ಶನಿವಾರ, ಆಗಸ್ಟ್ 13, 2022
23 °C

ಯಮಹಾ ವರ್ಚುಯಲ್:  ಆನ್‍ಲೈನ್ ಮಾರಾಟ ಪ್ರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಮಹಾ ಕಂಪನಿಯು ವಾಹನಗಳನ್ನು ಖರೀದಿಸಲು ಗ್ರಾಹಕರಿಗೆ ಆನ್‌ಲೈನ್‌ ವೇದಿಕೆಯನ್ನು ಕಲ್ಪಿಸಿದೆ.

ವರ್ಚುಯಲ್‌ ಸ್ಟೋರ್‌ ಸಹಕಾರದೊಂದಿಗೆ ಯಮಹಾ ವೆಬ್‌ಸೈಟ್‌ ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲಿ ವಾಹನಗಳನ್ನು ಖರೀದಿ ಮಾಡಬಹುದು. ಈ ಸಾಲಿನಲ್ಲಿ 300ಕ್ಕೂ ಹೆಚ್ಚು ವಿತರಕರನ್ನುಒಳಗೊಳ್ಳುವ ಗುರಿ ಹೊಂದಿದೆ.

`ದಿ ಕಾಲ್ ಆಫ್ ದಿ ಬ್ಲೂ' ಅಭಿಯಾನದ ಭಾಗವಾಗಿ ಆನ್‍ಲೈನ್ ಮಾರಾಟ ಆರಂಭಿಸಲಾಗಿದೆ ಎಂದು ಯಮಹಾ ಮೋಟಾರ್‌ ಇಂಡಿಯಾ ಗ್ರೂಪ್ ಕಂಪೆನಿಯ ಅಧ್ಯಕ್ಷರಾದ ಮೊಟೊಫು ಮಿಶಿತಾರಾ ಹೇಳಿದ್ದಾರೆ.

ವರ್ಚುಯಲ್‌ ಸ್ಟೋರ್‌ ಹೊಂದಿರುವ ನಮ್ಮ ಹೊಸ ವೆಬ್‍ಸೈಟ್‌ ಉತ್ತಮ ಖರೀದಿಯ ಅನುಭವ ನೀಡಲಿದೆ. ಹಾಗೇ ಕಂಪನಿಯು ವೈಯಕ್ತಿಕ ಗ್ರಾಹಕ (ಒನ್ ಟು ಒನ್) ಸೇವೆಗಳನ್ನು ನೀಡಲು ಬದ್ಧವಾಗಿದೆ. ಭಾರತದ ದ್ವಿಚಕ್ರ ವಾಹನ ಗ್ರಾಹಕರಿಗೆ ಸುರಕ್ಷತೆ, ವಿಶ್ವಾಸಾರ್ಹ ಮತ್ತುಆಕರ್ಷಕ ಸೇವೆ ನೀಡುವುದು ನಮ್ಮ ಮುಖಖ್ಯ ಉದ್ದೇಶವಾಗಿದೆ ಎಂದರು. 

ಆನ್‌ಲೈನ್‌ ಖರೀದಿಯು ಡಿಜಿಟಲ್‌ ಇಂಡಿಯಾದ ಒಂದು ಭಾಗವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಹಕರು ಬಟ್ಟೆ, ದಿನಸಿ ಖರೀದಿಸುವಂತೆ ವಾಹನಗಳನ್ನು ಖರೀದಿ ಮಾಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗೆ:  https://shop.yamaha-motor-india.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು