ಸೇವೆಗಳಿಂದಾಗಿ ಈ ಮೈಲಿಗಲ್ಲು ಸಾಧ್ಯವಾಗಿದೆ. 2020 ರಲ್ಲಿ ಅಗಿದ್ದ ಮಾರಾಟಕ್ಕೆ ಹೋಲಿಸಿದರೆ ಗ್ಲಾನ್ಸಾ ಮಾರಾಟವು ಶೇ 25ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕಂಪನಿಯ ಸಹಾಯಕ ಉಪಾಧ್ಯಕ್ಷ ಅತುಲ್‌ ಸೂದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT