ಬಾಲ್ಕನಿ ಹೀರೊ

ಮಂಗಳವಾರ, ಮಾರ್ಚ್ 26, 2019
31 °C

ಬಾಲ್ಕನಿ ಹೀರೊ

Published:
Updated:
Prajavani

ಸಿನಿಮಾ ನಾಯಕ ನಟ, ನಟಿಯರು ಬಹುಬೇಗ ಜನಪ್ರಿಯರಾಗುತ್ತಾರೆ. ಆದರೆ, ತೆರೆಮರೆಯಲ್ಲಿರುವ ಎಷ್ಟೋ ಸಾಧಕರು ಸಾರ್ವಜನಿಕವಾಗಿ ಪರಿಚಯವಾಗುವುದಿಲ್ಲ. ಅಂಥ ಸಾಧನೆ ಮಾಡುತ್ತಾ ತೆರೆಮರೆಯಲ್ಲೇ ಉಳಿದಿರುವ ಸಾಧಕರನ್ನು ಜನರ ಬಳಿ ಕೊಂಡೊಯ್ಯುವುದೇ ‘ಬಾಲ್ಕನಿ ಹೀರೊ’ ಕಾರ್ಯಕ್ರಮ.

ಡಾ. ಕಿರಣ್ ಹೆಬ್ಬಾಲೆ ಎಂಬ ಯುವಕ ‘ಬಾಲ್ಕನಿ ಯೂಟ್ಯೂಬ್‌ ಚಾನೆಲ್‌’ ಮೂಲಕ ಬಾಲ್ಕನಿ ಹೀರೊ ಎಂಬ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಚಾರಕ್ಕೆ ಬಾರದ, ತೆರೆಮರೆಯಲ್ಲಿದ್ದೇ ಸೇವೆ – ಸಾಧನೆ ಮಾಡುತ್ತಿರುವ, ದೇಶದ ಕೀರ್ತಿಪತಾಕೆ ಹಾರಿಸುತ್ತಿರುವವರ ಯಶೋಗಾಥೆಯನ್ನು ಪ್ರಸಾರ ಮಾಡುತ್ತಿದ್ದಾರೆ. ಇದು ಪ್ರತಿ ಸೋಮವಾರ ಸಂಜೆ 4 ಗಂಟೆಗೆ ಇದು ಪ್ರಸಾರವಾಗುತ್ತಿದೆ. ಪರಿಕಲ್ಪನೆ ಹಾಗೂ ನಿರೂಪಣೆ ಜವಾಬ್ದಾರಿಯನ್ನು ಕಿರಣ್ ಅವರೇ ವಹಿಸಿಕೊಂಡಿದ್ದಾರೆ.

ಈಗಾಗಲೇ ’Share a smile’ ನ ಸಮೀರ್ ಹಸ್ಸನ್, ನೃತ್ಯ ಕ್ಷೇತ್ರದ ಸಾಧಕಿ ಲಕ್ಷ್ಮಿ ರೇಖಾ ಅರುಣ್, ಭಾರತದ ಮೊದಲ ಟ್ರ್ಯಾನ್ಸ್ಜೆಂಡರ್ ಕನ್ನಡ ರೇಡಿಯೊ ಜಾಕಿ ಪ್ರಿಯಾಂಕಾ, ಮೈಂಡ್ ಕೋಚ್ ಅರ್ಜುನ್ ಗೌತಮ್, ಐಪಿಎಸ್ ಅಧಿಕಾರಿ ರೂಪ, ಎರಡು ಕೈಗಳನ್ನು ಕಳೆದುಕೊಂಡು ಕ್ರೀಡೆ ಹಾಗೂ ಐಟಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಯಂತ್ ಜೀವಿತ್ ಅವರ ಸಂಚಿಕೆಗಳು ಪ್ರಸಾರವಾಗಿವೆ. ‘ಇನ್ನು ಹೆಚ್ಚು ತೆರೆಮರೆಯ ಸಾಧಕರು ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಜನರ ಬಳಿಗೆ ಕೊಂಡೊಯ್ಯವ ಗುರಿ’ ಇದೆ ಎನ್ನುತ್ತಾರೆ ಕಿರಣ್.

ಅಂದ ಹಾಗೆ ಬಾಲ್ಕನಿ ನ್ಯೂಸ್ ಸಂಸ್ಥೆ ಒಂದು ಮನರಂಜನಾ ಜಾಲತಾಣ. ಇಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಸಿನಿಮಾ ಬಗೆಗಿನ ಮಾಹಿತಿಗಳು ಹಾಗೂ ಪ್ರಚಾರ ಕಾರ್ಯವೂ ನಡೆಯುತ್ತದೆ. ಅದರ ಮುಂದುವರಿದ ಭಾಗವೇ ‘ಬಾಲ್ಕನಿ ಹೀರೊ’ ಎಂಬ ವಿನೂತನ ಕಾರ್ಯಕ್ರಮ. ‘ನಮ್ಮಲ್ಲಿ  ಕಿರುತೆರೆ, ಹಿರಿತೆರೆ, ರಂಗಭೂಮಿ, ಕಲಾ ಪ್ರದರ್ಶನಗಳು, ಸಂದರ್ಶನಗಳು ಸೇರಿದಂತೆ ಸಿನಿಮಾ ಮತ್ತು ರಂಗಭೂಮಿ ಬಗೆಗಿನ ಬರಹಗಳು ಇಲ್ಲಿ ಪ್ರಕಟಗೊಳ್ಳುತ್ತವೆ. ಹಾಗೆಯೇ ಪ್ರಚಾರಕ್ಕೆ ಬಾರದೇ ಸಾಧನೆ ಮಾಡುತ್ತಿರುವ ಸಾಧಕರನ್ನು ಬಾಲ್ಕನಿ ಹೀರೊ ಮೂಲಕ ಜನರಿಗೆ ಪರಿಚಯಿಸುತ್ತಿದ್ದೇವೆ’ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರಾದ ಮೆಲ್ವಿನ್, ಭಾಸ್ಕರ್ ಹಾಗೂ ರಾಜಶೇಖರ್ ,ವಿನಯ್.

**

ಇಲ್ಲಿವರೆಗೂ ಪ್ರಸಾರವಾಗಿರುವ ಸಾಧಕರ ಪರಿಚಯದ ವಿಡಿಯೊ ಲಿಂಕ್ ಇಲ್ಲಿದೆ.

https://www.youtube.com/watch?v=DWMtgmKcGiI

https://www.youtube.com/watch?v=ID8lnf5dcV0&t=20s

https://www.youtube.com/watch?v=mGofBciY_fc&t=174s

https://www.youtube.com/watch?v=LU-73Tg-SFI

https://www.youtube.com/watch?v=LNUsP2FAsII&t=32s

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !